ಕೆಎಸ್‌ಸಿಎ ಅಂತರ್ ಶಾಲಾ ಕ್ರಿಕೆಟ್: ಕಾಪು ದಂಡತೀರ್ಥ ಹೈಸ್ಕೂಲ್ ಚಾಂಪಿಯನ್

Update: 2018-11-14 16:20 GMT

ಮಣಿಪಾಲ, ನ.14: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಆಶ್ರಯದಲ್ಲಿ ನಡೆದ ಅಂತರ್‌ಶಾಲಾ ಕ್ರಿಕೆಟ್ ಪಂದ್ಯಾಟದ ಅಂತಿಮ ಪಂದ್ಯದಲ್ಲಿ ಬ್ರಹ್ಮಾವರದ ಎಸ್.ಎಂ.ಎಸ್. ಶಾಲಾ ತಂಡವನ್ನು ಐದು ವಿಕೆಟ್‌ಗಳ ಅಂತರದಿಂದ ಸೋಲಿಸಿದ ಕಾಪು ದಂಡತೀರ್ಥ ಶಾಲಾ ತಂಡ ಪ್ರಶಸ್ತಿಯನ್ನು ಗೆದ್ದುಕೊಂಡಿತು.

ಮಣಿಪಾಲ ಮಾಹೆಯ ಕ್ರಿಕೆಟ್ ಮೈದಾನದಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಎಸ್‌ಎಂಎಸ್ ಶಾಲಾ ತಂಡ 34 ಓವರುಗಳ ಆಟದಲ್ಲಿ 74 ರನ್‌ಗಳಿಗೆ ಆಲೌಟಾಯಿತು. ಉತ್ತರವಾಗಿ ದಂಡತೀರ್ಥ ತಂಡ, ಕಾರ್ತಿಕ್ ಅವರ 37 ರನ್‌ಗಳ ನೆರವಿನಿಂದ 5 ವಿಕೆಟ್ ಕಳೆದುಕೊಂಡು 19ನೇ ಓವರಿನಲ್ಲಿ ವಿಜಯದ ಮೊತ್ತ ದಾಖಲಿಸಿತು.

ದಂಡತೀರ್ಥ ಶಾಲೆಯ ವಿಕಾಸ್ ಉತ್ತಮ ಬ್ಯಾಟ್ಸ್‌ಮನ್, ಎಸ್‌ಎಂಎಸ್ ಶಾಲೆಯ ಶಿವರಾಜ್ ಉತ್ತಮ ಬೌಲರ್ ಪ್ರಶಸ್ತಿಯನ್ನು ಪಡೆದರು. ಅಂತರ್ ಶಾಲಾ ಮತ್ತು ಅಂತರ್ ಪಿಯು ಪಂದ್ಯಾಟಗಳ ಪ್ರಶಸ್ತಿಗಳನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಮಂಗಳೂರು ವಲಯದ ಚಯರ್‌ಮ್ಯಾನ್ ರತನ್ ಕುಮಾರ್ ವಿತರಿಸಿದರು. ಕೆಎಸ್‌ಸಿಎ ಉಡುಪಿ ಜಿಲ್ಲಾ ಸಂಯೋಜಕ ಬಾಲಕೃಷ್ಣ ಪರ್ಕಳ, ಗುರುರಾಜ್, ಇಬ್ರಾಹಿಂ ಆತ್ರಾಡಿ ಮೊದಲಾದವರು ಉಪಸ್ಥಿತರಿದ್ದರು. ಶಿವನಾರಾಯಣ ಐತಾಳ ಕೋಟ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News