×
Ad

ಕಳವು, ದರೋಡೆ ಆರೋಪ: ಅಲೆಮಾರಿ ಮಹಿಳೆಯರ ತಂಡ ಸೆರೆ

Update: 2018-11-14 23:02 IST

ಉಪ್ಪಿನಂಗಡಿ, ನ. 14: ಶ್ರೀಮಂತರ ಮನೆಗೆ ಕೆಲಸ ಕೇಳಿಕೊಂಡು ಬಂದು, ಒಂಟಿ ಪುರುಷರ ಮನೆಗೆ ವಿವಿಧ ಕಾರಣಗಳನ್ನು ಮುಂದಿರಿಸಿ ಪ್ರವೇಶಿಸಿ ಮನೆ ವ್ಯಕ್ತಿಯನ್ನು ಏಮಾರಿಸಿ ನಗ-ನಗದು ದೋಚುವ ಅಲೆಮಾರಿ ಮಹಿಳೆಯರ ತಂಡವೊಂದನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದು, ಬಂಧಿತರಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಹಡಗಲಿ ಬೌವನೂರು ಗ್ರಾಮದ ಹನುಮಂತ ಗುಡಿಯ ಪಕ್ಕದ ನಿವಾಸಿಗಳಾದ ದೇವಮ್ಮ (19), ನಾಗಮ್ಮ ಅಲಿಯಾಸ್ ರೂಪ (18) , ಗೀತಾ (24) ಬಂಧಿತ ಆರೋಪಿಗಳು.

ಬಂಧಿತರಿಂದ ಕಳ್ಳತನ ಮಾಡಿದ 1 ಚಿನ್ನದ ರೋಪ್ ಚೈನ್, ನಾಲ್ಕು ಚಿನ್ನದುಂಗುರ, 3 ಚಿನ್ನದ ಕಡಗ, 2 ಬೆಲೆಬಾಳುವ ಮೊಬೈಲ್ ಪೋನ್, 3 ಬ್ಯಾಗ್ ಹಾಗೂ ಬಟ್ಟೆಬರೆಗಳನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಚಿನ್ನಾಭರಣ ಹಾಗೂ ಸೊತ್ತುಗಳ ಒಟ್ಟು ಮೌಲ್ಯ 4,39,680 ರೂ. ಎಂದು ಅಂದಾಜಿಸಲಾಗಿದೆ. ಈ ಚಿನ್ನಾಭರಣಗಳನ್ನು ವಾರದ ಹಿಂದೆ ಮಂಗಳೂರಿನ ಬಜಾಲ್‍ನ ಮನೆಯೊಂದರಿಂದ ಕಳವುಗೈಯಲಾಗಿತ್ತು ಎಂದು ತಿಳಿದು ಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News