ಅಂತರಾಜ್ಯ ವಾಹನ ಕಳ್ಳತನ ಪ್ರಕರಣ: ಮೂವರು ಆರೋಪಿಗಳ ಬಂಧನ

Update: 2018-11-14 17:36 GMT

ಮಂಗಳೂರು, ನ.14: ಅಂತರ್ ರಾಜ್ಯ ಮೋಟಾರ್ ವಾಹನ ಕಳ್ಳತನದ 15 ಪ್ರಕರಣಗಳನ್ನು ಭೇದಿಸಿ 3 ಜನ ಆರೋಪಿಗಳನ್ನು ಹಾಗೂ 20 ಲಕ್ಷ ರೂ. ಮೌಲ್ಯದ 15 ದ್ವಿಚಕ್ರ ವಾಹನಗಳನ್ನು ಸ್ವಾಧೀನಪಡಿಸಿಕೊಳ್ಳುವಲ್ಲಿ ಉಳ್ಳಾಲ ಪೊಲೀಸ್ ಠಾಣೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಕೇರಳದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ನಿವಾಸಿ ಶಾಹಿರ್ (23), ಉಪ್ಪಳ ನಿವಾಸಿ ಮುಹಮ್ಮದ್ ಆದಿಲ್ (26), ಕಾಸರಗೋಡಿನ ಅಬ್ದುಲ್ ಮುನವ್ವರ್ (21) ಬಂಧಿತ ಆರೋಪಿಗಳು.

ಆರೋಪಿಗಳನ್ನು ತನಿಖೆಗೆ ಒಳಪಡಿಸಿದಾಗ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಗಳಿಂದ ಬುಲೆಟ್ ಸೇರಿದಂತೆ ಒಟ್ಟು 15 ದ್ವಿಚಕ್ರ ವಾಹನಗಳನ್ನು ಕಳ್ಳತನ ನಡೆಸಿರುವುದು ತಿಳಿದುಬಂದಿದೆ.

ಉಳ್ಳಾಲ ಠಾಣೆ ವ್ಯಾಪ್ತಿಯ 4 ಪ್ರಕರಣಗಳಲ್ಲಿ ಒಟ್ಟು 4 ಬುಲೆಟ್ ಬೈಕ್‌ಗಳು, ಮಂಗಳೂರು ದಕ್ಷಿಣ ಪೊಲೀಸ್ ಠಾಣೆ ವ್ಯಾಪ್ತಿಯಲ 6 ಪ್ರಕರಣಗಳಲ್ಲಿ ಒಟ್ಟು 5 ಬುಲೆಟ್ ಬೈಕ್‌ಗಳು ಮತ್ತು 1 ಸ್ಕೂಟರ್, ಮಂಗಳೂರು ಉತ್ತರ ಪೊಲೀಸ್ ಠಾಣಾ ವ್ಯಾಪ್ತಿ 2 ಪ್ರಕರಣಗಳಲ್ಲಿ 1 ಬುಲೆಟ್ ಬೈಕ್ ಮತ್ತು 1 ಮೋಟಾರು ಸೈಕಲ್, ಮಂಗಳೂರು ಉರ್ವ ಪೊಲೀಸ್ ಠಾಣಾ ವ್ಯಾಪ್ತಿ 2 ಪ್ರಕರಣಗಳಲ್ಲಿ ಒಟ್ಟು 2 ಬುಲೆಟ್ ಬೈಕ್, ಮಂಗಳೂರು ಪೂರ್ವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಂದು ಬೈಕ್‌ಗಳನ್ನು ಕಳವು ಮಾಡಲಾಗಿತ್ತು. ಪ್ರಕರಣದ ಆರೋಪಿಗಳು ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಒಟ್ಟು 15 ಬೈಕ್‌ಗಳನ್ನು ಕಳವುಗೈದಿದ್ದರು. ವಶಕ್ಕೆ ಪಡೆದಿರುವ ವಾಹನಗಳ ಮೌಲ್ಯ 20 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News