ಹುಬ್ಬುರ್ರಸೂಲ್ ಸ್ವಾಗತ ಸಮಿತಿ: ಚೇರ್‌ ಮ್ಯಾನ್ ಆಗಿ ಅಬ್ದುರ್ರವೂಫ್ ಪುತ್ತಿಗೆ ಆಯ್ಕೆ

Update: 2018-11-14 17:49 GMT

ಮಂಗಳೂರು, ನ.14: ಕರ್ನಾಟಕ ಇಸ್ಲಾಮಿಕ್ ಸಾಹಿತ್ಯ ಅಕಾಡಮಿ ಕಿಸಾ ಪ್ರತೀ ತಿಂಗಳು ಹೊರತರುತ್ತಿರುವ ಸುನ್ನೀ ಸಂದೇಶ ಮಾಸ ಪತ್ರಿಕೆಯ 17ನೇ ವಾರ್ಷಿಕ ಪ್ರಯುಕ್ತ ಮಂಗಳೂರು ನೆಹರೂ ಮೈದಾನದಲ್ಲಿ ಡಿ.1ರಂದು ನಡೆಯುವ ಹುಬ್ಬುರ್ರಸೂಲ್ ಪ್ರಭಾಷಣದ ಸ್ವಾಗತ ಸಮಿತಿಯ ಚೇರ್‌ ಮ್ಯಾನ್ ಆಗಿ ಅಬ್ದುರ್ರವೂಫ್ ಪುತ್ತಿಗೆ ಆಯ್ಕೆಯಾಗಿದ್ದಾರೆ.

ಸಲಹೆಗಾರರಾಗಿ ಮೌಲಾನ ಕೆ.ಎಸ್. ಹೈದರ್ ದಾರಿಮಿ, ಗೌರವಾಧ್ಯಕ್ಷರಾಗಿ ಆಝಾದ್ ಮನ್ಸೂರ್ ಹಾಜಿ ಮಂಗಳೂರು, ವೈಸ್‌ ಚೇರ್‌ ಮ್ಯಾನ್ ಆಗಿ ಮುಸ್ತಫಾ ಹಾಜಿ ಬಿಲ್ಡರ್, ಸಿತಾರ್, ಅಬ್ದುಲ್ ಮಜೀದ್‌ ಹಾಜಿ, ಕಣ್ಣೂರ್ ಇಬ್ರಾಹಿಂ ಹಾಜಿ, ಮದೀನ ಜನರಲ್ ಕನ್ವೀನರಾಗಿ ನೌಶಾದ್ ಹಾಜಿ ಸೂರಲ್ಪಾಡಿ, ವರ್ಕಿಂಗ್ ಕನ್ವೀನರಾಗಿ ಮುಸ್ತಫಾ ಫೈಝಿ ಕಿನ್ಯ, ಕನ್ವೀನರಾಗಿ ರಿಯಾಝ್ ಕಣ್ಣೂರ್, ಮುಸ್ತಫಾ ಇಂಜಿನಿಯರ್, ಅಬ್ದುಲ್ಲಾ ಹಾಜಿ ಎಂ.ಎ. ಆಯ್ಕೆಯಾದರು.

ಕೋಶಾಧಿಕಾರಿಯಾಗಿ ಅಲ್ ಮುಝೈನ್ ಗ್ರೂಪ್‌ನ ಝಕರಿಯಾ ಹಾಜಿ, ಪ್ರಚಾರ ಸಮಿತಿ ಚೇರ್‌ ಮ್ಯಾನ್ ಆಗಿ ಕೆ.ಎಲ್. ಉಮರ್ ದಾರಿಮಿ, ಕನ್ವೀನರಾಗಿ ಕುಕ್ಕಿಲ ಅಬ್ದುಲ್ ಖಾದರ್ ದಾರಿಮಿ, ಸಂಚಾಲಕರಾಗಿ ಸಿದ್ದೀಖ್ ಫೈಝಿ ಕರಾಯ, ಹಮೀದ್ ಕಣ್ಣೂರ್, ಇಮ್ರಾನ್ ಅಡ್ಡೂರ್, ರಫೀಖ್ ಮಾಸ್ಟರ್, ಹಸನ್ ಬೆಂಗರೆ ಹಾಗೂ 313 ಸದಸ್ಯರನ್ನು ಒಳಗೊಂಡ ಸ್ವಾಗತ ಸಮಿತಿ ರಚಿಸಲಾಗಿದೆ ಎಂದು ಮುಸ್ತಫಾ ಫೈಝಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News