ಶಮ್ಸ್ ಮೊಂಟೆಸ್ಸರಿ ಶಾಲೆಯಲ್ಲಿ ಮಕ್ಕಳ ದಿನಾಚರಣೆ

Update: 2018-11-15 12:11 GMT

ಭಟ್ಕಳ,ನ.15: ಇಲ್ಲಿನ  ಹೆಬಳೆ ಪಂಚಾಯತ್ ವ್ಯಾಪ್ತಿಯ ತರಬಿಯತ್ ಎಜ್ಯುಕೇಶನ್ ಸೂಸೈಟಿಯ  ನ್ಯೂ ಶಮ್ಸ್ ಮೊಂಟೆಸ್ಸರಿ ಶಾಲೆಯ ವಿದ್ಯಾರ್ಥಿಗಳು ಮಕ್ಕಳ ದಿನಾಚರಣೆಯ ಅಂಗವಾಗಿ ಗುರುವಾರ ಚಾಚಾ ನೆಹರೂ ಅವರ ದಿರಸಿನಲ್ಲಿ ಕಾಣಿಸಿಕೊಂಡು ನೋಡುಗರನ್ನು ಹುಬ್ಬೇರಿಸುವಂತೆ ಮಾಡಿದರು. 

ವಿದ್ಯಾರ್ಥಿಗಳ ನೆಹರೂ ಟೋಪಿ, ನೆಹರು ಕುರ್ತಾ ಧರಿಸಿ ಶಾಲೆಗೆ ಬಂದಿದ್ದು ಎಲ್ಲರನ್ನು ಆಕರ್ಷಿಸಿದರು. 

ಮಕ್ಕಳದಿನಾರಣೆಯನ್ನು ಮಕ್ಕಳ ಹಬ್ಬವನ್ನಾಗಿ ಆಚರಿಸಿದ್ದು ನ್ಯೂ ಶಮ್ಸ್ ಸ್ಕೂಲ್ ನ 7ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಲಾಗಿತ್ತು. ವಿದ್ಯಾರ್ಥಿಗಳು ತಯಾರಿಸಿದ ಹ್ಯಾಂಡ್ ಕ್ರಾಫ್ಟ್ ,ಚಿತ್ರಕಲೆ, ಮಾಡಲ್ಸ್ ಗಳ ಮಾರಾಟ ಮತ್ತು ಪ್ರದರ್ಶನ ಏರ್ಪಡಿಸಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ  ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಮೌಲಾನ ಅಝೀಝುರ್ರಹ್ಮಾನ್ ರುಕ್ನುದ್ದೀನ್, ವಿದ್ಯಾರ್ಥಿಗಳಿಗೆ ಪಟ್ಯೇತರ ಚಟುವಟಿಕೆಗಳಲ್ಲಿ ಹೆಚ್ಚಿನ ಆಸಕ್ತಿಯಿದ್ದು ಉತ್ತಮ ಪ್ರದರ್ಶನ ಮಾಡಿದ್ದಾರೆ ಎಂದರು. ಕಾರ್ಯದರ್ಶಿ ತಲ್ಹಾ ಸಿದ್ದಿಬಾಪ ಮಾತನಾಡಿ, ಇಂತಹ ಕಾರ್ಯಕ್ರಮಗಳಿಂದಾಗಿ ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಆಸಕ್ತಿಯುಂಟಾಗಿ ಉತ್ತಮ ಅಂಕಗಳಿಕೆಗೆ ಸಾಧ್ಯವಾಗುತ್ತದೆ ಎಂದರು. 

ಈ ಸಂದರ್ಭದಲ್ಲಿ ನ್ಯೂ ಶಮ್ಸ್ ಸ್ಕೂಲ್‍ನ ಪ್ರಾಂಶುಪಾಲೆ ಫಹಮಿದಾ ಮುಲ್ಲಾ,  ಶಮ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಎಂ.ಆರ್.ಮಾನ್ವಿ, ಶಿಕ್ಷಕರಾದ ಮಹೇಶ್ ನಾಯ್ಕ, ಅಬ್ದುಸ್ಸುಭಾನ್ ನದ್ವಿ, ಅಬ್ದುಲ್ಲಾ ಖಲಿಫಾ ನದ್ವಿ, ಮಂಜುನಾಥ್ ಹೆಬ್ಬಾರ್ ಶಾಝಿರ್ ಹುಸೇನ್ ಸೇರಿದಂತೆ ವಿದ್ಯಾರ್ಥಿಗಳು ಪಾಲಕರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News