‘ಪ್ರವಾದಿ ಮುಹಮ್ಮದ್ ಮಾನವ ಕುಲದ ಶ್ರೇಷ್ಠ ಮಾರ್ಗದರ್ಶಕ’ ಪುಸ್ತಕ ಲೋಕಾರ್ಪಣೆ

Update: 2018-11-15 15:12 GMT

ಮಂಗಳೂರು, ನ.15: ‘ಪ್ರವಾದಿ ಮುಹಮ್ಮದ್ ಮಾನವ ಕುಲದ ಶ್ರೇಷ್ಠ ಮಾರ್ಗದರ್ಶಕ’ ಎಂಬ ಲೇಖನಗಳ ಸಂಕಲನವನ್ನು ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್‌ಕುಮಾರ್ ಕಲ್ಕೂರ ಲೋಕಾರ್ಪಣೆಗೊಳಿಸಿದರೆ, ‘ಪ್ರವಾದಿ ಮುಹಮ್ಮದ್ ಮಾನವ ಕುಲದ ಶ್ರೇಷ್ಠ ಮಾರ್ಗದರ್ಶಕ’ ಎಂಬ ಚಿಂತಕರ ಅಭಿಪ್ರಾಯಗಳ ಸಂಗ್ರಹ ಪುಸ್ತಕವನ್ನು ಪ್ರೊ.ಎ.ವಿ.ನಾವಡ ನೇತೃತ್ವದಲ್ಲಿ ಲೋಕಾರ್ಪಣೆಗೊಳಿಸಲಾಯಿತು.

ನಗರದ ಖಾಸಗಿ ಹೊಟೇಲ್‌ನಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಪ್ರವಾದಿ ಮುಹಮ್ಮದ್‌ರ ಪುಸ್ತಕ ಲೋಕಾರ್ಪಣೆಗೊಳಿಸಿ ಮಾತನಾಡಿದ ಪ್ರದೀಪ್ ಕುಮಾರ್ ಕಲ್ಕೂರ, ಸರ್ವಶ್ರೇಷ್ಠ ಮಹಾಪುರುಷರ ಆಶಯಗಳು ದೇವರನ್ನು ಸೇರುವುದಾಗಿದೆ. ಆರೋಗ್ಯಯುತ ಸಮಾಜ ಚಿಂತನ- ಮಂಥನ ಮಾಡುವ ಮೂಲಕ ಸಂಸ್ಕೃತಿಯನ್ನು ಉಳಿಸಿ, ಬೆಳೆಸಬಹುದಾಗಿದೆ ಎಂದರು.

ಜಾನಪದ ವಿದ್ವಾಂದ ಪ್ರೊ.ಎ.ವಿ.ನಾವಡ ಮಾತನಾಡಿ, ಇಂದಿನ ದಿನಗಳಲ್ಲಿ ಮಾನವರಲ್ಲಿ ಸಂಕುಚಿತ ಮನೋಭಾವ ಹೆಚ್ಚುತ್ತಿದೆ. ಪ್ರವಾದಿ ಮುಹಮ್ಮದ್‌ರ ಚಿಂತನೆಗಳು, ಅವರ ಆಶಯಗಳನ್ನು ಪಾಲಿಸುವ ಅಗತ್ಯವಿದೆ. ಪುಸ್ತಕದ ವಿನ್ಯಾಸ, ನಿರೂಪಣೆ, ಭಾಷೆಯ ಬಳಕೆ ಅತ್ಯುತ್ತಮವಾಗಿದೆ. ಪುಸ್ತಕದಲ್ಲಿ ಯಾವುದೇ ವಿಷಯವನ್ನು ನೇರವಾಗಿ ತಿಳಿಸಲಾಗಿದೆ. ಎಲ್ಲ ಧರ್ಮದವರಿಗೂ ಈ ಪುಸ್ತಕಗಳು ತಲುಪಬೇಕು ಎಂದು ಹೇಳಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News