ಲೈಂಗಿಕ ಕಿರುಕುಳ ದೂರು: ಒಟಿಪಿಸಿಯ ಐವರು ಅಧಿಕಾರಿಗಳಿಗೆ ಕಡ್ಡಾಯ ರಜೆ

Update: 2018-11-15 16:34 GMT

ಅಗರ್ತಲಾ,ನ.15: ಕಂಪನಿಯ ಮಾಜಿ ಮಹಿಳಾ ಉದ್ಯೋಗಿಯ ಲೈಂಗಿಕ ಕಿರುಕುಳ ದೂರನ್ನು ಅನುಸರಿಸಿ ಒಎನ್‌ಜಿಸಿ ತ್ರಿಪುರಾ ವಿದ್ಯುತ್ ಕಂಪನಿ(ಒಟಿಪಿಸಿ)ಯ ಉಪಾಧ್ಯಕ್ಷ ಸೇರಿದಂತೆ ಐವರು ಹಿರಿಯ ಅಧಿಕಾರಿಗಳನ್ನು ಕಡ್ಡಾಯ ರಜೆಯಲ್ಲಿ ಕಳುಹಿಸಲಾಗಿದೆ.

ಮಹಿಳಾ ಕಾರ್ಯ ನಿರ್ವಹಣಾಧಿಕಾರಿಯೋರ್ವರ ನೇತೃತ್ವದ ಐವರು ಸದಸ್ಯರ ಉನ್ನತ ಮಟ್ಟದ ಸಮಿತಿಯು ದೂರನ್ನು ಪರಿಶೀಲಿಸುತ್ತಿದೆ ಎಂದು ಕಂಪನಿಯ ಅಧಿಕಾರಿಯೋರ್ವರು ತಿಳಿಸಿದರು.

ಗೋಮತಿ ಜಿಲ್ಲೆಯ ಪಲಟನಾದಲ್ಲಿರುವ 726 ಮೆ.ವ್ಯಾ. ಸಾಮರ್ಥ್ಯದ ಒಟಿಪಿಸಿ ಉಷ್ಣ ವಿದ್ಯುತ್ ಸ್ಥಾವರವು ಈಶಾನ್ಯ ಭಾರತ ಮತ್ತು ನೆರೆಯ ಬಾಂಗ್ಲಾದೇಶದ ವಿದ್ಯುತ್ ಅಗತ್ಯಗಳನ್ನು ಪೂರೈಸುತ್ತಿದೆ.

2013-2016ರ ಅವಧಿಯಲ್ಲಿ ಒಟಿಪಿಸಿಯಲ್ಲಿ ಸೇವೆ ಸಲ್ಲಿಸಿ ಬಳಿಕ ಸ್ವಯಂ ನಿವೃತ್ತಿಯನ್ನು ಪಡೆದುಕೊಂಡಿದ್ದ ಮಹಿಳಾ ಉದ್ಯೋಗಿ ನ.3ರಂದು ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ತನ್ನ ದೂರನ್ನು ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News