ನ.16ರಂದು ಪೊಲೀಸ್ ನೇರ ಫೋನ್‌ಇನ್ ಕಾರ್ಯಕ್ರಮ

Update: 2018-11-15 17:01 GMT

ಉಡುಪಿ, ನ.15: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ ಅವರು ನಾಳೆ (ನ.16) ಶುಕ್ರವಾರ ಉಡುಪಿ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ನೇರ ಫೋನ್-ಇನ್ ಕಾರ್ಯಕ್ರಮವನ್ನು ನಡೆಸಲಿದ್ದಾರೆ.

ಸಾರ್ವಜನಿಕರು ನೇರ ಫೋನ್ ಇನ್ ಕಾರ್ಯಕ್ರಮಕ್ಕೆ ಕರೆ ಮಾಡಿ ತಮ್ಮ ಅಹವಾಲುಗಳನ್ನು ಹೇಳಿಕೊಳ್ಳಬಹುದಾಗಿದೆ. ಪೊಲೀಸ್ ಇಲಾಖಾ ಕರ್ತವ್ಯಕ್ಕೆ ಸಂಬಂಧಿಸಿದಂತೆ ದೂರು, ಸಲಹೆಗಳನ್ನು, ತಮ್ಮ ವ್ಯಾಪ್ತಿಯಲ್ಲಿ ಅಕ್ರಮ ಚಟುವಟಿಕೆಗಳೇನಾದರೂ ನಡೆಯುತಿದ್ದಲ್ಲಿ ಮಾಹಿತಿಗಳನ್ನು ನೀಡಬಹುದು. ನೇರ ಫೋನ್ ಇನ್ ಕಾರ್ಯಕ್ರಮಕ್ಕೆ ಕರೆ ಮಾಡಿದವರ ವಿವರಗಳನ್ನು ಗುಪ್ತವಾಗಿ ಇಡಲಾಗುವುದು.

ಆಸಕ್ತರು ನಾಳೆ ಬೆಳಗ್ಗೆ 10:00ರಿಂದ 11:00ಗಂಟೆಯವರೆಗೆ ಸ್ಥಿರ ದೂರವಾಣಿ ಸಂಖ್ಯೆ 0820-2534777ಗೆ ಕರೆ ಮಾಡಿ ತಮ್ಮ ಅಹವಾಲು ಹೇಳಿಕೊಳ್ಳಬಹುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News