​ನ.17: ಅಲ್ ಕಲಮ್ ಫೆಸ್ಟ್

Update: 2018-11-15 17:51 GMT

ಮಂಗಳೂರು, ನ.15: ನಗರದ ಅಲ್ ಕಲಮ್ ಅರಬಿಕ್ ಅಕಾಡಮಿ ವತಿಯಿಂದ ನ.17ರಂದು ಬೆಳಗ್ಗೆ 10ರಿಂದ ರಾತ್ರಿ 7:30ರವರೆಗೆ ಬೋಳಾರದ ಶಾದಿಮಹಲ್‌ನಲ್ಲಿ ‘ಅಲ್ ಕಲಮ್ ಫೆಸ್ಟ್’ ನಡೆಯಲಿದೆ.

ಎಲ್ಲಾ ಧರ್ಮದ ಮಹಿಳೆಯರಿಗಾಗಿ ಮಹಿಳೆಯರೇ ನಡೆಸುವ ಈ ಫೆಸ್ಟ್‌ನಲ್ಲಿ ಆಹಾರ, ಆಟೋಟ ಸ್ಪರ್ಧೆ, ಶಾಪಿಂಗ್ ಮತ್ತಿತರ ಚಟುವಟಿಕೆಗಳಿವೆ. ಈ ಫೆಸ್ಟ್‌ನಿಂದ ಬರುವ ಲಾಭವನ್ನು ಅನಾಥ ಹಾಗೂ ಆರ್ಥಿಕವಾಗಿ ಹಿಂದುಳಿದ ಹೆಣ್ಮಕ್ಕಳ ಅಧ್ಯಯನ, ವಸತಿ, ಆಹಾರ ಇತ್ಯಾದಿಗಳಿಗೆ ಬಳಸಿಕೊಳ್ಳಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News