​ಅಂತರ್ ಶಾಲಾ ಪ್ರಬಂಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ

Update: 2018-11-15 17:54 GMT

ಮಂಗಳೂರು, ನ.15: ರೋಟರಿ ಮಂಗಳೂರು ಸಿಟಿ ಸಂಸ್ಥೆಯು ಯುವಜನ ಸೇವಾ ಯೋಜನೆಯ ಅಂಗವಾಗಿ ದ.ಕ. ಜಿಲ್ಲಾ ವ್ಯಾಪ್ತಿ ಪ್ರದೇಶದಲ್ಲಿ ಕಾರ್ಯಚರಿಸುತ್ತಿರುವ ಶಾಲಾ ವಿದ್ಯಾರ್ಥಿಗಳಿಗಾಗಿ ‘ಪರಿಸರ ಸಂರಕ್ಷಣೆ ಮತ್ತು ಅಭಿವೃದ್ಧಿ ಪರಸ್ಪರ ಪ್ರತ್ಯೇಕವಾಗಿವೆಯೇ? ಎಂಬ ವಿಷಯದ ಬಗ್ಗೆ ಏರ್ಪಡಿಸಿದ ಪ್ರಬಂಧ ಸ್ಪರ್ಧೆಯಲ್ಲಿ ನಗರದ ಸಂತ ಅಲೋಶಿಯಸ್ ಉರ್ವ ಪ್ರೌಢಶಾಲೆಯ ಸಿರಿ ಶುಭಾಸ್ (ಪ್ರಥಮ) ಹಾಗೂ ಕೆನರಾ ಡೊಂಗರಕೇರಿ ಪ್ರೌಢಶಾಲೆಯ ಶ್ರದ್ಧಾ ಶೇಟ್ (ದ್ವಿತೀಯ)ಗೆ ನಗರದ ಹೋಟೇಲ್ ಓಶಿಯನ್ ಪರ್ಲ್ ಸಭಾಂಗಣದಲ್ಲಿ ಬುಧವಾರ ಜರುಗಿದ ಸಂಸ್ಥೆಯ ವಿಶೇಷ ಸಭೆಯಲ್ಲಿ ಬಹುಮಾನ ವಿತರಿಸಲಾಯಿತು.

ಸಂಸ್ಥೆಯ ಅಧ್ಯಕ್ಷ ರೋ. ಡಾ. ರಂಜನ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ರಾಜಗೋಪಾಲ್ ರೈ ಭಾಗವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಪೂರ್ಣಿಮಾ ರೈ ವಿಜೇತರಿಗೆ 5,000 ರೂ. ನಗದು ಮತ್ತು 3,000 ರೂ. ನಗದು ಮತ್ತು ಪ್ರಮಾಣ ಪತ್ರವನ್ನು ವಿತರಿಸಿದರು. ಸಂಸ್ಥೆಯ ವಲಯ ದಂಡಾಧಿಕಾರಿ ರೋ ವಿನ್ಸೆಂಟ್ ಡಿಸೋಜ ಸ್ಮರಣಿಕೆ ವಿತರಿಸಿದರು. ಸಂಸ್ಥೆಯ ಕಾರ್ಯದರ್ಶಿ ಪ್ರಶಾಂತ್ ರೈ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News