ಸೂಫಿ ಪರಂಪರೆ ಶಾಂತಿ ಪ್ರಿಯರಾದರೆ, ಶರಣರು ದಯೆಯೇ ಧರ್ಮದ ಮೂಲವೆಂದು ನಂಬಿದವರು: ರಂಜಾನ್ ದರ್ಗಾ

Update: 2018-11-17 10:23 GMT

ಮೂಡುಬಿದಿರೆ, ನ.17: ಕರ್ನಾಟಕದ ಸೂಫಿ ಸಂತರ ಗ್ರಂಥಗಳು ಇಂಗ್ಲಿಷ್‌ಗೆ ಅನುವಾದ ಗೊಂಡರೆ, ಪ್ರಪಂಚದಲ್ಲಿ ಅದಕ್ಕಿಂತ ದೊಡ್ಡ ಗ್ರಂಥ ಇನ್ನೊಂದು ಇರಲಾರದು ಎಂದು ಹಿರಿಯ ಸಾಹಿತಿ, ಚಿಂತಕ, ವಿಮರ್ಶಕ ರಂಜಾನ್ ದರ್ಗಾ ಅಭಿಪ್ರಾಯಿಸಿದ್ದಾರೆ.

‘ಆಳ್ವಾಸ್ ಪ್ರತಿಷ್ಠಾನ ಮೂಡುಬಿದಿರೆಯ ವಿದ್ಯಾಗಿರಿಯ ರತ್ನಾಕರಕರ್ಣಿ ವೇದಿಕೆ , ಸಂತ ಶಿಶುನಾಳ ಶರೀಫ ಸಭಾಂಗಣದಲ್ಲಿ ಆಯೋಜಿಸಿರುವ ಆಳ್ವಾಸ್ ನುಡಿಸಿರಿ 2018ರ ಆಧ್ಯಾತ್ಮ ಪರಂಪರೆಯಲ್ಲಿ ಸೂಫಿ’ ವಿಚಾರಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.

ಸೂಫಿ ಪರಂಪರೆಯಲ್ಲಿ ಶಾಂತಿ, ಪ್ರೀತಿ, ಮಾನವೀಯತೆ ಸಿದ್ಧಾಂತದ ಮೇಲೆ ಇದ್ದರೆ, ಶರಣರು ದಯೆಯೇ ಧರ್ಮದ ಮೂಲ ಎಂದು ನಂಬಿದವರು. ಸೂಫಿಗಳು ಯಜಮಾನತೆ, ಅಸ್ಪೃಶ್ಯತೆ, ಬಡತನದಂತಹಾ ಸಮಾಜದಲ್ಲಿದ್ದ ಅಸಮಾನತೆಯ ವಿರುದ್ಧ ಬಹಳ ದೊಡ್ಡ ರೀತಿಯಲ್ಲಿ ಸಂಘರ್ಷ ನಡೆಸಿದವರು ಎಂದು ಹೇಳಿದರು.

1660 ವರ್ಷಗಳ ಹಿಂದಿನ ಜೈನರ ಚಳವಳಿಯನ್ನು ಅರ್ಥ ಮಾಡಿಕೊಂಡಿದ್ದರೆ ಮಾತ್ರ ಸೂಫಿ ಎಂಬ ಪದದ ನಿಜವಾದ ಅರ್ಥ ಅರ್ಥೈಸಿಕೊಳ್ಳಲು ಸಾಧ್ಯ ಎಂದರು. ದೇಶದಲ್ಲಿ ಎಲ್ಲಾ ದೊರೆಗಳು ಸೂಫಿ ಪರಂಪರೆಯ ಮೂಲ ಆಶಯವಾದ ಶಾಂತಿ, ಪ್ರೀತಿ, ಮಾನವೀಯತೆ ಸಿದ್ಧಾಂತದ ಮೇಲೆ ತಮ್ಮ ಸಾರ್ಮಾಜ್ಯಗಳನ್ನು ನಡೆಸುತ್ತಿದರು. 

ಮದೀನಾ, ಬಾಗ್ದಾದ್, ನಮ್ಮ ರಾಜ್ಯದ ಹೆಮ್ಮೆಯ ವಿಜಾಪುಗಳು 21ನೇ ಶತಮಾನದಲ್ಲಿರುವ ಬಹುದೊಡ್ಡ ಸೂಫಿಗಳ ಕೇಂದ್ರಗಳು. ಸೂಫಿಗಳಲ್ಲಿ 14ಸಿಲ್ಸಿಲಾ( ಪಂಗಡಗಳು) ಇವೆ. ಇವೆಲ್ಲವೂ ಶಾಂತಿ, ಪ್ರೀತಿ, ಮಾನವೀಯತೆ ಎಂಬ ಮೂಲಾಶಯದಂತೆಯೇ ನಡೆಯುತ್ತಿದ್ದವು. ಅಲ್ಲದೆ, ಪ್ರೇಮದ ಅನುಭೂತಿಯಲ್ಲಿ ಪರಮಾತ್ಮನ ದರ್ಶನವಾಗುತ್ತದೆ ಎಂಬ ನಂಬಿಕೆಯಲ್ಲಿ ಮಾನವೀಯತೆಯನ್ನು ತಿಳಿಸಿದ್ದರು ಎಂದು ದರ್ಗಾ ಅಭಿಪ್ರಾಯ ಪಟ್ಟರು.

ಸೂಫಿಗಳು ಪವಾಡ ಮಾಡುವವರೆಂಬ ಮಾತುಗಳಿವೆ. ಆದರೆ, ಅವರು ಪವಾಡ ಮಾಡುವವರಲ್ಲ. ಅವರ ಜೀವನವೇ ಪವಾಡದ್ದು, ಎಂದ ರಂಜಾನ್‌ ದರ್ಗಾ, ಅವರು, ಯುನಾನಿ ವೈದರಾಗಿದ್ದರು. ಕಷ್ಟಗಳನ್ನು ಅನುಭಾವಿಕ ನೆಲೆಯಲ್ಲಿ ಕಂಡವರು ಎಂದೂ  ನುಡಿದ ಅವರು, ಪರಮಾತ್ಮನಿಂದ ಬಂದ ಆತ್ಮ ಪರಮಾತ್ಮನೆಡೆಗೆ ಹಿಂದಿರುವುದು ಎಂಬುದನ್ನು ನಂಬಿದವರಾಗಿದ್ದರು ಸೂಫಿಗಳು ಎಂದರು.

ವಿಶ್ವದ ಸೂಫಿ ಸಿದ್ಧಾಂತಕ್ಕೂ ಕರ್ನಾಟಕದ ಸೂಫಿ ಸಿದ್ಧಾಂತಕ್ಕೂ ಅಜಗಜಾಂತರ ವ್ಯತ್ಯಾಸಗಳಿವೆ. ಕೊಡೆಕೆನಾಲ್ ಸೂಫಿ ಮತ್ತು ಶರಣದ ಹೊಂದಾಣಿಕೆ, ಒಂದೇ ಮನೋಭಾವವನ್ನು ಸ್ಪಷ್ಟೀಕರಿಸುವ ಪ್ರದೇಶ ಎಂದು ಕರೆಯಬಹುದಾಗಿದೆಂದು ದರ್ಗಾ ಅಭಿಪ್ರಾಯಿಸಿದರು. ಸೂಫಿಗಳನ್ನು ವಲಿಗಳೆಂದು ಕರೆಯಲಾಗುತ್ತಿದೆ. ರಾಜ್ಯದ ವಿವಿಧೆಡೆಗಳಲ್ಲಿ ವಲಿಗಳಿಗೆ ಹಿಂದೂಗಳ ಹೆಸರನ್ನೂ ಸೇರಸಿ ಕರೆಯಲಾಗುತ್ತದೆ. ಇದು ಭಾವೈಕ್ಯತೆ, ಸಾಮರಸ್ಯ ಜೀವನ ನಡೆಸಲು ಸಹಕಾರಿಯಾಗಿದೆ ಎಂದು ಅಭಿಪ್ರಾಯಿಸಿದರು. 

ವಿಚಾರಗೋಷ್ಠಿಯಲ್ಲಿ ನುಡಿಸಿರಿ 2018ರ ಸಮ್ಮೇಳನದ ಸರ್ವಾಧ್ಯೆಕ್ಷೆ ಡಾ. ಮಲ್ಲಿಕಾ ಎಸ್. ಘಂಟಿ, ಸಾಹಿತಿ ಡಾ. ನಾ. ದಾಮೋದರ ಉಪಸ್ಥಿತರಿದ್ದರು.

ಉರೂಸ್

‘ವಲಿಗಳ ಉರೂಸ್ ಆಚರಣೆಯ ಬಗ್ಗೆ ಪ್ರಸ್ತಾಪಿಸಿದ ರಂಜಾನ್ ದರ್ಗಾ, ಉರೂಸ್ ಎಂದರೆ, ವಲಿಗಳ ಹುಟ್ಟಿದ ದಿನದ ಆಚರಣೆ ಎಂಬ ಮಾತುಗಳಿವೆ. ಆದರೆ, ಉರೂಸ್ ಎಂದರೆ ವಲಿಗಳು ಮರಣಹೊಂದಿದ ದಿನ ಮತ್ತು ಅಂದು ಅವರು ಮದುವಣಗಿತ್ತಿಗಳಂತೆ ಸಿಂಗರಿಸಿಕೊಂಡು ಪರಮಾತ್ಮನನ್ನು ಸೇರಿಕೊಳ್ಳುವುದಾಗಿದೆ. ಉರೂಸ್‌ನ ಮೂಲಪದ ಅರಸ್’ ಎಂದಾಗಿದೆ.

ಅರಸ್ ಎಂದರೆ ಮದುವಣಗಿತ್ತಿ ಎಂದು ದರ್ಗಾ ನುಡಿದರು. ಪ್ರವಾದಿ ಮುಹಮ್ಮದ್ ಪೈಗಂಬರ್ ಅವರು ನಾನು ಭಾರತದಲ್ಲಿಲ್ಲ. ಭಾರತ ನನ್ನೊಳಗಿದೆ. ನಾನು ಅರಬ್ ನಲ್ಲೇ ಇದ್ದೇನೆ. ಅರಬ್ ನನ್ನೊಳಗಿಲ್ಲ. ಭಾರತದಿಂದ ತಂಪಾದ ಶಾಂತಿಯ ಗಾಳಿ ಬೀಸುತ್ತಿದೆ ಎಂದು ಪ್ರವಾದಿ ಹದೀಸ್‌ನಲ್ಲಿ ಹೇಳಿದ್ದಾರೆ ಎಂದ ದರ್ಗಾ, ಪ್ರವಾದಿ ಭಾರದ ಶಾಂತಿಯ ನಾಡು ಎಂದು 1400 ವರ್ಷಗಳ ಹಿಂದೆಯೇ ಬಣ್ಣಿಸಿದ್ದರು ಎಂದು ಹೇಳಿದರು.

ಸೂಫಿಗಳು ವಿಶ್ವಮಾನವರು. ಅವರಿಗೆ ದೇಶ, ಭಾಷೆಯ ಚೌಕಟ್ಟುಗಳಿಲ್ಲ. ಅವರು ಅರಿವು ಒಂದನ್ನು ಮಾತ್ರ ತನ್ನದಾಗಿಸಲು ಹೊರಟವರಾಗಿದ್ದರು.
-ರಂಜಾನ್ ದರ್ಗಾ, ಹಿರಿಯ ಸಾಹಿತಿ

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News