ಕರಾವಳಿ ಉತ್ಸವ ಮೆರವಣಿಗೆಗೆ ಸಾಂಸ್ಕೃತಿಕ ತಂಡಗಳ ಆಹ್ವಾನ

Update: 2018-11-17 14:36 GMT

ಮಂಗಳೂರು, ನ.17: ಕರಾವಳಿ ಉತ್ಸವದ ಪ್ರಯುಕ್ತ ಡಿ.21ರಂದು ದಿಬ್ಬಣ ಸ್ವರೂಪದ ವೈಶಿಷ್ಟಪೂರ್ಣವಾದ ಸಾಂಸ್ಕೃತಿಕ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ. ಹಿರಿಯ ಸಾಹಿತಿಗಳು, ಸಾಧಕರು, ಪುರ ಪ್ರಮುಖರ ಉಪಸ್ಥಿತಿಯಲ್ಲಿ ಮೆರವಣಿಗೆ ಹಾಗೂ ವಿವಿಧ ಇಲಾಖೆಯ ಸ್ತಬ್ಧ ಚಿತ್ರ ಪಾಲ್ಗೊಳಲಿದೆ.

ನಾಡುನುಡಿಯನ್ನು ಪ್ರತಿಬಿಂಬಿಸುವ ವೇಷಧಾರಿ ತಂಡಗಳು, ದಫ್, ತಾಲೀಮು, ಗೊಂಬೆ ಕುಣಿತ, ಯಕ್ಷಗಾನ, ಕೋಲಾಟ, ಮಂಗಳವಾದ್ಯ, ಹುಲಿವೇಷ ಸಹಿತ ಜಿಲ್ಲೆಯನ್ನು ಪ್ರತಿಬಿಂಬಿಸುವ, ಸಾಂಸ್ಕೃತಿಕ ತಂಡಗಳಿಗೆ ಸಂಘ-ಸಂಸ್ಥೆಗಳಿಗೆ, ಸಾಧನೆಯನ್ನು ಸಾರ್ವಜನಿಕವಾಗಿ ಅಭಿವ್ಯಕ್ತಿಪಡಿಸಲು ವಾಣಿಜ್ಯ ಸಂಸ್ಥೆಗಳಿಗೆ ಹಾಗೂ ಹೊರರಾಜ್ಯ ಮತ್ತು ಕರ್ನಾಟಕದ ಇತರ ಜಿಲ್ಲೆಗಳ ಜಾನಪದ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ತಂಡಗಳಿಗೆ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.

ಆಸಕ್ತ ತಂಡಗಳು, ಕನ್ನಡ ಪರ ಸಂಘಟನೆಗಳು ಹಾಗೂ ವಿದ್ಯಾಸಂಸ್ಥೆಗಳು ಡಿ.13ರೊಳಗೆ ಪ್ರತಿನಿಧಿಸುವ ಸಂಸ್ಥೆಯ ಹೆಸರು, ಪ್ರಸ್ತುತ ಪಡಿಸುವ ಸಾಂಸ್ಕೃತಿಕ ಪ್ರಕಾರ, ಸದಸ್ಯರ ಸಂಖ್ಯೆ ಇನ್ನಿತರ ವಿವರಗಳನ್ನು ಸದಸ್ಯ ಕಾರ್ಯದರ್ಶಿಗಳು, ಕರಾವಳಿ ಉತ್ಸವ ಮೆರವಣಿಗೆ ಸಮಿತಿ, ತಹಶೀಲ್ದಾರರ ಕಚೇರಿ, ಮಂಗಳೂರು ತಾಲೂಕು ಕಚೇರಿ, ಮಂಗಳೂರು ಅಥವಾ ಗೌರವ ಕಾರ್ಯದರ್ಶಿ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಕಲ್ಕೂರ ಪ್ರತಿಷ್ಠಾನ, ಕೃಷ್ಣ ಸಂಕೀರ್ಣ, ಎಂ.ಜಿ. ರೋಡ್ ಮಂಗಳೂರು 0824-2492239, 2492789 ಇಲ್ಲಿಗೆ ತಲುಪಿಸಬಹುದು ಎಂದು ಮೆರವಣಿಗೆ ಸಮಿತಿಯ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News