ಮೂಳೂರು: ಅಲ್ಪಸಂಖ್ಯಾತ ಹೆಣ್ಣು ಮಕ್ಕಳ ಪೈಲೆಟ್‍ಗೆ ಧನಸಹಾಯ; ಸಚಿವ ಜಮೀರ್ ಅಹ್ಮದ್

Update: 2018-11-17 14:57 GMT

ಪಡುಬಿದ್ರಿ, ನ. 17: ಅಲ್ಪಸಂಖ್ಯಾತ ಹೆಣ್ಮಕ್ಕಳು ಪೈಲೆಟ್ ತರಬೇತಿಗೆ ತೆರಳುವುದಾದಲ್ಲಿ 75 ಶೇ. ಕೆಎಂಡಿಸಿ ಮತ್ತು 25ಶೇ. ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆ ಮೂಲಕವೇ ಧನ ಸಹಾಯವನ್ನು ನೀಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ, ವಕ್ಫ್ ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖಾ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು.

ಮೂಳೂರಿನ ದ. ಕ., ಸುನ್ನಿ ಸೆಂಟರ್‍ನ ಅಲ್ ಇಹ್ಸಾನ್ ಸಮೂಹ ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್‍ಗೆ ಶನಿವಾರ ಭೇಟಿ ನೀಡಿ ಸುಮಾರು 2000 ಅಲ್ಪಸಂಖ್ಯಾತರ ಮಕ್ಕಳು ನೀಡಿದ ಆತ್ಮೀಯ ಸ್ವಾಗತ ಹಾಗೂ ಸಮ್ಮಾನಗಳನ್ನು ಸ್ವೀಕರಿಸಿ ಮಾತನಾಡಿದರು. 

ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೂ ಶಿಕ್ಷಣವೇ ಬದುಕಿನ ದಾರಿದೀಪವಾಗಿದೆ. ಓದಿನೆಡೆಗೆ ಗಮನ ನೀಡಿರಿ. ಚೆನ್ನಾಗಿ ಓದಿ ಮುಂದೆ ಬನ್ನಿರಿ ಎಂದ ಅವರು, ಅಲ್ಪಸಂಖ್ಯಾತ ಮಕ್ಕಳಿಗೆ ಈಗಾಗಲೇ ಇಲಾಖೆಯಿಂದಲೇ ಐಎಎಸ್, ಐಪಿಎಸ್ ತರಬೇತಿಗಾಗಿ ವಿದ್ಯಾರ್ಥಿವೇತನ ನೀಡಲಾಗುತ್ತಿದೆ ಎಂದರು. 

ಮೂಳೂರಿನಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳನ್ನು ಹುಟ್ಟು ಹಾಕಿ ಅನಾಥ ವಿದ್ಯಾರ್ಥಿಗಳಿಗೂ ಶಿಕ್ಷಣದ ಬಲವನ್ನು ನೀಡುತ್ತಿರುವುದು ಅಭಿನಂದನಾರ್ಹ ವಾಗಿದೆ. ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಅಧೀನದ ಅಲ್ ಇಹ್ಸಾನ್ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗಾಗಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಘೋಷಿಸಿರುವ 1ಕೋಟಿ ರೂ. ಗಳ ಅನುದಾನವನ್ನು ರಾಜ್ಯ ಸರ್ಕಾರವು ಶೀಘ್ರವೇ ಬಿಡುಗಡೆಗೊಳಿಸಲಿದೆ ಎಂದು ಭರವಸೆ ನೀಡಿದರು. 

ಅಲ್ ಇಹ್ಸಾನ್ ಶಿಕ್ಷಣ ಸಂಸ್ಥೆಗಳ ಕಾರ್ಯಾಧ್ಯಕ್ಷ ಆಸ್ಸಯ್ಯದ್ ಕೆ. ಎಸ್. ಅಹ್ಮದ್ ಮುಕ್ತಾರ್ ತಂಙಳ್ ದುವಾ ನೆರವೇರಿಸಿದರು. ಡಿಕೆಎಸ್‍ಸಿ ಕಾರ್ಯಾಧ್ಯಕ್ಷ ಅತೀಂ, ಅಲ್ ಇಹ್ಸಾನ್ ಮಹಿಳಾ ಕಾಲೇಜು ಚಯರ್‍ಮ್ಯಾನ್ ಎಂ. ಇ. ಮೂಳೂರು, ಡಿಕೆಎಸ್‍ಸಿ ಕೊಲ್ಲಿ ರಾಷ್ಟ್ರ ಸಮಿತಿಯ ಮಹಮ್ಮದ್ ಇಕ್ಬಾಲ್ ಕನ್ನಂಗಾರ್, ಕೋಶಾಧಿಕಾರಿ ಹಮೀದ್ ಸುಳ್ಯ, ಹಾಜಿ ಬದ್ರುದ್ದೀನ್ ಬಜ್ಪೆ, ಎಂ. ಎಚ್. ಬಿ. ಮಹಮ್ಮದ್, ಅಲ್ ಇಹ್ಸಾನ್ ಶಿಕ್ಷಣ ಸಂಸ್ಥೆಗಳ ಪ್ರಧಾನ ಕಾರ್ಯದರ್ಶಿ ವೈ. ಮಹಮ್ಮದ್, ಡಿಕೆಎಸ್‍ಸಿಯ ಕಾರ್ಯಕಾರಿ ಸಮಿತಿ ಮಾಜಿ ಅಧ್ಯಕ್ಷ ಇಸ್ಮಾಯಿಲ್ ಹಾಜಿ ಕೀನ್ಯ, ಸ್ಥಾಪಕ ಸದಸ್ಯ ಝೈಮುದ್ದೀನ್ ಮುಕ್ಯೆ, ಕಣಚೂರು ಗ್ರೂಪ್‍ನ ಕಣಚೂರು ಮೋನು, ಮಜೀದ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜಿ. ಎ. ಬಾವ, ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ. ಎ. ಗಫೂರ್, ಕೆಪಿಸಿಸಿ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ, ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಇಬ್ರಾಹಿಂ, ಉಪಾಧ್ಯಕ್ಷ ಗುಲಾಂ ಮಹಮ್ಮದ್, ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಪ್ರಧಾನ ಕಾರ್ಯದರ್ಶಿ ಫಾರೂಕ್ ಚಂದ್ರನಗರ, ಕಾಪು ಪುರಸಭೆಯ ಉಪಾಧ್ಯಕ್ಷ ಕೆ.ಎಚ್.ಉಸ್ಮಾನ್, ತಾ. ಪಂ. ಸದಸ್ಯ ಯು.ಸಿ. ಶೇಖಬ್ಬ, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್‍ಚಂದ್ರ ಎಸ್. ಸುವರ್ಣ ಅಡ್ವೆ, ಮಹಾಬಲ ಕುಂದರ್ ಉಪಸ್ಥಿತರಿದ್ದರು. ಅಲ್ ಇಹ್ಸಾನ್ ಶಿಕ್ಷಣ ಸಂಸ್ಥೆಗಳ ಪ್ರಧಾನ ವ್ಯವಸ್ಥಾಪಕ ಉಸ್ತಾದ್ ಮುಸ್ತಾಫಾ ಸಅದಿ ಸ್ವಾಗತಿಸಿದರು.

ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಪ್ರಸ್ತಾವಿಸಿದರು. ವೈ. ಬಿ. ಸಿ ಬಶೀರ್ ವಂದಿಸಿದರು. ರಕೀಬ್ ಕನ್ನಂಗಾರ್, ಖಲಂದರ್ ಕಾರ್ಯಕ್ರಮ ನಿರ್ವಹಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News