ಸೌಹಾರ್ದ ಕೂಟಗಳು ನಡೆದಾಗ ಶಾಂತಿ ಸೌಹಾರ್ದತೆ ನೆಲೆಯಾಗುತ್ತದೆ: ಸಿಐ ಟಿ.ಡಿ ನಾಗಾರಾಜ್

Update: 2018-11-18 12:10 GMT

ಬಂಟ್ವಾಳ, ನ. 18: ಅಪಘಾತ ಹಾಗೂ ಇನ್ನಿತರ ಕ್ಷುಲ್ಲಕ ವಿಚಾರಗಳು ಕೋಮು ಬಣ್ಣಕ್ಕೆ ತಿರುಗುತ್ತದೆ. ಇಂತಹ ಭಾವನೆಗಳನ್ನು ಹೋಗಾಲಾಡಿಸಲು ಸೌಹಾರ್ದ ಕೂಟಗಳು ನಡೆದಾಗ ಶಾಂತಿ ಸೌಹಾರ್ದತೆ ನೆಲೆಯಾಗುತ್ತದೆ ಎಂದು ಬಂಟ್ವಾಳ ಪೊಲೀಸ್ ಇನ್‍ಸ್ಪೆಕ್ಟರ್ ಟಿ.ಡಿ ನಾಗಾರಾಜ್ ಹೇಳಿದ್ದಾರೆ.

ಅವರು ರವಿವಾರ ದಕ್ಷಿಣ ಕನ್ನಡ ಜಿಲ್ಲಾ ದಲಿತ್ ಸೇವಾ ಸಮಿತಿ ಹಾಗೂ ವಿಟ್ಲ ಪೊಲೀಸ್ ಠಾಣಾ ವತಿಯಿಂದ ನಡೆದ ಪೊಲೀಸ್ ಜನಸಂಪರ್ಕ ಸಭೆ ಹಾಗೂ ಸೌಹಾರ್ದ ಕೂಟ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಜನಸಂಪರ್ಕ ಸಭೆಗಳ ಮೂಲಕ ಜನರು ಹಾಗೂ ಪೊಲೀಸ್ ಇಲಾಖೆಗಳ ನಡುವೆ ಉತ್ತಮ ಬಾಂಧವ್ಯ ಉಂಟು ಮಾಡುತ್ತದೆ. ಪ್ರತಿಯೊಬ್ಬನಿಗೂ ಠಾಣೆಯಲ್ಲಿ ಗೌರವ ನೀಡಲಾಗುತ್ತಿದೆ ಎಂದರು. 

ಒಂದು ಗ್ರಾಮಕ್ಕೆ ಒಬ್ಬ ಬೀಟ್ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ. ಆ ಗ್ರಾಮಕ್ಕೆ ಸಂಬಂಧಪಟ್ಟ ಪ್ರತಿಯೊಂದು ವಿಚಾರಗಳು ಅವರಿಗೆ ತಿಳಿದಿರುತ್ತದೆ. ಗ್ರಾಮದಲ್ಲಿರುವ ಸಮಸ್ಯೆಗಳ ಬಗ್ಗೆ ಬೀಟ್ ಸಿಬ್ಬಂದಿ ಗಮನಕ್ಕೆ ತರಬಹುದು. ಪೊಲೀಸ್ ಬೀಟ್ ವ್ಯವಸ್ಥೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ ಎಂದರು. 

ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ದಲಿತ್ ಸೇವಾ ಸಮಿತಿ ತಾಲೂಕು ಸಮಿತಿಯಿಂದ ದಲಿತ್ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಸೇಸಪ್ಪ ಬೆದ್ರಕಾಡು ಹಾಗೂ ಕಾರ್ಯದರ್ಶಿ ಚಂದ್ರಶೇಖರ್ ದಂಪತಿಯನ್ನು ಸನ್ಮಾನಿಸಲಾಯಿತು. ಬಡವೃದ್ಧ ಕುಟುಂಬಕ್ಕೆ ಅಕ್ಕಿ ಹಾಗೂ ಸಾಮಾಗ್ರಿಗಳನ್ನು ವಿತರಿಸಲಾಯಿತು. 
ದಕ್ಷಿಣ ಕನ್ನಡ ಜಿಲ್ಲಾ ದಲಿತ್ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಸೇಸಪ್ಪ ಬೆದ್ರಕಾಡು ಅಧ್ಯಕ್ಷತೆ ವಹಿಸಿದ್ದರು.

ವಿಟ್ಲ ಎಸ್ಸೈ ಯಲ್ಲಪ್ಪ, ಸುಪ್ರಜಿತ್ ಐಟಿಐನ ತರಬೇತಿದಾರ ಅಲ್ಫೋನ್ಸ್ ವೇಗಸ್, ಅಳಿಕೆ ನೆಕ್ಕಿತಪುಣಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತಾಧಿಕಾರಿ ಯಶೋಧರ ಬಂಗೇರ, ವಿಟ್ಲ ಜಮಾತ್ ಇಸ್ಲಾಮಿಕ್ ಹಿಂದ್‍ನ ಅಧ್ಯಕ್ಷ ಕೆ. ಹೈದರ್ ಅಲಿ ನೀರ್ಕಜೆ, ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ಸಮೀರ್ ಪಳಿಕೆ, ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷೆ ಜಯ ವಿ. ರೈ, ದಕ್ಷಿಣ ಕನ್ನಡ ಜಿಲ್ಲಾ ದಲಿತ್ ಸೇವಾ ಸಮಿತಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಪ್ರೇಮ ನಾಯ್ಕ ದಡ್ಡಲ್ತಡ್ಕ, ದಕ್ಷಿಣ ಕನ್ನಡ ಜಿಲ್ಲಾ ದಲಿತ್ ಸೇವಾ ಸಮಿತಿ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ದಿವ್ಯಶ್ರೀ ಕಲ್ಲಜೇರ ಮೊದಲಾದವರು ಉಪಸ್ಥಿತರಿದ್ದರು. 

ರಾಮಣ್ಣ ಪಿಲಿಂಜ ಸ್ವಾಗತಿಸಿದರು. ಚಂದ್ರಶೇಖರ ವಂದಿಸಿ, ಪ್ರಸಾದ್ ಬೊಳ್ಮಾರ್ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News