ನ್ಯೂ ಶಮ್ಸ್ ಸ್ಕೂಲ್ ನಲ್ಲಿ ಗ್ರಂಥಾಲಯ ಸಪ್ತಾಹ ಆಚರಣೆ

Update: 2018-11-18 14:27 GMT

ಭಟ್ಕಳ, ನ. 18: ಇಲ್ಲಿನ ಹೆಬಳೆ ಪಂಚಾಯತ್ ವ್ಯಾಪ್ತಿಯ ತರಬಿಯತ್ ಎಜ್ಯುಕೇಶನ್ ಸೂಸೈಟಿಯ ನ್ಯೂ ಶಮ್ಸ್ ಸ್ಕೂಲ್ ಹಾಗೂ ಶಮ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಗ್ರಂಥಾಲಯ ಸಪ್ತಾಹ ಅಂಗವಾಗಿ ವಿದ್ಯಾರ್ಥಿಗಳಿಗೆ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಯಿತು.

ಅಂಜುಮಾನ್ ಕಲಾ,ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಕೇಂದ್ರ ಗ್ರಂಥಾಲಯಕ್ಕೆ ಭೇಟಿ ನೀಡಿದ ವಿದ್ಯಾರ್ಥಿಗಳು ಗ್ರಂಥಾಲಯದ ಮಹತ್ವ ಹಾಗೂ ಅದರ ಉಪಯೋಗ ಕುರಿತಂತೆ ತಿಳಿದುಕೊಂಡರು.

ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದ ಗ್ರಂಥಾಲಯಾಧಿಕಾರಿ ಪ್ರೋ.ಜಮಾದಾರ್, ಅಂಜುಮನ್ ಸಂಸ್ಥೆಯ ಗ್ರಂಥಾಯ ಬಹಳ ಹಳೆಯ ಗ್ರಂಥಾಲಯವಾಗಿದ್ದು ಇಲ್ಲಿ ಮಹತ್ತರವಾದ ಪುಸ್ತಕಗಳು ಲಭ್ಯವಿದೆ. ದಿನವೊಂದಕ್ಕೆ ಸರಾಸರಿ 50 ವಿದ್ಯಾರ್ಥಿಗಳು ಇದರಿಂದ ಪ್ರಯೋಜನ ಪಡೆಯುತ್ತಿದ್ದು ಅಂಜುಮನ್ ಪಿಯು ಕಾಲೇಜ್, ಪದವಿ ಮಹಾವಿದ್ಯಾಲಯ ಹಾಗೂ ಪಿ.ಜಿ ಸೆಂಟರ್ ನ ವಿದ್ಯಾರ್ಥಿಗಳು ಈ ಗ್ರಂಥಾಲಯದಿಂದ ಪ್ರಯೋಜನ ಪಡೆಯುತ್ತಿದ್ದಾರೆ ಎಂದರು.

ತಂತ್ರಜ್ಞಾನ ಎಷ್ಟೆ ಅಭಿವೃದ್ಧಿ ಹೊಂದಿದ್ದರೂ, ಇ ಲೈಬ್ರರಿ ಬಂದರೂ ಪುಸ್ತಕದ ಜಾಗವನ್ನು ಯಾವುದು ಪಡೆದುಕೊಳ್ಳಲು ಸಾಧ್ಯವಿಲ್ಲ. ಅದು ಇಂದಿಗೂ ತನ್ನದೇ ಆದ ಮಹತ್ವವನ್ನು ಹೊಂದಿವೆ ಎಂದ ಅವರು, ವಿದ್ಯಾರ್ಥಿಗಳ ಕಷ್ಟಕಾಲದಲ್ಲಿ ಪುಸ್ತಕಗಳೇ ಒಳ್ಳೆಯ ಸ್ನೇಹಿತ ಇದ್ದಂತೆ ಒಳ್ಳೆಯ ಸ್ನೇಹಿತರನ್ನು ಮರೆಯುವುದು ಅಷ್ಟು ಸುಲಭದ ಕೆಲಸವಲ್ಲ ಎಂದರು.

ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ತಲ್ಹಾ ಸಿದ್ದಿಬಾಪ, ಪ್ರಾಂಶುಪಾಲೆ ಫಹಮಿದಾ ಮುಲ್ಲಾ, ಮುಖ್ಯಾಧ್ಯಾಪಕ ಮುಹಮ್ಮದ್ ರಝಾ ಮಾನ್ವಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News