ಫಿಝಾ ಸಮೂಹ ಸಂಸ್ಥೆ ವತಿಯಿಂದ 11 ಜೋಡಿಯ ಸಾಮೂಹಿಕ ವಿವಾಹ

Update: 2018-11-18 14:57 GMT

ಕೃಷ್ಣಾಪುರ, ನ. 18: ಕರ್ನಾಟಕ ವಿಧಾನ ಪರಿಷತ್ ಶಾಸಕ ಹಾಗೂ ಫಿಝಾ ಸಮೂಹ ಸಂಸ್ಥೆಗಳ ಮುಖ್ಯಸ್ಥ ಬಿ.ಎಂ ಫಾರೂಖ್ ಅವರ ಪುತ್ರಿಯ ವಿವಾಹ ಸಂಭ್ರಮದ ಸಲುವಾಗಿ 11 ಜೋಡಿಯ ಸಾಮೂಹಿಕ ವಿವಾಹ ಸಮಾರಂಭವು ಶನಿವಾರ ಸಂಜೆ ಫಿಝಾ ಗಾರ್ಡನ್‍ನಲ್ಲಿ ನಡೆಯಿತು.

ಕೃಷ್ಣಾಪುರ ಸಂಯುಕ್ತ ಖಾಝಿ ಅಲ್‍ ಹಾಜ್ ಇ.ಕೆ ಇಬ್ರಾಹಿಂ ಮದನಿ ಹಾಗೂ ಅತ್ರಾಡಿ ಖಾಝಿ ಅಲ್‍ಹಾಜ್ ವಿ.ಕೆ ಅಬೂಬಕ್ಕರ್ ಮುಸ್ಲಿಯಾರ್ ನಿಖಾಹ್‍ಗೆ ನೇತೃತ್ವ ನೀಡಿದರು. ಕೃಷ್ಣಾಪುರ 7 ನೇ ಬ್ಲಾಕ್ ಖತೀಬ್ ಉಮರುಲ್ ಫಾರೂಖ್ ಸಖಾಫಿ ಖುತುಬಾ ನಿರ್ವಹಿಸಿದರು. ಅಬ್ದುಲ್ ರಶೀದ್ ಝೈನಿ ಮತ್ತು ಅಬ್ದುಲ್ ರಹಿಮಾನ್ ದಾರಿಮಿ ಚೊಕ್ಕಬೆಟ್ಟು ಸಂದೇಶ ಭಾಷಣ ಮಾಡಿದರು. ಬಿ.ಎಂ ಫಾರೂಖ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿದ್ದ ಬೆಂಗಳೂರಿನ ಡಿ.ಐ.ಜಿ ಶ್ರೀ ಹರ್ಷ ಮತ್ತು ಶಾಫಿ ಸಅದಿ ನೂತನ ವಧು ವರರಿಗೆ ಶುಭ ಹಾರೈಸಿದರು.

ಬಿ.ಎಂ ಹುಸೈನ್ ಕೃಷ್ಣಾಪುರ, ಬಿ.ಎಂ ಹೈದರ್ ಅಲಿ, ಬಿ.ಎಂ ಶೌಕತ್ ಅಲಿ, ಬಿ.ಎಂ ಹನೀಫ್, ಅಬ್ದುಲ್ ಸಲಾಂ,  ಮೊಯ್ದಿನ್ ವಲ್ಡ್ ವೈಡ್, ಮುಹಮ್ಮದ್, ಅಬ್ದುಲ್ ಹಮೀದ್, ಕೆ.ಕೆ.ಎಂ ಸಖಾಫಿ, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‍ನ ಸ್ಥಾಪಕಾಧ್ಯಕ್ಷ ಅಬ್ದುಲ್ ರವೂಫ್ ಪುತ್ತಿಗೆ, ನಂಡೆ ಪೆಂಙಳ್ ಅಧ್ಯಕ್ಷ ನೌಷಾದ್ ಹಾಜಿ ಸೂರಲ್ಪಾಡಿ, ಕಾರ್ಯದರ್ಶಿ ನಿಸಾರ್ ಮುಹಮ್ಮದ್ ಕೋಸ್ಟಲ್ ಫಿಶರೀಸ್, ಮುಬೀನ್ ಜುಬೈಲ್, ಕಿಂಗ್ಸ್ ಗ್ರಾನೈಟ್‍ನ ಮುಸ್ತಫಾ, ಡಾ. ರವೂಫ್ ಸುಲ್ತಾನ್ ಗೋಲ್ಡ್, ಸುಲೈಮಾನ್ ಶೇಖ್ ಬೆಳುವಾಯಿ, ಪರಿಸರದ ಜಮಾಅತಿನ ಖತೀಬರು ಮತ್ತು ಅಧ್ಯಕ್ಷರು, ಅನೇಕ ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ಮುಖಂಡರು, ಉದ್ಯಮಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಬಿ.ಎಂ ಮುಮ್ತಾಝ್ ಅಲಿ ಸ್ವಾಗತಿಸಿದರು. ಬಿ.ಎ ಮೊಯ್ದಿನ್ ಬಾವಾ ವಂದಿಸಿದರು. ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು. ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಸಾಮೂಹಿಕ ವಿವಾಹ ಸಮಾರಂಭದ ಸಂಘಟಕರಾಗಿದ್ದರು. ಟ್ಯಾಲೆಂಟ್ ಅಧ್ಯಕ್ಷ ರಿಯಾಝ್ ಕಣ್ಣೂರು, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ಕಣ್ಣೂರು, ಸಲಹೆಗಾರರಾದ ಅಬ್ದುಲ್ ಸಲಾಂ ಮುಸ್ಲಿಯಾರ್ ಪೆರ್ನೆ, ಮೊಹಮ್ಮದ್ ಬೆಳ್ಳಚ್ಚಾರು ಮತ್ತು  ಸದಸ್ಯರು, ಆಸರೆ ವಿಮೆನ್ಸ್ ಫೌಂಡೇಶನ್‍ನ ಸದಸ್ಯೆಯರು ಹಾಗೂ ಟ್ಯಾಲೆಂಟ್ ಮಹಿಳಾ ಗ್ರಾಜ್ಯುವೇಟ್ ಎಸೋಸಿಯೇಷನ್‍ನ ಸದಸ್ಯೆಯರು ಕಾರ್ಯಕ್ರಮ ಸಂಯೋಜನೆಯಲ್ಲಿ ಸ್ವಯಂ ಸೇವಕರಾಗಿ ಸಹಕರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News