ಜನಜಾಗೃತಿಯಿಂದ ಸಂಚಾರಿ ನಿಯಮ ಪಾಲನೆ ಸಾಧ್ಯ: ರಘುಪತಿ ಭಟ್

Update: 2018-11-18 15:28 GMT

ಉಡುಪಿ, ನ.18: ಯಾವುದೇ ಕಾನೂನುಗಳನ್ನು ಜನಜಾಗೃತಿ ಮೂಲಕ ಜಾರಿಗೆ ತಂದರೆ ಮಾತ್ರ ಸಮಪರ್ಕವಾಗಿ ಅನುಷ್ಠಾನಗೊಳಿಸಲು ಸಾಧ್ಯವಾಗು ತ್ತದೆ. ರಸ್ತೆ ಅಪಘಾತಗಳನ್ನು ಕೇವಲ ಕಾನೂನಿನಿಂದ ಮಾತ್ರ ನಿಯಂತ್ರಿಸಲು ಸಾಧ್ಯವಿಲ್ಲ. ಆ ಕುರಿತು ಜನಜಾಗೃತಿ ಕೂಡ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಜನರ ಮನಸ್ಥಿತಿ ಬದಲಾಗಬೇಕು ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ಹೇಳಿದ್ದಾರೆ.

ಉಡುಪಿ ಜಿಲ್ಲಾ ಪೊಲೀಸ್ ಹಾಗೂ ಅಂಬಲಪಾಡಿ ರೋಟರಿ ಕ್ಲಬ್ ಸಹ ಯೋಗದೊಂದಿಗೆ ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಸ್ಮಾರಣಾರ್ಥ ರವಿವಾರ ಮಲ್ಪೆ ಬೀಚ್‌ನಲ್ಲಿ ಆಯೋಜಿಸಲಾದ ರಸ್ತೆ ಸುರಕ್ಷತೆಯ ಕುರಿತು ಪ್ರತಿಜ್ಞಾ ಸ್ವೀಕಾರ ಮತ್ತು ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡುತಿದ್ದರು.

ಪ್ರತಿಯೊಬ್ಬರು ಸಂಚಾರ ನಿಯಮವನ್ನು ಪಾಲಿಸಬೇಕು. ಇಲ್ಲದಿದ್ದರೆ ನಮ್ಮ ತಪ್ಪಿನಿಂದ ಇತರರ ಜೀವಕ್ಕೆ ಅಪಾಯವಾಗುವ ಸಾಧ್ಯತೆಗಳಿರುತ್ತದೆ. ಎಲ್ಲವನ್ನು ಪೊಲೀಸರು ಕಾನೂನಿನ ಮೂಲಕ ತಡೆಯಲು ಆಗುವುದಿಲ್ಲ. ಅವರೊಂದಿಗೆ ಸಾರ್ವಜನಿಕರು ಕೂಡ ಕೈಜೋಡಿಸಬೇಕು ಎಂದು ಅವರು ಅಭಿಪ್ರಾಯ ಪಟ್ಟರು.

ಉಡುಪಿ ವೃತ್ತ ನಿರೀಕ್ಷಕ ಮಂಜುನಾಥ್ ಮಾತನಾಡಿ, ಜಗತ್ತಿನಲ್ಲಿ 18ನೆ ಶತಮಾನದಲ್ಲೇ ಸಂಚಾರಿ ನಿಯಮದ ಕುರಿತು ಜಾಗೃತಿ ಮೂಡಿದ್ದು, ಅದಕ್ಕಾಗಿ ರೆಡ್‌ಫ್ಲಾಗ್ ಕಾಯಿದೆಯನ್ನು ಜಾರಿಗೆ ತರಲಾಗಿತ್ತು. ಆದರೆ ಇಂದು ಇದೇ ಸಂಚಾರ ನಿಯಮದ ಉಲ್ಲಂಘನೆಯಿಂದ ಲಕ್ಷಾಂತರ ಮಂದಿ ಸಾಯುತ್ತಿದ್ದಾರೆ. ಇದಕ್ಕೆ ಜಜಾಗೃತಿ ಒಂದೇ ಪರಿಹಾರ ಎಂದರು.

ಮುಖ್ಯ ಅತಿಥಿಗಳಾಗಿ ರೋಟರಿ ವಲಯ ಮೂರರ ಸಹಾಯಕ ಗವರ್ನರ್ ಸುಬ್ಬಣ್ಣ ಪೈ, ಉಡುಪಿ ನಗರಸಭೆ ಸದಸ್ಯರಾದ ಲಕ್ಷ್ಮೀ ಮಂಜುನಾಥ್, ಬಾಲಕೃಷ್ಣ ಶೆಟ್ಟಿ, ಮಲ್ಪೆ ಠಾಣಾಧಿಕಾರಿ ಮಧು ಉಪಸ್ಥಿತರಿದ್ದರು.

ಅಂಬಲಪಾಡಿ ರೋಟರಿ ಅಧ್ಯಕ್ಷ ಖಲೀಲ್ ಅಹ್ಮದ್ ಸ್ವಾಗತಿಸಿ ಪ್ರಾಸ್ತಾವಿಕ ವಾಗಿ ಮಾತನಾಡುತಿದ್ದರು. ಕಾರ್ಯದರ್ಶಿ ದುರ್ಗಾಪ್ರಸಾದ್ ಕೆ.ಎಲ್. ವಂದಿಸಿದರು. ಅಶೋ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News