ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾಟ: ಮಂಗಳೂರು ಫ್ರೆಂಡ್ಸ್‌ಗೆ ಪ್ರಶಸ್ತಿ

Update: 2018-11-18 16:48 GMT

ಶಿರ್ವ, ನ.18: ಮೂಡುಬೆಳ್ಳೆ ಸೈಂಟ್ ಲಾರೆನ್ಸ್ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ರಾತ್ರಿ ನಡೆದ ಹೊನಲು ಬೆಳಕಿನ ಲಾರೆನ್ಶಿಯನ್ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಮಂಗಳೂರು ಫ್ರೆಂಡ್ಸ್ ತಂಡ ಚಾಂಪಿಯನ್ ಟ್ರೋಫಿ ಮತ್ತು 50 ಸಾವಿರ ರೂ. ನಗದು ಬಹುಮಾನವನ್ನು ಗೆದ್ದುಕೊಂಡಿದೆ.

ರವಿವಾರ ಮುಂಜಾನೆ ನಡೆದ ಅಂತಿಮ ಪಂದ್ಯದಲ್ಲಿ ಮಂಗಳೂರು ಫ್ರೆಂಡ್ಸ್ ತಂಡವು ಸಮೀರ್ ಟೀಮ್ ಕುಂದಾಪುರ ತಂಡವನ್ನು 25-16, 40-38 ಮತ್ತು 25 -21 ಅಂಕಗಳ ಅಂತರದಲ್ಲಿ ಸೋಲಿಸಿತು. ಈ ಮೂಲಕ ಸಮೀರ್ ಟೀಮ್ ರನ್ನರ್ ಅಪ್ ಟ್ರೋಫಿ ಮತ್ತು 30 ಸಾವಿರ ರೂ. ನದು ಬಹುಮಾನ ಪಡೆದುಕೊಂಡಿತು.

ಬೆಸ್ಟ್ ಅ್ಯಟ್ಯಾಕರ್ -ಅನುಶ್, ಬೆಸ್ಟ್ ಪಾಸರ್- ಸರ್ಫ ರಾಜ್, ಬೆಸ್ಟ್ ಬ್ಲಾಕರ್ - ಸಂತೋಷ್, ಬೆಸ್ಟ್ ಲಿಬೆರೋ - ಝಿಯಾ ಮತ್ತು ಬೆಸ್ಟ್ ಆಲ್ರೌಂಡರ್- ಗ್ಲೆವನ್ ವೈಯಕ್ತಿಕ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡರು. ಶಿರ್ವ ಆರೋಗ್ಯಮಾತಾ ಚರ್ಚಿನ ಧರ್ಮಗುರು ಫಾ.ಡೆನ್ನಿಸ್ ಡೇಸಾ ವಿಜೇತ ತಂಡಗಳಿಗೆ ಬಹುಮಾನಗಳನ್ನು ವಿತರಿಸಿದರು.

ಪಂದ್ಯಾವಳಿಯನ್ನು ಶನಿವಾರ ಸಂಜೆ ನೌಕಸೇನೆಯ ನಿವೃತ್ತ ಅಧಿಕಾರಿ ಕಮಾಡೋರ್ ಜೆರೋಮ್ ಕ್ಯಾಸ್ತಲಿನೋ ಉದ್ಘಾಟಿಸಿದರು. ಫಾ.ಮಹೇಶ್ ಡಿಸೋಜ ಪಂದ್ಯಾಟಕ್ಕೆ ಚಾಲನೆ ನೀಡಿದರು. ಮೂಡುಬೆಳ್ಳೆ ಸೈಂಟ್ ಲಾರೆನ್ಸ್ ಚರ್ಚಿನ ಧರ್ಮಗುರು ಫಾ.ಕ್ಲೆಮೆಂಟ್ ಮ್ಕರೇನಸ್ ಅಧ್ಯಕ್ಷತೆ ವಹಿಸಿದ್ದರು.
ಉಡುಪಿಯ ಶೋಕಮಾತಾ ಚರ್ಚಿನ ಧರ್ಮಗುರು ಫಾ. ವಲೇರಿಯನ್ ಮೆಂಡೊನ್ಸ, ಅಂತಾರಾಷ್ಟ್ರೀಯ ಟ್ರಿಪಲ್ ಜಂಪ್‌ಪಟು ಜಾಯ್ಲಿನ್ ಲೋಬೋ, ವಾಲಿಬಾಲ್ ಆಟಗಾರ ರೈಸನ್ ರೆಬೆಲ್ಲೋ ಅತಿಥಿಗಳಾಗಿದ್ದರು. ಸಂಘಟಕರಾದ ವಿನ್ಸೆಂಟ್ ಫೆರ್ನಾಂಡಿಸ್, ಎಲಿಯಾಸ್ ಡಿಸೋಜ, ಲತಾ ಡಿಮೆಲ್ಲೊ, ದಾನಿಗಳಾದ ಮುಕುಂದ ಕಾಮತ್, ಅನಿಲ್ ಡಿಮೆಲ್ಲೊ, ಐವಾನ್ ಡಿಅಲ್ಮೇಡಾ, ಇಮೆಲಿಯಾ ನೊರೊನ್ಹ ಉಪಸ್ಥಿತರಿದ್ದರು.

ಮೂಡುಬೆಳ್ಳೆ ಚರ್ಚಿಯ ಸಹಾಯಕ ಧರ್ಮಗುರು ಫಾ.ಲಾರೆನ್ಸ್ ಕುಟಿನ್ಹೋ ಸ್ವಾಗತಿಸಿದರು, ಸಿಸ್ಟರ್ ಐರಿನ್ ವೇಗಸ್, ವಿಕ್ಟರ್ ಡಿಸೋಜ ಕಾರ್ಯಕ್ರಮ ಸಂಯೋಜಿಸಿದು. ಎಲಿಯಾಸ್ ಡಿಸೋಜ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News