ಕತರ್: ಅಮೆರಿಕದ ರಾಜತಾಂತ್ರಿಕ ಜೊತೆ ತಾಲಿಬಾನ್ ಮಾತುಕತೆ

Update: 2018-11-18 16:54 GMT

ಇಸ್ಲಾಮಾಬಾದ್,ನ.18: ಅಫ್ಘಾನಿಸ್ತಾನದ ಬಂಡುಕೋರ ಗುಂಪು ತಾಲಿಬಾನ್ ಗಲ್ಫ್ ರಾಷ್ಟ್ರವಾದ ಕತರ್‌ನಲ್ಲಿ ಅಮೆರಿಕದ ರಾಜತಾಂತ್ರಿಕ ಝಲ್ಮಾಯ್ ಖಾಲಿಝಾದ್ ಜೊತೆ ಮೂರು ದಿನಗಳ ಕಾಲ ಮಾತುಕತೆ ನಡೆಸಿರುವುದಾಗಿ ತಾಲಿಬಾನ್ ಪ್ರತಿನಿಧಿ ಹಾಗೂ ಬಂಡುಕೋರ ಗುಂಪಿನ ಜೊತೆ ನಿಕಟ ಸಂಪರ್ಕ ಹೊಂದಿರುವ ಇನ್ನೋರ್ವ ವ್ಯಕ್ತಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಅಫ್ಘಾನಿಸ್ತಾನದಲ್ಲಿ ಶಾಂತಿ ಪ್ರಕ್ರಿಯೆಯನ್ನು ಪುನರುಜ್ಜೀವನಗೊಳಿಸುವುದು ಹಾಗೂ ಆ ದೇಶದಲ್ಲಿ ದೀರ್ಘಕಾಲದಿಂದ ನಡೆಯುತ್ತಿರುವ ಸಮರವನ್ನು ಕೊನೆಗೊಳಿಸಲು ಪ್ರಯತ್ನಿಸುವುದು ಈ ಮಾತುಕತೆಯ ಉದ್ದೇಶವೆನ್ನಲಾಗಿದೆ. ಕತರ್‌ನಲ್ಲಿ ತಾಲಿಬಾನ್‌ನ ತನ್ನ ರಾಜಕೀಯ ಕಾರ್ಯಾಲಯವನ್ನು ಹೊಂದಿದೆ.

2001ರಲ್ಲಿ ಅಮೆರಿಕ ನೇತೃತ್ವದ ಮಿತ್ರಪಡೆಗಳು ಅಫ್ಘಾನಿಸ್ತಾನದ ಮೇಲೆ ನಡೆಸಿದ ಆಕ್ರಮಣವು 17 ವರ್ಷಗಳ ತಾಲಿಬಾನ್ ಆಳ್ವಿಕೆಯನ್ನು ಕೊನೆಗೊಳಿಸಿತ್ತಾದರೂ, ಈಗಲೂ ಬಂಡುಕೋರರು ದೇಶದ ಅರ್ಧದಷ್ಟು ಭಾಗದ ಮೇಲೆ ನಿಯಂತ್ರಣ ಸಾಧಿಸಿದ್ದಾರೆ ಹಾಗೂ ದಿನಂಪ್ರತಿ ಭದ್ರತಾಪಡೆಗಳು ಹಾಗೂ ಸರಕಾರಿ ಅಧಿಕಾರಿಗಳ ಮೇಲೆ ದಾಳಿ ನಡೆಸುತ್ತಿದ್ದಾರೆ. ಹೇರತ್ ಪ್ರಾಂತದಲ್ಲಿ ತಾಲಿಬಾನ್‌ನ ಮಾಜಿ ಗವರ್ನರ್ ಖೈರುಲ್ಲಾ ಖೈರ್‌ಖ್ವಾಹ್ ಹಾಗೂ ತಾಲಿಬಾನ್‌ನ ಮಾಜಿ ಮಿಲಿಟರಿ ವರಿಷ್ಠ ಮುಹ್ಮದ್ ಫಝಲ್ ಈ ಸುದೀರ್ಘ ಮಾತುಕತೆಯಲ್ಲಿ ಪಾಲ್ಗೊಂಡಿದ್ದರೆನ್ನಲಾಗಿದೆ.

ಕ್ವೋಟ್ ದಿನದಿಂದ ದಿನಕ್ಕೆ ಬಡವರ ಆಕ್ರಂದನವು ಪ್ರಬಲವಾಗುತ್ತಿದೆ ಆದರೆ ಆದರೆ ಕಡಿಮೆ ಸಂಖ್ಯೆಯಲ್ಲಿರುವ ಶ್ರೀಮಂತರ ಗದ್ದಲದ ನಡುವೆ ಅದು ಕೇಳಿಸುವುದು ಕಡಿಮೆಯಾಗುತ್ತಿದೆ. ಜೀವನದ ಹೆದ್ದೆರೆಯಲ್ಲಿ ಮುಳುಗೇಳುತ್ತಿರುವವರ ಆಕ್ರಂದನವನ್ನು ಆಲಿಸುವ ದಯೆಯನ್ನು ಪ್ರದರ್ಶಿಸಬೇಕೆಂದು ನಾವು ಕೋರುವ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News