​ಮಂಗಳೂರು ವಿವಿ: ನ.20ರ ಪದವಿ ಪರೀಕ್ಷೆ ಮುಂದೂಡಿಕೆ

Update: 2018-11-19 09:03 GMT

ಮಂಗಳೂರು, ನ.19: ಮೀಲಾದುನ್ನಬಿ ಪ್ರಯುಕ್ತ ನ.20ರಂದು ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಸಾರ್ವತ್ರಿಕ ರಜೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಅಂದು ನಡೆಯಬೇಕಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಎಲ್ಲಾ ಪದವಿ ಪರೀಕ್ಷೆಗಳನ್ನು ಮುಂದೂಡಲಾಗಿದೆ.

ಬದಲಾವಣೆಯಾದ ಪರೀಕ್ಷಾ ವೇಳಾಪಟ್ಟಿ ಇಂತಿವೆ.
ನ.20ರಂದು ಪೂರ್ವಾಹ್ನ ನಡೆಯಬೇಕಿದ್ದ ಬಿ.ಎ. ತೃತೀಯ ಸೆಮಿಸ್ಟರ್ ಪರೀಕ್ಷೆ ಡಿಸೆಂಬರ್ 7ರಂದು ಪೂರ್ವಾಹ್ನ ನಡೆಯಲಿದೆ. ಅಪರಾಹ್ನ ನಡೆಯಬೇಕಿದ್ದ ತೃತೀಯ ವರ್ಷದ ಬಿಎ ಪರೀಕ್ಷೆ ನ.22ರಂದು ಅಪರಾಹ್ನ ನಡೆಯಲಿದೆ.

ನ.20ರಂದು ಪೂರ್ವಾಹ್ನ ನಡೆಯಬೇಕಿದ್ದ ತೃತೀಯ ಸೆಮಿಸ್ಟರ್ ಬಿಎಸ್‌ಡಬ್ಲು ಪರೀಕ್ಷೆ ನ.23ರಂದು ಪೂರ್ವಾಹ್ನ ನಡೆಯಲಿದೆ. ತೃತೀಯ ಸೆಮಿಸ್ಟರ್ ಬಿಎಸ್ಸಿ ಪರೀಕ್ಷೆ ನ.30ರಂದು ಪೂರ್ವಾಹ್ನ ನಡೆಯಲಿದೆ. ತೃತೀಯ ಸೆಮಿಸ್ಟರ್ ಬಿ.ಕಾಂ ಪರೀಕ್ಷೆಯು ಡಿಸೆಂಬರ್ 3ರಂದು ಪೂರ್ವಾಹ್ನ ನಡೆಯಲಿದೆ. ಪಂಚಮ ಸೆಮಿಸ್ಟರ್ ಬಿ.ಕಾಂ ಪರೀಕ್ಷೆ ನ.29ರಂದು ಅಪರಾಹ್ನ ನಡೆಯಲಿದೆ. ತೃತೀಯ ಸೆಮಿಸ್ಟರ್ ಬಿಬಿಎ/ಬಿಬಿಎಂ ಪರೀಕ್ಷೆಯು ನ.30ರಂದು ಪೂರ್ವಾಹ್ನ ನಡೆಯಲಿದೆ.

ಪ್ರಥಮ ಸೆಮಿಸ್ಟರ್ ಬಿಎ(ಎಚ್.ಆರ್.ಡಿ.)ನ ಇಂಡಿವೀಜ್ಯುವಲ್ ಡೆವಲಪ್‌ಮೆಂಟ್ ವಿಷಯ ಪರೀಕ್ಷೆಯು ನ.22ರಂದು ಪೂರ್ವಾಹ್ನ, ಪ್ರಿನ್ಸಿಪಾಲ್ಸ್ ಆ್ಯಂಡ್ ಪ್ರಾಕ್ಟೀಸ್ ಆಫ್ ಮ್ಯಾನೇಜ್‌ಮೆಂಟ್ ವಿಷಯದ ಪರೀಕ್ಷೆ ನ.29ರಂದು ಪೂರ್ವಾಹ್ನ ನಡೆಯಲಿದೆ.

ತೃತೀಯ ಸೆಮಿಸ್ಟರ್ ಬಿ.ಎ.(ಎಚ್.ಆರ್.ಡಿ.) ಪರೀಕ್ಷೆಯನ್ನು ನ.20ರ ಪೂರ್ವಾಹ್ನಕ್ಕೆ ಮುಂದೂಡಲಾಗಿದೆ. ಪಂಚಮ ಸೆಮಿಸ್ಟರ್ ಬಿ.ಎ.(ಎಚ್.ಆರ್.ಡಿ.) ಪರೀಕ್ಷೆ ನ.29ರಂದು ಪೂರ್ವಾಹ್ನ ನಡೆಯಲಿದೆ. ಪಂಚಮ ಸೆಮಿಸ್ಟರ್ ಬಿ.ಎಚ್.ಎಂ. ಪರೀಕ್ಷೆ ಪರೀಕ್ಷೆ ನ.23ರಂದು ಪೂರ್ವಾಹ್ನ ನಡೆಯಲಿದೆ.

ಏಳನೇ ಸೆಮಿಸ್ಟರ್ ಬಿ.ಎಚ್.ಎಂ. ಪರೀಕ್ಷೆ ನ.23ರಂದು ಅಪರಾಹ್ನ ನಡೆಯಲಿದೆ. ಪ್ರಥಮ ಸೆಮಿಸ್ಟರ್ ಬಿಎಸ್ಸಿ(ಎಚ್.ಎಸ್.) ಪರೀಕ್ಷೆಯು ನ.23ರಂದು ಪೂರ್ವಾಹ್ನ, ಎಲ್.ಎಲ್.ಬಿ. 10ನೇ ಸೆಮಿಸ್ಟರ್ ಪರೀಕ್ಷೆ ನ.24ರಂದು ಅಪರಾಹ್ನ, ಎಲ್.ಎಲ್.ಬಿ. III LLB (OS) ಪರೀಕ್ಷೆಯು ನ.24ರಂದು ಅಪರಾಹ್ನ,  ಎಲ್.ಎಲ್.ಬಿ.  LLB (NR), IV LLB(NR) ಪರೀಕ್ಷೆಯು ನ.24ರಂದು ಪೂರ್ವಾಹ್ನ ಹಾಗೂ ಎಲ್.ಎಲ್.ಬಿ. II I LLB(OS) ಪರೀಕ್ಷೆಯು ನ.24ರಂದು ನಡೆಯಲಿದೆ ಎಂದು ಮಂಗಳೂರು ವಿವಿ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News