ಕಾಪು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ: ಕವಿಗಳಿಗೆ ಅಹ್ವಾನ

Update: 2018-11-19 14:25 GMT

ಕಾಪು, ನ.19: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಾಪು ತಾಲೂಕು ಘಟಕದ ಪ್ರಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಡಿಸೆಂಬರ್ ಮೂರನೇ ವಾರದಲ್ಲಿ ಜರಗಲಿದ್ದು, ಕಾಪು ತಾಲೂಕು ವ್ಯಾಪ್ತಿಯ ಉದಯೋನ್ಮುಖ ಕವಿಗಳಿಗೆ ಕವಿಗೋಷ್ಠಿಯಲ್ಲಿ ಅವಕಾಶ ಕಲ್ಪಿಸಲಾಗಿದೆ

ಕವನ ವಾಚನಕ್ಕೆ ಗರಿಷ್ಠ ಮೂರು ನಿಮಿಷಗಳ ಅವಕಾಶವಿದ್ದು, ತಾವು ರಚಿಸಿದ ಯಾವುದಾದರೂ ಮೂರು ಕವನಗಳನ್ನು ಸ್ವ ಕಿರು ಪರಿಚಯ ವಿಳಾಸ, ಮೊಬೈಲ್ ನಂಬ್ರ ಸಹಿತ ವಿದ್ಯಾ ಅಮ್ಮಣ್ಣಾಯ, ಗೌರವ ಕಾರ್ಯದರ್ಶಿ, ಕಸಾಪ ಕಾಪು, (ಉಪನ್ಯಾಸಕರು, ಸರಕಾರಿ ಪದವಿ ಕಾಲೇಜು ಕಾಪು) ಇವರಿಗೆ ನ.28ರ ಒಳಗೆ ತಲುಪುವಂತೆ ಕಳುಹಿಸಬೇಕು. ಆಯ್ಕೆಗೊಂಡ ಕವಿಗಳಿಗೆ ಮಾಹಿತಿ ನೀಡಲಾಗು ವುದು. ಈ ಹಿಂದೆ ಯಾವುದೇ ತಾಲೂಕು, ಜಿಲ್ಲಾ, ರಾಜ್ಯಮಟ್ಟದ ಸಮ್ಮೇಳನಗಳ ಕವಿಗೋಷ್ಠಿಯಲ್ಲಿ ಭಾಗವಹಿಸಿದವರಿಗೆ ಅವಕಾಶ ಇಲ್ಲ ಎಂದು ಕಸಾಪ ತಾಲೂಕು ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News