ಡಿಸಿ, ಎಸ್ಪಿ ವಿರುದ್ಧ ನವಯುಗ್ ಕಂಪೆನಿ ದೂರು: ಉಡುಪಿ ಜಿಲ್ಲಾಧಿಕಾರಿ

Update: 2018-11-19 15:01 GMT

ಪಡುಬಿದ್ರೆ, ನ.19: ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ಥಳೀಯ ವಾಹನಗಳ ಟೋಲ್ ಸಂಗ್ರಹಕ್ಕೆ ಸಂಬಂಧಿಸಿ ಉಡುಪಿ ಜಿಲ್ಲಾಧಿಕಾರಿ ಮತ್ತು ಪೊಲೀಸ್ ಅಧೀಕ್ಷಕರು ತಮಗೆ ಸಹಕರಿಸುತ್ತಿಲ್ಲ ಎಂದು ನವಯುಗ ಕಂಪೆನಿಯು ರಾಜ್ಯ ಸರಕಾರಕ್ಕೆ ದೂರು ನೀಡಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಹೇಳಿದ್ದಾರೆ.

ಹೆಜಮಾಡಿಯಲ್ಲಿ ಸೋಮವಾರ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ನವಯುಗ ಟೋಲ್ ಪ್ಲಾಝಾಗಳ ಕೇಂದ್ರ ಹೆದ್ದಾರಿ ಇಲಾಖೆ ಮತ್ತು ಎನ್‌ಎಚ್‌ಎಐಯು ಅನುಮತಿ ನೀಡಿದೆ. ರಾಜ್ಯ ಸರ್ಕಾರದ ವಿರುದ್ಧ ಆರ್‌ಬಿರ್ಟೇಶನ್‌ಗೂ ನವಯುಗ ಕಂಪೆನಿ ಅರ್ಜಿ ಹಾಕಿದೆ. ಅದು ರುಜುವಾತಾದಲ್ಲಿ ಕೋಟ್ಯಂತರ ರೂ. ದಂಡ ಮೊತ್ತವಾಗಿ ರಾಜ್ಯ ಸರ್ಕಾರ ಪಾವತಿಬೇಕಾಗುತ್ತದೆ ಎಂದು ನುಡಿದರು.

ಪಡುಬಿದ್ರೆ, ಕಟಪಾಡಿ ಹಲವೆಡೆಗಳಲ್ಲಿ ನಿರ್ಮಾಣ ಮಾಡಿರುವ ಸರ್ವೀಸ್ ರಸ್ತೆಗಳಲ್ಲಿ ರಿಕ್ಷಾ ನಿಲ್ದಾಣಗಳು ಸೇರಿದಂತೆ ಖಾಸಗಿ ವಾಹನಗಳು ಪಾರ್ಕಿಂಗ್ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ತಾನು ಈ ಬಗ್ಗೆ ಜಿಲ್ಲಾ ಪೊಲೀಸ್ ಅಧೀಕ್ಷಕರ ಗಮಕ್ಕೆ ತರುವುದಾಗಿಯೂ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News