ಯುಎಫ್‌ಸಿ ಮಕ್ಕಳ ಹಬ್ಬ: ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಗೆ ಪ್ರಶಸ್ತಿ

Update: 2018-11-19 15:34 GMT

ಉದ್ಯಾವರ, ನ.19: ಸ್ಥಳೀಯ ಸೇವಾ ಮತ್ತು ಸಾಂಸ್ಕೃತಿಕ ವೇದಿಕೆ ಉದ್ಯಾವರ ಫ್ರೆಂಡ್ಸ್ ಸರ್ಕಲ್ ಆಶ್ರಯದಲ್ಲಿ ಜರಗಿದ 9ನೇ ವರ್ಷದ ಉಡುಪಿ ಜಿಲ್ಲಾ ಮಟ್ಟದ ಪ್ರೌಢ ಮತ್ತು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಸಾಮೂಹಿಕ ನೃತ್ಯ ಸ್ಪರ್ಧೆ ‘ಯುಎಫ್‌ಸಿ ಮಕ್ಕಳ ಹಬ್ಬ-2018’ರಲ್ಲಿ ಕಾರ್ಕಳದ ಜೇಸಿಸ್ ಆಂಗ್ಲ ಮಾಧ್ಯಮ ಶಾಲಾ ತಂಡ ಎರಡೂ ವಿಭಾಗದ ಪ್ರಶಸ್ತಿಗಳನ್ನು ಗೆದ್ದುಕೊಂಡವು.

ಫ್ರೌಡ ಶಾಲಾ ವಿಭಾಗದಲ್ಲಿ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯ ಪೂಜಿತ ಮತ್ತು ಬಳಗ ಹಾಗೂ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಅದೇ ಶಾಲೆಯ ಸ್ವೀಕೃತಿ ಮತ್ತು ಬಳಗ ಪ್ರಥಮ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

ಉಳಿದ ಬಹುಮಾನಗಳ ವಿವರ: ಪ್ರೌಢಶಾಲಾ ವಿಭಾಗ:ದ್ವಿತೀಯ- ಹರ್ಷಲ್ ಮತ್ತು ಬಳಗ, ಬಾಲಕಿಯರ ಪದವಿ ಪೂರ್ವ ಕಾಲೇಜು ಉಡುಪಿ, ತೃತಿಯ- ಸುರಭಿ ಮತ್ತು ಬಳ, ಶ್ರೀನಾರಾಯಣ ಗುರು ಆಂಗ್ಲ ಮಾಧ್ಯಮ ಪ್ರೌಢಶಾಲೆ ಪಡುಬೆಳ್ಳೆ.

ಪ್ರಾಥಮಿಕ ಶಾಲಾ ವಿಭಾಗ: ದ್ವಿತೀಯ- ಕೃತಿ ಎಸ್. ಉಚ್ಚಿಲ್ ಮತ್ತು ಬಳಗ ವಿದ್ಯೋದಯ ಪಬ್ಲಿಕ್ ಸ್ಕೂಲ್ ಉಡುಪಿ, ತೃತೀಯ-ಆಶ್ಲೇಷ್ ಮತ್ತು ಬಳಗ ವಾಸುದೇವ ಕೃಪಾ ವಿದ್ಯಾ ಮಂದಿರ ಹಿರಿಯ ಪ್ರಾಥಮಿಕ ಶಾಲೆ ಬೈಲೂರು.

 ವಿಜೇತ ತಂಡಗಳಿಗೆ ಎರಡೂ ವಿಭಾಗಗಳಲ್ಲಿ ಪ್ರತ್ಯೇಕವಾಗಿ ರೂ. 5000, ರೂ.3000 ಹಾಗೂ ರೂ.2000 ಅಲ್ಲದೇ ಸ್ಮರಣಿಕೆ, ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಭಾಗವಹಿಸಿದ ಎಲ್ಲಾ ತಂಡಗಳಿಗೆ ರೂ.1000 ಮತ್ತು ಪುಸ್ತಕ ಸ್ಮರಣಿಕೆ, ಪ್ರಮಾಣ ಪತ್ರಗಳನ್ನು ನೀಡಲಾಯಿತು. ಉತ್ಸವದಲ್ಲಿ 29 ಪ್ರಾಥಮಿಕ ಶಾಲಾ ತಂಡಗಳು ಮತ್ತು 9 ಪ್ರೌಡಶಾಲಾ ತಂಡಗಳು ಭಾಗವಹಿಸಿದ್ದವು.

ಸಮಾರೋಪ: ಮಕ್ಕಳ ಹಬ್ಬದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ನೃತ್ಯ ನಿಕೇತನ ಕೊಡವೂರು ಇದರ ನಿರ್ದೇಶಕಿ ಮಾನಸಿ ಸುಧೀರ್, ಇಂದು ತೋರಿಕೆಗೆ ಮಕ್ಕಳು ಮಕ್ಕಳ ಹಾಗೆ ಕಾಣುತ್ತಾರೆ, ಆದರೆ ದೊಡ್ಡವರ ಹಾಗೆ ವರ್ತಿಸುತ್ತಾರೆ. ಅವರಲ್ಲಿ ಮಗುತನವೇ ಇಲ್ಲವಾಗಿದೆ. ಮಕ್ಕಳು ಇಂದು ನಗುವುದನ್ನೇ ಮರೆತಿದ್ದಾರೆ. ಇದಕ್ಕೆ ನಾವು ಹೆತ್ತವರು ಮತ್ತು ಶಿಕ್ಷಕರು ಕಾರಣ ಎಂದು ನನ್ನ ಅನಿಸಿಕೆ ಎಂದರು.

ನಾವು ಮಕ್ಕಳಿಗೆ ಅತೀಯಾದ ಒತ್ತಡವನ್ನು ಹಾಕುತ್ತಿದ್ದೇವೆ.ಅವರ ಇಚ್ಛೆಯಂತೆ ಇರಲು ಬಿಡೋದಿಲ್ಲ. ಶಿಕ್ಷಕರ ಅತಿಯಾದ ಶಿಸ್ತು, ಮಕ್ಕಳನ್ನು ಗಂಭೀರವಾಗಿಸಿದೆ. ಅವರ ತುಂಟತನ ಮಾಯವಾಗಿದೆ. ಮಕ್ಕಳು ಮಾತು ಕಡಿಮೆ ಮಾಡಲು ಮುಖ್ಯ ಕಾರಣ ಅತಿಯಾದ ಮೊಬೈಲ್ ಬಳಕೆ. ಮಕಳನ್ನು ಸಾಂಸ್ಕೃತಿಕವಾಗಿ ತೊಡಗಿಸಿದರೆ ಮಕ್ಕಳು ತಮ್ಮ ಸೃಜನಶೀಲತೆಯನ್ನು ಹೆಚ್ಚಿಸಿಕೊಳ್ಳುತ್ತಾರೆ ಎಂದರು.

ಉಡುಪಿ ಜಿಲ್ಲಾ ವಿದ್ಯಾಂಗ ಉಪನಿರ್ದೇಶಕ ಶೇಷಶಯಯನ ಕಾರಿಂಜ ಸಮಾರಂಭದ ಅದ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಅರ್.ಜೆ ಎರೋಲ್ ಗೊನ್ಸಾಲ್ವಿಸ್, ಉದ್ಯಾವರ ಬಿಲ್ಲವ ಮಹಾಜನ ಸಂಘದ ಅಧ್ಯಕ್ಷ ಪ್ರತಾಪ್ ಕುಮಾರ್, ಉದ್ಯಾವರ ಗ್ರಾಪಂ ಉಪಾದ್ಯಕ್ಷ ರಿಯಾಝ್ ಪಳ್ಳಿ ಉಪಸ್ಥಿತರಿದ್ದರು.

 ವೇದಿಕೆಯಲ್ಲಿ ನಿರ್ದೇಶಕರಾದ ಉದ್ಯಾವರ ನಾಗೇಶ್ ಕುಮಾರ್, ಶರತ್ ಕುಮಾರ್, ಚಂದ್ರಾವತಿ ಭಂಡಾರಿ, ಯು.ಪದ್ಮನಾಭ ಕಾಮತ್, ಉಪಾದ್ಯಕ್ಷ ಲೋಕನಾಥ್ ಬೊಳ್ಜೆ, ಕೋಶಾಧಿಕಾರಿ ಸೋಮಶೇಖರ್ ಸುರತ್ಕಲ್ ಉಪಸ್ಥಿತರಿದ್ದರು. 

ಮಾಜಿ ಅಧ್ಯಕ್ಷ ಯು. ಆರ್. ಚಂದ್ರಶೇಖರ್ ಸಾಗತಿಸಿ, ಉಪಾಧ್ಯಕ್ಷೆ ಸುಗಂಧಿ ಶೇಖರ್ ವಂದಿಸಿದರು.ಆಬಿದ್ ಆಲಿ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News