ಮಂಗಳೂರು: ಡಿಸಿಸಿ ಕಚೇರಿಯಲ್ಲಿ ಇಂದಿರಾಗಾಂಧಿ ಜನ್ಮದಿನಾಚರಣೆ

Update: 2018-11-19 16:31 GMT

ಮಂಗಳೂರು, ನ.19: ಮಾಜಿ ಪ್ರಧಾನಿ ದಿ.ಇಂದಿರಾ ಗಾಂಧಿ ಬಡವರಿಗೋಸ್ಕರ ಭೂಮಸೂದೆ ಕಾನೂನು ಬ್ಯಾಂಕ್ ರಾಷ್ಟ್ರೀಕರಣ, ಇಪ್ಪತ್ತು ಅಂಶಗಳ ಕಾರ್ಯಕ್ರಮ ಸಹಿತ ಅನೇಕ ಪ್ರಮುಖ ಯೋಜನೆಗಳ ಮೂಲಕ ದೇಶದ ಬಡವರ ಬಂಧುವಾದರು. ಆದರೆ ದೇಶಕ್ಕೋಸ್ಕರ ಬಲಿದಾನ ಮಾಡಿದ ರಾಷ್ಟ್ರನಾಯಕರನ್ನು ಇತ್ತೀಚಿನ ದಿನಗಳಲ್ಲಿ ಅವಮಾನಿಸುವ ಸನ್ನಿವೇಶಗಳು ಉದ್ಭಸಿರುವುದು ಖೇದಕರ ಸಂಗತಿ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.

ನಗರದ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಸೋಮವಾರ ಜರುಗಿದ ಇಂದಿರಾಗಾಂಧಿ ಜನ್ಮದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಸಭಾಧ್ಯಕ್ಷತೆ ವಹಿಸಿ ಮಾತನಾಡಿದ ಡಿಸಿಸಿ ಅಧ್ಯಕ್ಷ ಕೆ.ಹರೀಶ್ ಕುಮಾರ್ ಗಾಂಧೀಜಿಯ ಕನಸಿನ ಭಾರತವನ್ನು ನನಸಾಗಿಸುವಲ್ಲಿ ಇಂದಿರಾಗಾಂಧಿಯವರ ಕೊಡುಗೆ ಅಪಾರವಾದುದು ಎಂದರು.

ಮಾಜಿ ರಾಜ್ಯಸಭಾ ಸದಸ್ಯ ಬಿ.ಇಬ್ರಾಹೀಂ, ಪಿ.ವಿ. ಮೋಹನ್, ಎ.ಸಿ ಭಂಡಾರಿ, ಮಿಥುನ್ ರೈ, ಇಬ್ರಾಹೀಂ ಕೋಡಿಜಾಲ್, ಪದ್ಮನಾಭ ನರಿಂಗಾನ, ಸದಾಶಿವ ಶೆಟ್ಟಿ, ವಿಶ್ವಾಸ್ ಕುಮಾರ್ ದಾಸ್, ಲೋಕೇಶ್ ಹೆಗ್ಡೆ, ಸೇವಾದಳದ ಅಶ್ರಫ್ ಎಚ್.ಎಂ, ರಾಜಶೇಖರ್ ನಾಯಕ್, ಮುಹಮದ್ ಹನೀಫ್, ನಝೀರ್ ಬಜಾಲ್, ನೀರಜ್‌ಪಾಲ್, ಖಾಲಿದ್ ಉಜಿರೆ, ಪ್ರೇಮ್ ಬಳ್ಳಾಲ್‌ಭಾಗ್, ಆರೀಫ್ ಬಾವಾ, ಗಿರೀಶ್ ಆಳ್ವ, ರಮಾನಂದ ಪೂಜಾರಿ, ಮರಿಯಮ್ಮ ಥೋಮಸ್, ಬಿ.ಎಂ.ಭಾರತಿ, ಸಿ.ಎಂ.ಮುಸ್ತಫಾ, ಆಶಾ ಡಿಸಿಲ್ವಾ, ಸಬಿತಾ ಮಿಸ್ಕಿತ್, ಟಿ.ಕೆ. ಸುಧೀರ್, ಲ್ಯಾನ್ಸಿ ಲಾಟ್ ಪಿಂಟೋ, ನಾಗವೇಣಿ, ಟಿ.ಕೆ. ಶೈಲಜಾ, ನಾರಾಯಣ ಕೋಟ್ಯಾನ್, ಅಝೀಝ್ ಭಾಷಾ ಗುರುಪುರ, ಕೇಶವ ಮರೋಳಿ ಮತ್ತಿತರರು ಉಪಸ್ಥಿತರಿದ್ದರು.

ಸಂತೋಷ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸದಾಶಿವ ಉಳ್ಳಾಲ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News