ಫರಂಗಿಪೇಟೆಯಲ್ಲಿ ಮೀಲಾದುನ್ನಬಿ ಆಚರಣೆ

Update: 2018-11-20 06:17 GMT

ಫರಂಗಿಪೇಟೆ, ನ.20: ಇಲ್ಲಿನ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ಮಂಗಳವಾರ ಮೀಲಾದುನ್ನಬಿ ಆಚರಿಸಲಾಯಿತು 

ಖತೀಬ್ ಅಬ್ಬಾಸ್ ದಾರಿಮಿ ಧ್ವಜಾರೋಹಣಗೈದರು. ಅತಿಥಿಗಳಾಗಿ ಮಸೀದಿಯ ಆಡಳಿತ ಸಮಿತಿಯ ಅಧ್ಯಕ್ಷ ಮುಹಮ್ಮದ್ ಬಾವ, ಪ್ರಧಾನ ಕಾರ್ಯದರ್ಶಿ ಯೂಸುಫ್ ಅಲಂಕಾರ್, ಉಪಾಧ್ಯಕ್ಷ ಉಮರ್ ಫಾರೂಕ್, ಕೋಶಾಧಿಕಾರಿ ಮಜೀದ್, ಸದಸ್ಯರಾದ ಬಶೀರ್ ಟಿ.ಕೆ., ಅಬೂಬಕರ್ ಎಫ್.ಎಚ್. ಹಾಗೂ ಖಾದರ್ ಪಾವೂರು, ಹಮೀದ್, ಶಾಕಿರ್ ಎಚ್.ಪಿ., ರಶೀದ್ ಪಾವೂರು, ಇಸ್ಮಾಯೀಲ್ ಪಾವೂರು, ಪುತ್ತುಮೊನು, ಮುಸ್ತಫ ಮೇಲ್ಮನೆ, ಹಾಶಿರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News