1984ರ ಸಿಖ್ ವಿರೋಧಿ ಗಲಭೆ: ಒಬ್ಬ ಆರೋಪಿಗೆ ಗಲ್ಲುಶಿಕ್ಷೆ ವಿಧಿಸಿದ ಹೈಕೋರ್ಟ್, ಮತ್ತೋರ್ವನಿಗೆ ಜೀವಾವಧಿ

Update: 2018-11-20 17:14 GMT

ಹೊಸದಿಲ್ಲಿ,ನ.20: 1984ರ ಸಿಖ್ಖ್ ವಿರೋಧಿ ಗಲಭೆಯಲ್ಲಿ ಇಬ್ಬರು ವ್ಯಕ್ತಿಗಳನ್ನು ಹತ್ಯೆಗೈದ ಪ್ರಕರಣದ ಆರೋಪಿ ಯಶ್‌ಪಾಲ್ ಸಿಂಗ್ ಎಂಬಾತನಿಗೆ ದಿಲ್ಲಿಯ ನ್ಯಾಯಾಲಯವೊಂದು ಮಂಗಳವಾರ ಮರಣದಂಡನೆ ವಿಧಿಸಿ ತೀರ್ಪು ನೀಡಿದೆ.

ಪ್ರಕರಣದ ಇನ್ನೋರ್ವ ಆರೋಪಿ ನರೇಶ್ ಶೆರಾವತ್‌ಗೆ ದಿಲ್ಲಿ ಹೆಚ್ಚುವರಿ ಸೆಶನ್ಸ್ ನ್ಯಾಯಾಧೀಶ ಅಜಯ್ ಪಾಂಡೆ ಅವರು ಜೀವಾವಧಿ ಶಿಕ್ಷೆ ಘೋಷಿಸಿದ್ದಾರೆ. 1984ರ ಸಿಖ್ಖ್ ವಿರೋಧಿ ಗಲಭೆಗಳಲ್ಲಿ ಇಬ್ಬರು ವ್ಯಕ್ತಿಗಳನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿ ಯಶ್‌ಪಾಲ್ ಸಿಂಗ್ ಹಾಗೂ ನರೇಶ್ ಶೆರಾವತ್ ಅವರನ್ನು ದೋಷಿಗಳೆಂದು ಸೆಶನ್ಸ್ ನ್ಯಾಯಾಲಯವು ನವೆಂಬರ್ 14ರಂದು ತೀರ್ಪು ನೀಡಿದ್ದು, ಶಿಕ್ಷೆಯ ಪ್ರಮಾಣವನ್ನು ನ.20ರಂದು ಪ್ರಕಟಿಸುವುದಾಗಿ ತಿಳಿಸಿತ್ತು. ದಿಲ್ಲಿ ಪೊಲೀಸರು 1994ರಲ್ಲಿ ಸಾಕ್ಷಾಧಾರಗಳ ಕೊರತೆಯ ಹಿನ್ನೆಲೆಯಲ್ಲಿ ಪ್ರಕರಣವನ್ನು ಮುಚ್ಚುಗಡೆಗೊಳಿಸಿತ್ತು. ಆದಾಗ್ಯೂ, ದಿಲ್ಲಿ ಸಿಖ್ ಗಲಭೆಗೆ ಸಂಬಂಧಿಸಿ ನೇಮಕಗೊಂಡ ವಿಶೇಷ ತನಿಖಾ ತಂಡವು ಈ ಪ್ರಕರಣವನ್ನು ಮರುತನಿಖೆಗಾಗಿ ಕೈಗೆತ್ತಿಕೊಂಡಿತ್ತು.

-ಕಡ್ಡಾಯ ರಜೆ ಮೇಲೆ ಕೇಂದ್ರ ಸರಕಾರ ಕಳುಹಿಸಿರುವುದನ್ನು ಪ್ರಶ್ನಿಸಿ ಅಲೋಕ್ ವರ್ಮಾ ಸಲ್ಲಿಸಿರುವ ಮನವಿಯನ್ನು ನ್ಯಾಯಾಲಯ ವಿಚಾರಣೆ ನಡೆಸಿತು. -ವರ್ಮಾ ಅವರು ಕೇಂದ್ರ ಜಾಗೃತ ಆಯೋಗಕ್ಕೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದ ಪ್ರತಿಕ್ರಿಯೆ ಮಾಧ್ಯಮಗಳಿಗೆ ಸೋರಿಕೆ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News