ಮಣಿಪಾಲ: ಹೃದಯ ರೋಗಗಳ ಕುರಿತು ವಿಚಾರಸಂಕಿರಣ

Update: 2018-11-20 13:27 GMT

ಮಣಿಪಾಲ, ನ.20: ಮಣಿಪಾಲದ ಕಸ್ತೂರ್‌ಬಾ ವೈದ್ಯಕೀಯ ಕಾಲೇಜಿನ ಹೃದ್ರೋಗ ವಿಭಾಗ ಹಾಗೂ ಹೃದಯ ಶಸ್ತ್ರಚಿಕಿತ್ಸಾ ವಿಭಾಗ, ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಹೃದಯ ರಕ್ತನಾಳ ತಂತ್ರಜ್ಞಾನ ವಿಭಾಗ, ಸೋಹಾಸ್ ಮಣಿಪಾಲ ಗಳ ಸಂಯುಕ್ತ ಆಶ್ರಯದಲ್ಲಿ 9ನೇ ಮಣಿಪಾಲ ಕಾರ್ಡಿಯಾಲಜಿ ಅಪ್‌ಡೇಟ್ ಮಣಿಪಾಲದ ಡಾ.ಟಿಎಂಎಪೈ ಸಭಾಂಗಣದಲ್ಲಿ ನಡೆಯಿತು.

ಈ ಬಾರಿ ಜನ್ಮಜಾತ ಹೃದಯ ರೋಗಗಳು ಮತ್ತು ಇತ್ತೀಚಿನ ಸಂಶೋಧನೆಗಳ ಕುರಿತು ಉಪನ್ಯಾಸಗಳು, ಚರ್ಚೆ, ಸಂವಾದಗಳು ನಡೆದವು. ದೇಶದಾದ್ಯಂತದಿಂದ ಆಗಮಿಸಿದ ತಜ್ಞರು ಜನ್ಮಜಾತ ಹೃದ್ರೋಗಗಳ ಕುರಿತು ಹೊಸ ಬೆಳಕು ಚೆಲ್ಲಿದಲ್ಲರಲ್ಲದೇ ಈ ಬಗ್ಗೆ ಸಂವಾದದಲ್ಲೂ ಪಾಲ್ಗೊಂಡರು.

ವಿಚಾರಸಂಕಿರಣವನ್ನು ಮಣಿಪಾಲ ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್. ಎಸ್.ಬಲ್ಲಾಳ್ ಉದ್ಘಾಟಿಸಿದರು. ಮಾಹೆಯ ಸಹ ಉಪಕುಲಪತಿ ಡಾ. ಪೂರ್ಣಿಮಾ ಬಾಳಿಗಾ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸೋಹಾಸ್ ಮಣಿಪಾಲದ ಡೀನ್ ಡಾ. ಬಿ.ರಾಜಶೇಖರ್ ಮತ್ತು ಕೆಎಂಸಿಯ ಸಹ ಡೀನ್ ಡಾ.ಚಿರಂಜಯ್ ಮುಖೋಪಾಧ್ಯಾಯ್ ಉಪಸ್ಥಿತರಿದ್ದರು.

ಕಸ್ತೂರ್ಬಾ ಆಸ್ಪತ್ರೆಯ ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ.ಟಾಮ್ ದೇವಾಸಿಯಾ ಸ್ವಾಗತಿಸಿದರೆ, ಡಾ. ಕೃಷ್ಣಾನಂದ ನಾಯಕ್ ವಂದಿಸಿದರು. ದೇಶದ ವಿವಿದೆಡೆಗಳಿಂದ ಆಗಮಿಸಿದ್ದ 500ಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News