ಡಿ. 5ರಿಂದ ವಾಯು ಪಡೆ ನೇಮಕಾತಿ ರ್ಯಾಲಿ

Update: 2018-11-20 13:32 GMT

ಉಡುಪಿ, ನ.20: ಭಾರತೀಯ ವಾಯುಪಡೆಯು ಗ್ರೂಪ್ ವೈ(ಐಎಎಫ್ (ಎಸ್)) ಟ್ರೇಡ್‌ನಲ್ಲಿ ಏರ್‌ಮೆನ್‌ರನ್ನು ಆಯ್ಕೆ ಮಾಡುವುದಕ್ಕೆ ಸಂಬಂಧಿಸಿ ದಂತೆ ಮೈಸೂರು ನಜರ್‌ಬಾದ್ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನೇಮಕಾತಿ ರ್ಯಾಲಿಯನ್ನು ಆಯೋಜಿಸಲಾಗಿದೆ.

 ಡಿ.5ರಂದು ದೇಹದಾರ್ಢ್ಯತೆ, ಲಿಖಿತ ಪರೀಕ್ಷೆ(ಎಟಿ-ಐ, ಏಟಿ-ಐಐ, ಡಿಎಫ್‌ಟಿ) ಮತ್ತು ಡಿ.6ರಂದು ಅರ್ಜಿಗಳ ಭರ್ತಿಯು ಬೆಳಗಾವಿ, ಬಾಗಲ ಕೋಟೆ, ವಿಜಯಪುರ, ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಧಾರವಾಡ ಮತ್ತು ಉತ್ತರ ಕನ್ನಡ(ಕಾರವಾರ) ಜಿಲ್ಲೆಯಲ್ಲಿ ನಡೆಯಲಿದೆ.

ಡಿ.7ರಂದು ದೇಹದಾರ್ಢ್ಯತೆ, ಲಿಖಿತ ಪರೀಕ್ಷೆ(ಎಟಿ-ಐ, ಏಟಿ-ಐಐ, ಡಿಎಫ್‌ಟಿ ಮತ್ತು ಡಿ.8ರಂದು ಅರ್ಜಿಗಳ ಭರ್ತಿಯು ಬೆಂಗಳೂರು, ರಾಮ ನಗರ, ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಮೈಸೂರು, ಮಡಿಕೇರಿ, ದಕ್ಷಿಣ ಕನ್ನಡ(ಮಂಗಳೂರು), ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು, ಹಾಸನ, ಗದಗ, ಕೊಪ್ಪಳ, ಹಾವೇರಿ, ಬಳ್ಳಾರಿ, ದಾವಣಗೆರೆ, ಶಿವಮೊಗ್ಗ ಮತ್ತು ಉಡುಪಿಯಲ್ಲಿ ನಡೆಯಲಿದೆ.

ಡಿ.5 ಮತ್ತು 7ರಂದು ನಡೆಯುವ ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣ ರಾಗುವ ಅಭ್ಯರ್ಥಿಗಳು ನಂತರದ ದಿನದಂದು ಉಳಿದ ಆಯ್ಕೆ ಪ್ರಕ್ರಿಯೆಗಾಗಿ ನಡೆಯುವ ಲಿಖಿತ ಪರೀಕ್ಷೆಗೆ ಹಾಜರಾಗಬೇಕಾಗಿರುತ್ತದೆ. ಕರ್ನಾಟಕ ರಾಜ್ಯಕ್ಕೆ ಸೇರಿದ ಭಾರತೀಯ ನಾಗರಿಕರು ಅಥವಾ ಕರ್ನಾಟಕ ರಾಜ್ಯದಲ್ಲಿ ಪಿಯುಸಿ/ 10+2/ ಇಂಟರ್‌ಮೀಡಿಯೇಟ್ ಪೂರ್ಣಗೊಳಿಸಿರುವ ಅವಿವಾಹಿತ ಪುರುಷರು ಮಾತ್ರ ಅರ್ಹರಾಗಿರುತ್ತಾರೆ. ಅಭ್ಯರ್ಥಿಯು ಜು.14, 1998 ರಿಂದ 26ನೇ ಜೂನ್ 2002ರ ನಡುವೆ ಜನಿಸಿರಬೇಕು. ಕನಿಷ್ಟ 152.5 ಸೆಂ.ಮೀ. ಎತ್ತರವಿರಬೇಕು.

ಪಿ.ಯು.ಸಿ/ 10+2/ ಇಂಟರ್‌ಮೀಡಿಯೇಟ್/ ಮಾಧ್ಯಮಿಕ ಶಿಕ್ಷಣ ಮಂಡಳಿಗಳ ಸಮಿತಿಯು ಅನುಮೋದಿಸಿರುವ ಸಮಾನ ಪರೀಕ್ಷೆಯನ್ನು ಯಾವುದೇ ವಿಭಾಗ/ ವಿಷಯಗಳಲ್ಲಿ ಸರಾಸರಿ ಕನಿಷ್ಟ ಶೇ.50 ರಷ್ಟು ಅಂಕಗಳು ಮತ್ತು ಇಂಗ್ಲಿಷ್‌ನಲ್ಲಿ ಕನಿಷ್ಟ ಶೇ.50ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರ ಬೇಕು. ಅರ್ಹ ಅಭ್ಯರ್ಥಿಗಳು ಡಿ.5 ಮತ್ತು 7ರಂದು 9 ಗಂಟೆಗೆ ಮೊದಲು, ಅಂಕಪಟ್ಟಿಯ ಮೂಲಪ್ರತಿ ಮತ್ತು ಮೆಟ್ರಿಕ್ಯಲೇಷನ್, ಇಂಟರ್‌ಮೀಡಿ ಯೇಟ್(10+2/ 11ನೆ ಪಿಯುಸಿ) ಉತ್ತೀರ್ಣ ಪ್ರಮಾಣ ಪತ್ರ ಮತ್ತು ಎಲ್ಲ ಪ್ರಮಾಣಪತ್ರಗಳ ಸ್ವಯಂ ಧೃಢೀಕೃತ 4 ನಕಲು ಪ್ರತಿಗಳು, ವಾಸಸ್ಥಳದ ಪ್ರಮಾಣ ಪತ್ರ(ಬೇರೆ ಕಡೆ ಶಿಕ್ಷಣ ಪಡೆದಿರುವ ಅ್ಯರ್ಥಿಗಳಿಗೆ) ಮತ್ತು 8 ಪಾಸ್‌ಪೋರ್ಟ್ ಅಳತೆಯ ಇತ್ತೀಚಿನ ಬಣ್ಣದ ಭಾವಚಿತ್ರಗಳೊಂದಿಗೆ ರ್ಯಾಲಿ ಸ್ಥಳದಲ್ಲಿ ವರದಿ ಮಾಡಿಕೊಳ್ಳಬೇಕು.

ಹೆಚ್ಚಿನ ಮಾಹಿತಿಗಾಗಿ ಭಾರತೀಯ ವಾಯುಪಡೆಯ ಜಾಲತಾಣವಾದ www.airmenselection.cdac.in.7asc-ks@gov.in ಗೆ ಲಾಗ್‌ಆನ್ ಆಗಿ ಮಾಡುವುದು ಅಥವಾ 7 ಏರ್‌ಮೆನ್ ಆಯ್ಕೆ ಕೇಂದ್ರ, ಕಬ್ಬನ್ ರಸ್ತೆ, ಬೆಂಗಳೂರು, ದೂರವಾಣಿ ಸಂಖ್ಯೆ: 080-25592199, ಇ-ಮೇಲ್ ಅನ್ನು ಸಂಪರ್ಕಿಸಬಹುದಾಗಿದೆ. ಅಭ್ಯರ್ಥಿಗಳು ಹತ್ತಿರದ ಜಿಲ್ಲಾ ಉದ್ಯೋಗ ಅಧಿಕಾರಿಯವರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News