ಮಕ್ಕಳ ಕುರಿತ ಉಪನ್ಯಾಸ: ಆರೋಗ್ಯವಂತ ಶಿಶು ಸ್ಪರ್ಧೆ

Update: 2018-11-20 13:33 GMT

ಉಡುಪಿ, ನ.20: ಕುತ್ಪಾಡಿ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯು ರ್ವೇದ ಆಸ್ಪತ್ರೆ ಬಾಲರೋಗ ವಿಭಾಗ ಮತ್ತು ಚೆನ್ನೈಯ ಫಾರ್ಮಾ ಪ್ರೊಡಕ್ಟ್ಸ್‌ನ ಜಂಟಿ ಆಶ್ರಯದಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಮಕ್ಕಳಲ್ಲಿ ಕಂಡುಬರುವ ನಡುವಳಿಕೆಯ ತೊಂದರೆಗಳು ಮತ್ತು ಪರಿಹಾರ ಎಂಬ ವಿಷಯದ ಕುರಿತು ಮಾಹಿತಿ ಕಾರ್ಯಕ್ರಮ ಹಾಗೂ ಆರೋಗ್ಯವಂತ ಶಿಶು ಹಾಗೂ ಛದ್ಮವೇಷ ಸ್ಪರ್ಧೆಗಳನ್ನು ನ.14ರಂದು ಏರ್ಪಡಿಸಲಾಗಿತ್ತು.

ಅಧ್ಯಕ್ಷತೆಯನ್ನು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ.ಮಮತಾ ಕೆ.ವಿ. ವಹಿಸಿದ್ದರು. ಮುಖ್ಯ ಅತಿಥಿಯಾಗಿ ಕಾಯಚಿಕಿತ್ಸಾ ಮತ್ತು ಮಾನಸರೋಗ ವಿಭಾಗದ ಸಹಪ್ರಾಧ್ಯಾಪಕ ಡಾ.ವಿಜಯೇಂದ್ರ ಭಟ್, ಬಾಲರೋಗ ವಿಭಾಗದ ಮುಖ್ಯಸ್ಥ ಡಾ.ಪೃಥ್ವಿರಾಜ್ ಪುರಾಣಿಕ್, ಡೆಪ್ಯೂಟಿ ರೀಜನಲ್ ಸೇಲ್ಸ್ ಮ್ಯಾನೇಜರ್ ಆರ್.ಜಿ.ಕುಲಕರ್ಣಿ ಉಪಸ್ಥಿತರಿದ್ದರು.

ಛದ್ಮವೇಷ ಸ್ಪರ್ಧೆಯಲ್ಲಿ ಬೇಬಿ ಕನಿಷ್ಕಾ ಪ್ರಥಮ, ಮಾಸ್ಟರ್ ಅನ್ವಿತ್ ಆರ್. ಶೆಟ್ಟಿಗಾರ್ ದ್ವಿತೀಯ ಹಾಗೂ ಆರೋಗ್ಯವಂತ ಶಿಶು ಸ್ಪರ್ಧೆಯಲ್ಲಿ ಶೌರ್ಯ, ಮೊಹಮ್ಮದ್ ಅಯಾಸ್, ಆಶ್ವಿ ಪ್ರಥಮ ಹಾಗೂ ಹಿಮಾನಿ, ಶಾನ್ ಕಾರ್ಡೂಸಾ, ಭವಿಷ್ ದ್ವಿತೀಯ ಬಹುಮಾನ ಪಡೆದರು. ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಪ್ರಮಾಣಪತ್ರ ಹಾಗೂ ಆಟಿಕೆಗಳನ್ನು ವಿತರಿಸಲಾಯಿತು.

ಛದ್ಮವೇಷ ಸ್ಪರ್ಧೆಯ ನಿರ್ಣಯಕಾರರಾಗಿ ಡಾ.ರಮಾದೇವಿ ಜಿ., ಡಾ. ಅಮಲ ಜ್ಯೋತಿ ಹಾಗೂ ಆರೋಗ್ಯವಂತ ಶಿಶು ಸ್ಪರ್ಧೆಯ ನಿರ್ಣಾಯಕಾರ ರಾಗಿ ಡಾ.ಪೃಥ್ವಿರಾಜ್ ಪುರಾಣಿಕ್, ಡಾ.ಚೇತನ್ ಕುಮಾರ್, ಡಾ.ಶರಶ್ಚಂದ್ರ ಆರ್. ಸಹಕರಿಸಿದರು. ಸ್ನಾತಕೋತ್ತರ ವಿದ್ಯಾರ್ಥಿಗಳಾದ ಡಾ.ಪೃಥ್ವಿರಾಜ್ ಪುರಾಣಿಕ್ ಸ್ವಾಗತಿಸಿದರು. ಡಾ.ಶ್ರಾವ್ಯ ವಂದಿಸಿದರು. ಡಾ.ಕಾವ್ಯ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News