ಮಂಗಳೂರಿನಲ್ಲಿ ಬೃಹತ್ ಮೀಲಾದುನ್ನಬಿ ಮೆರವಣಿಗೆ

Update: 2018-11-20 14:40 GMT

ಮಂಗಳೂರು, ನ.20: ಜಗತ್ತಿಗೆ ಶಾಂತಿ ಮತ್ತು ಸೌಹಾರ್ದ ಸಂದೇಶ ಸಾರಿದ ಲೋಕ ಪ್ರವಾದಿ ಹಝ್ರತ್ ಮುಹಮ್ಮದ್‌ರ ಜನ್ಮ ದಿನಾಚರಣೆ (ಮೀಲಾದುನ್ನಬಿ) ಅಂಗವಾಗಿ ಮಂಗಳೂರು ಸೋಶಿಯಲ್ ಸರ್ವಿಸ್ ಸೆಂಟರ್ ವತಿಯಿಂದ ಮಂಗಳವಾರ ಸಂಜೆ ನಗರ ಕೇಂದ್ರ ಜುಮ್ಮಾ ಮಸೀದಿಯಿಂದ ಬಾವುಟಗುಡ್ಡೆ ಈದ್ಗಾ ಮಸೀದಿವರೆಗೆ ಹಮ್ಮಿಕೊಳ್ಳಲಾದ ಬೃಹತ್ ಮೆರವಣಿಗೆಯನ್ನು ದ.ಕ. ಜಿಲ್ಲಾ ಖಾಝಿ ಅಲ್ ಹಾಜಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಚಾಲನೆ ನೀಡಿದರು.

ಶಾಂತಿ, ಸೌಹಾರ್ದದಿಂದ ಮತ್ತು ಲೋಕ ಪ್ರವಾದಿ ಹಝ್ರತ್ ಮುಹಮ್ಮದ್‌ರ ಸ್ವಲಾತ್ ಹೇಳುತ್ತಾ ಮೆರವಣಿಗೆಯನ್ನು ಅಚ್ಚುಕಟ್ಟಾಗಿ ಸಾಗಬೇಕೆಂದು ಖಾಝಿ ಹಿತವಚನ ನೀಡಿದರು.

ಮೀಲಾದುನ್ನಬಿ ಪ್ರಯುಕ್ತ ಬಂದರ್ ಫ್ರೆಂಡ್ಸ್, ಗಲ್ಲಿ ಗೈಸ್, ಹರಿ ಕ್ಯಾನ್, ಬಂದರ್ ಯಂಗ್ ಫ್ರೆಂಡ್ಸ್, ಪೈಸ್‌ಗ್ರೂಪ್, ಟಿ.ಸಿ.ವೆಲ್ಫೇರ್ ಫೌಂಡೇಶನ್, ಕಸೈಗಳ್ಳಿ ಫ್ರೆಂಡ್ಸ್, ಕಂಡತ್‌ಪಳ್ಳಿ ಫ್ರೆಂಡ್ಸ್, ಜೆಎಂಸಿ ಫ್ರೆಂಡ್ಸ್, ಸಾಮ್ನ ಗ್ರೂಪ್, ಟಿ.ಸಿ.ಫ್ರೆಂಡ್ಸ್, ಕುದ್ರೋಳಿ ಫ್ರೆಂಡ್ಸ್, ಬೆಂಗರೆ ಫ್ರೆಂಡ್ಸ್, ಕಂದಕ್ ಫ್ರೆಂಡ್ಸ್ ಗ್ರೂಪ್‌ಗಳು ಭಾಗವಹಿದ್ದವು.

ಈ ಸಂದರ್ಭ ಮಂಗಳೂರು ಸೋಶಿಯಲ್ ಸರ್ವಿಸ್ ಸೆಂಟರ್‌ನ ಗೌರವಾಧ್ಯಕ್ಷ ಮಾಜಿ ಮೇಯರ್ ಕೆ.ಅಶ್ರಫ್, ಕೇಂದ್ರ ಜುಮ್ಮಾ ಮಸೀದಿಯ ಖತೀಬ್ ಸದಕತ್ತುಲ್ಲಾ ಫೈಝಿ, ಕೇಂದ್ರ ಜುಮ್ಮಾ ಮಸೀದಿ ಸಮಿತಿಯ ಹಾಜಿ ಮುಹಮ್ಮದ್ ಹನೀಫ್, ಹಾಜಿ ಬಾಷಾ ತಂಙಳ್, ಅದ್ದು ಹಾಜಿ, ಮಂಗಳೂರು ಸೋಶಿಯಲ್ ಸೆಂಟರ್‌ನ ಅಧ್ಯಕ್ಷ ನಝೀರ್ ಅಹ್ಮದ್, ಉಪಾಧ್ಯಕ್ಷ ಕೆ.ಬಶೀರ್, ಪ್ರಧಾನ ಕಾರ್ಯದರ್ಶಿ ಮುನಾವರ್, ಜೊತೆ ಕಾರ್ಯದರ್ಶಿ ಖಲೀಲ್ ಇಬ್ರಾಹೀಂ, ಖಜಾಂಚಿ ಸಂಚಾಲಕ ಕೆ.ಇ.ರಶೀದ್, ಮುಹಮ್ಮದ್ ಅಶ್ರಫ್ ಬಿ., ಸಲಹೆಗಾರ ಇಬ್ರಾಹೀಂ ಮತ್ತು ಅಸ್ಲಾಂ ಸದಸ್ಯರಾದ ಮುಹಮ್ಮದ್ ಶರೀಫ್, ಎಂ.ಎ.ಮನ್ಸೂರು, ಸಿದ್ದೀಕ್ ಕೋಟೆಕಣಿ, ನೌಫಲ್, ಜಾವೀದ್, ಸೀರಾಜ್, ನೌಶಾದ್, ಅಶ್ರಫ್ ಪಾಯ, ನಹೀಮ್ ಪಪ್ಪು, ರಿಯಾಝ್ ಹಾಜಿ, ಝಾಕಿರ್ ಕೋಯಿ, ಎಂ.ಎ.ರಿಝ್ವಾನ್, ಫರ್ಮಾನ್, ಎಂ.ಎಚ್.ಅಂಜದ್, ಎಂ.ಕೆ.ಫಯಾಝ್, ಅಬ್ದುಲ್ ಲತೀಫ್, ಅಬ್ದುಲ್ ಸಮೀರ್, ಅರ್ಶದ್, ಇರ್ಫಾನ್, ಎಫ್.ಎಂ., ಫಾರೂಕ್ ಭಯ್ಯ, ಕೆ.ಪಿ.ಆಸಿಫ್, ನಾಶೀರ್ ಎ.ಕೆ. ಮತ್ತಿತರರು ಭಾಗವಹಿಸಿದ್ದರು.

ಬಂದರ್ ನಗರ ಕೇಂದ್ರ ಜುಮ್ಮಾ ಮಸೀದಿಯಿಂದ ಬಾವುಟಗುಡ್ಡೆ ಈದ್ಗಾ ಮಸೀದಿವರೆಗೆ ಹಮ್ಮಿಕೊಳ್ಳಲಾದ ಬೃಹತ್ ಮೆರವಣಿಗೆಯಲ್ಲಿ 10,000 ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News