ಉಡುಪಿ:ಪ್ರಬೋಧೋತ್ಸವ ಭಜನಾ ಕಾರ್ಯಕ್ರಮ ಉದ್ಘಾಟನೆ

Update: 2018-11-20 15:17 GMT

ಉಡುಪಿ, ನ. 20: ಭಜನೆಯಿಂದ ಮನುಷ್ಯನ ಮನಸ್ಸು ಏಕಾಗ್ರಗೊಳ್ಳಲು ಸಾಧ್ಯವೇ ಹೊರತು ವ್ಯಘ್ರಗೊಳ್ಳುವಿದಲ್ಲ. ಆದುದರಿಂದ ಮನೆಮಂದಿ ಎಲ್ಲರು ಭಜನೆ ಮಾಡುವುದರಿಂದ ಇಡೀ ಮನೆಯಲ್ಲಿ ಆನಂದದ ವಾತಾವರಣ ಸೃಷ್ಠಿ ಯಾಗುತ್ತದೆ ಎಂದು ಪರ್ಯಾಯ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಉಡುಪಿ ಪರ್ಯಾಯ ಪಲಿಮಾರು ಮಠ, ಕೃಷ್ಣ ಮಠದ ಆಶ್ರಯದಲ್ಲಿ ಉಡುಪಿ ಜಿಲ್ಲಾ ಭಜನಾ ಮಂಡಳಿಗಳ ಒಕ್ಕೂಟದ ಸಹಯೋಗದೊಂದಿಗೆ ಸಾಮೂಹಿಕ ಗೋಷ್ಠಿ ಗಾನದ ಪ್ರಬೋಧೋತ್ಸವ ಭಜನಾ ಕಾರ್ಯಕ್ರಮವನ್ನು ಮಂಗಳವಾರ ರಾಜಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಮಗು ಸಮಾನವಾದ ದೇವರನ್ನು ಭಜನೆಯಂತಹ ಹಾಡಿನ ಮಾರ್ಗದಿಂದ ಮಾತ್ರ ಎಬ್ಬಿಸಲು ಸಾಧ್ಯ. ರಾಗ, ಭಕ್ತಿ, ಪ್ರೀತಿಯಿಂದ ಕೂಡಿದ ಹಾಡಿಗೆ ಭಗವಂತ ಎದ್ದು ಬರುತ್ತಾನೆ. ಭಜನೆ ಅಂದರೆ ಭಗವಂತನ ಜನ ಎಂಬುದಾಗಿದೆ ಎಂದರು.

ವಿದ್ವಾಂಸರಾದ ವೆಂಕಟೇಶ್ ಆಚಾರ್ಯ, ಕೆ.ಅಪ್ಪಣ್ಣ, ವಿದ್ವಾನ್ ಸದಾನಂದ ಶಾಸ್ತ್ರೀ, ನಿರಂತರ ಭಜನೆಯ ಸಂಚಾಲಕ ಗುರುರಾಜ ಆಚಾರ್ಯ, ಒಕ್ಕೂಟದ ಜಿಲ್ಲಾಧ್ಯಕ್ಷ ಭೋಜರಾಜ್ ಕಿದಿಯೂರು, ಪ್ರಧಾನ ಕಾರ್ಯದರ್ಶಿ ಎ.ಶಿವ ಕುಮಾರ್ ಅಂಬಲಪಾಡಿ ವೇದಿಕೆಯಲ್ಲಿದ್ದರು.

ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸುಂದರ್ ಜತ್ತನ್, ಉಡುಪಿ ತಾಲೂಕು ಅಧ್ಯಕ್ಷ ಧನಂಜಯ ಕಾಂಚನ್ ಮಲ್ಪೆ, ಕಾರ್ಕಳ ತಾಲೂಕು ಅಧ್ಯಕ್ಷ ಶ್ರೀಕಾಂತ್ ಪ್ರಭು ಪಳ್ಳಿ, ಕುಂದಾಪುರ ತಾಲೂಕು ಅಧ್ಯಕ್ಷ ಜಯಕರ್ ಪೂಜಾರಿ ಗುಲ್ವಾಡಿ, ಕಿಶೋರ್ ಕುಮಾರ್ ಕನ್ನರ್ಪಾಡಿ, ಕಿರಣ್ ಕುಂದರ್ ಮಲ್ಪೆಮೊದಲಾದವರು ಉಪಸ್ಥಿತರಿದ್ದರು.

ಬಳಿಕ 450 ಭಜನಾ ಮಂಡಳಿಗಳ ಸದಸ್ಯರ ಕೂಡುವಿಕೆಯಿಂದ ಶ್ರೀಕೃಷ್ಣ ಮಠದ ಮಧ್ವ ಸರೋವರದ ಸುತ್ತ ಕುಳಿತು ಸಾಮೂಹಿಕ ಗೋಷ್ಠಿ ಗಾನದ ಭಜನಾ ಕಾರ್ಯಕ್ರಮ ಜರಗಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News