ಭಾರತದಲ್ಲಿ ಸೌರಶಕ್ತಿ ಮೇಲ್ಛಾವಣಿ ಉತ್ಫಾದನಾ ಘಟಕಗಳಿಗೆ ಹೆಚ್ಚಿನ ಅವಕಾಶವಿದೆ: ಡೇಮಿಯನ್ ಮಿಲ್ಲರ್

Update: 2018-11-20 15:21 GMT

ಮಂಗಳೂರು, ನ. 20: ದೇಶದಲ್ಲಿ ಮೇಲ್ಛಾವಣಿಯ ಸೌರ ಶಕ್ತಿ ಸ್ಥಾಪನೆಗೆ ಸಾಕಷ್ಟು ಬೇಡಿಕೆ ಮತ್ತು ಅವಕಾಶವಿದೆ ಎಂದು ಅರ್ಬ್ ಎನರ್ಜಿ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡೇಮಿಯನ್ ಮಿಲ್ಲರ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಭಾರತದಲ್ಲಿ ಒಟ್ಟು 40 ಮೆಗಾವ್ಯಾಟ್ ಸಾಮರ್ಥ್ಯದ 1,60,000 ಮೇಲ್ಛಾವಣಿ ಸೌರಶಕ್ತಿ ಉತ್ಫಾದನಾ ಘಟಕಗಳನ್ನು ಸ್ಥಾಪಿಸಿದೆ. ಆರಂಭದಲ್ಲಿ ಸೋಲಾರ್ ಶಕ್ತಿಯನ್ನು ಬಳಸಿಕೊಂಡು ಗೃಹ ಉಪಕರಣಗಳನ್ನು ಬಳಸಲಾಗುತ್ತಿತ್ತು.ಮುಂದಿನ 25 ವರ್ಷಗಳಲ್ಲಿ ಕೈಗಾರಿಕೆ ,ಉದ್ಯಮ ಕ್ಷೇತ್ರದಲ್ಲಿ ಸೌರಶಕ್ತಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಲಿದೆ. ಅರ್ಬ್ ಸಂಸ್ಥೆ ಮುಖ್ಯಕಚೇರಿಯನ್ನು ಬೆಂಗಳೂರಿನಲ್ಲಿ ಹೊಂದಿದ್ದು ಫೋಟೋ ವೋಲ್ಟಿಕ್ ಸೌರಫಲಕಗಳನ್ನು ಮತ್ತು ಸೌರಶಕ್ತಿಯಿಂದ ಚಾಲಿತವಾದ ಶಾಖೋತ್ಪನ್ನ ಘಟಕಗಳನ್ನು ಉತ್ಫಾದಿಸುವ ಎರಡು ಕಾರ್ಖಾನೆಗಳನ್ನು ಹೊಂದಿದೆ. ಅರ್ಬ್ ಎನರ್ಜಿ ಸಂಸ್ಥೆ ಭಾರತದಲ್ಲಿ ಸುಮಾರು 300ಜನ ಉದ್ಯೋಗಿಗಳನ್ನು ಹೊಂದಿದೆ ಎಂದು ಡೇಮಿಯನ್ ಮಿಲ್ಲರ್ ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಅರ್ಬ್ ಸಂಸ್ಥೆಯ ಪ್ರತಿನಿಧಿ ಸಂಸ್ಥೆಯಾಗಿರುವ ಮಂಜುನಾಥ್ ಫುಡ್ಸ್ ಮತ್ತು ಪ್ಯಾಕೇಜಿಂಗ್ ಪ್ರೈ. ಲಿಮಿಟೆಡ್ ಸಂಸ್ಥೆ 200 ಕಿಲೋವ್ಯಾಟ್ ಸಾಮರ್ಥ್ಯದ ಮೇಲ್ಛಾವಣಿ ಸೌರಶಕ್ತಿ ಘಟಕವನ್ನು ಸ್ಥಾಪಿಸಿದೆ.120 ಕಿ.ವ್ಯಾಟ್ ಸಾಮರ್ಥ್ಯದ ಸುಮಾರು 170 ಘಟಕಗಳನ್ನು ರಾಜ್ಯದಲ್ಲಿ ಸ್ಥಾಪಿಸಿದೆ.

ಆರಂಭದಲ್ಲಿ ಕಂಪೆನಿಯ ಮೂಲಕ ವಿದ್ಯುತ್ ಖರೀದಿಸಲಾಗುತ್ತಿದ್ದ ಸಂದರ್ಭದಲ್ಲಿದ್ದ ದರದಲ್ಲಿ ಇಳಿಕೆಯಾಗಿರುವುದರಿಂದ ನಿವಾಸಗಳ ಮೇಲೆ ಮೇಲ್ಛಾವಣಿ ಅಳವಡಿಕೆಯಲ್ಲಿ ಇಳಿಕೆಯಾಗಿದೆ ಎಂದು ಮಂಜುನಾಥ್ ಫುಡ್ಸ್ ಮತ್ತು ಪ್ಯಾಕೇಜಿಂಗ್ ಪ್ರೈ.ಲಿಮಿಟೆಡ್ ಸಂಸ್ಥೆಯ ನಿರ್ದೇಶಕ ಚೇತನ್ ಶೆಟ್ಟಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಅರ್ಬ್ ಎನರ್ಜಿ ಸಂಸ್ಥೆಯ ಉಪಾಧ್ಯಕ್ಷ ಸುಧಿಂದ್ರ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News