×
Ad

ಚೊಚ್ಚಲ ಪ್ರಯಾಣಕ್ಕೆ ತಾಯಿ, ಅಜ್ಜಿಯನ್ನು ವಿಮಾನದಲ್ಲಿ ಕರೆದೊಯ್ದ ಪೈಲಟ್ ಮಾಡಿದ್ದೇನು?

Update: 2018-11-20 22:07 IST

ಚೆನ್ನೈ, ನ.20: ಹೃದಯಸ್ಪರ್ಶಿ ಘಟನೆಯೊಂದರಲ್ಲಿ ಇಂಡಿಗೋ ವಿಮಾನದ ಪೈಲಟ್  ಒಬ್ಬರು ತಮ್ಮ ತಾಯಿ ಮತ್ತು ಅಜ್ಜಿಯನ್ನು ಪ್ರಥಮ ಬಾರಿಗೆ ವಿಮಾನ ಹತ್ತಿಸಿ ಚೆನ್ನೈಯಿಂದ ಸಿಂಗಾಪುರಕ್ಕೆ ಕರೆದೊಯ್ದಿದ್ದಾರೆ. ಅಷ್ಟೇ ಅಲ್ಲ, ವಿಮಾನ ಹಾರಾಟದ ಮುನ್ನ ಅವರಿಬ್ಬರ ಪಾದ ಮುಟ್ಟಿ ನಮಸ್ಕರಿಸಿ ಎಲ್ಲರ ಮನಗೆದ್ದಿದ್ದಾರೆ.

ಈ ಘಟನೆಯ ವೀಡಿಯೋವನ್ನು ಪೈಲಟ್ ಪ್ರದೀಪ್ ಕೃಷ್ಣನ್ ಅವರ ಸ್ನೇಹಿತರೊಬ್ಬರು ಫೇಸ್ ಬುಕ್‍ನಲ್ಲಿ ಅಪ್‍ಲೋಡ್ ಮಾಡಿದ್ದು ಬಹಳಷ್ಟು ಮಂದಿ ಅದನ್ನು ಮೆಚ್ಚಿದ್ದಾರೆ.

ವೀಡಿಯೋದಲ್ಲಿ ಪ್ರದೀಪ್ ಅವರು ಪ್ರಯಾಣಿಕರ ಆಸನದ ಸಾಲಿನಲ್ಲಿ ಸಾಗಿ ತಮ್ಮ ತಾಯಿ ಮತ್ತು ಅಜ್ಜಿ ಕುಳಿತಿರುವೆಡೆ ಬಂದು ಅವರ ಪಾದ ಮುಟ್ಟಿ ನಮಸ್ಕರಿಸಿ ನಂತರ ಕಾಕ್ ಪಿಟ್ ನತ್ತ ತೆರಳುತ್ತಿರುವುದು ಕಾಣಿಸುತ್ತದೆ. ಪ್ರದೀಪ್ ಅವರ ತಾಯಿ ಮತ್ತು ಅಜ್ಜಿಯ ಮುಖಗಳಲ್ಲಿ ನಗು ಮೂಡಿದ್ದು ಕಂಡು ಬರುತ್ತದೆ.

ಪ್ರದೀಪ್ ಅವರು ವಿಮಾನ ಹಾರಾಟ ನಡೆಸದ ಹೊರತು ತಾವು ವಿಮಾನ ಹತ್ತುವುದಿಲ್ಲ ಎಂದು ಅವರಿಬ್ಬರೂ ಈ ಹಿಂದೆ ಪ್ರತಿಜ್ಞೆ ಮಾಡಿದ್ದರೆನ್ನಲಾಗಿದೆ.

ವೀಡಿಯೋ ಪೋಸ್ಟ್ ಮಾಡಿದ್ದ ಪ್ರದೀಪ್ ಗೆಳೆಯ ಈ ಘಟನೆ ತಮ್ಮ ಸ್ನೇಹಿತನ ಕನಸನ್ನು ನಿಜವಾಗಿಸಿದೆ ಎಂದು ಬಣ್ಣಿಸಿದ್ದಾರೆ. ``ನಾವು ತರಬೇತಿ ಪಡೆಯುತ್ತಿದ್ದಾಗ 2007ರಲ್ಲಿ ವಿಮಾನ ಹಾರಾಟ ಆರಂಭಿಸಿದಂದಿನಿಂದ ಬಹಳ ದೂರ ಸಾಗಿದ್ದೇವೆ,'' ಎಂದು ಅವರು ಬರೆದಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News