×
Ad

ಮಂಗಳೂರು: ಕೋಳಿ ಅಂಕ ನಡೆಸುತ್ತಿದ್ದ ಮೂವರ ಬಂಧನ

Update: 2018-11-20 22:36 IST

ಮಂಗಳೂರು, ನ.20: ತಾಲೂಕಿನ ಕಿಲೆಂಜಾರು ಗ್ರಾಮದ ಕಾಪಿಕಾಡ್ ಅರಮನೆ ಮೈದಾನದಲ್ಲಿ ನಡೆಯುತ್ತಿದ್ದ ಕೋಳಿ ಅಂಕದಲ್ಲಿ ಪಾಲ್ಗೊಂಡ ಮೂವರನ್ನು ಬಜ್ಪೆ ಪೊಲೀಸರು ಮಂಗಳವಾರ ಸಂಜೆ ಬಂಧಿಸಿದ್ದಾರೆ.

ಮುತ್ತೂರು ಕೊಳವೂರು ನಿವಾಸಿ ಚಂದ್ರಹಾಸ ಶೆಟ್ಟಿ (48), ಕಿಲೆಂಗಾರು ಕುಪ್ಪೆಪದವು ನಿವಾಸಿ ವಿಶ್ವನಾಥ ಶೆಟ್ಟಿ (70), ತೋಡಾರ್ ನಿವಾಸಿ ಹೊನ್ನಯ್ಯ ಪೂಜಾರಿ (55) ಬಂಧಿತರು.

ಕಾಪಿಕಾಡ್ ಅರಮನೆ ಮೈದಾನದಲ್ಲಿ ಕೋಳಿ ಅಂಕ ನಡೆಯುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯಂತೆ ಬಜ್ಪೆ ಪೊಲೀಸರು ದಾಳಿ ನಡೆಸಿದರು. ಬಂಧಿತ ಆರೋಪಿಗಳ ವಶದಲ್ಲಿದ್ದ 18 ಕೋಳಿಗಳನ್ನು ಹಾಗೂ 3,050 ರೂ. ನಗರದನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

ನಗರ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ಆದೇಶದಂತೆ ಡಿಸಿಪಿಗಳಾದ ಹನುಮಂತರಾಯ, ಉಮಾ ಪ್ರಶಾಂತ್, ಸಹಾಯಕ ಆಯುಕ್ತ ರಾಜೇಂದ್ರ ಡಿ.ಎಸ್. ನಿರ್ದೇಶನದಂತೆ ಆರೋಪಿಗಳ ಪತ್ತೆ ಕಾರ್ಯದಲ್ಲಿ ಬಜ್ಪೆ ಠಾಣಾ ನಿರೀಕ್ಷಕ ಎಸ್.ಪರಶಿವಮೂರ್ತಿ, ಪಿಎಸ್ಸೈ ಶಂಕರ್ ನಾಯರಿ, ಎಎಸ್ಸೈ, ರಾಮಚಂದ್ರ, ಜನಾರ್ದನ ಗೌಡ, ಸಿಬ್ಬಂದಿ ಚಂದ್ರ ಮೋಹನ್, ರಾಜೇಶ್, ಲಕ್ಷ್ಮಣ, ಮಂಜುನಾಥ, ಯೋಗೀಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News