ಲೋಕ ಪ್ರವಾದಿ ಮುಹಮ್ಮದ್ (ಸ) ಜೀವನ ಸಂದೇಶವನ್ನು ಅರಿಯಿರಿ: ದಾವೂದ್ ಸಅದಿ

Update: 2018-11-20 17:33 GMT

ಮಂಗಳೂರು, ನ. 20: ಪ್ರವಾದಿ ಮುಹಮ್ಮದ್ (ಸ) ಲೋಕ ಶಾಂತಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಸತ್ಯಸಂಧ, ಅವರ ಜೀವನವೇ ನಮಗೆಲ್ಲ ಆದರ್ಶ, ಮಾದರಿ. ಅವರ ಹೊರತು ಇನ್ನೊಂದು ಜೀವನ ಮಾದರಿ ಈ ಭೂಮಿಯಲ್ಲಿಲ್ಲ, ಅವರ ಜೀವನ ಮಾದರಿಯನ್ನು ಅಧ್ಯಯನ ನಡೆಸಬೇಕು ಜೊತೆಗೆ ಅದನ್ನು ತನ್ನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕೊಪ್ಪ ಪಟ್ಟಣದ ಮೊಹಿಯುದ್ದೀನ್ ಜುಮ್ಮಾ ಮಸೀದಿಯ ಖತೀಬ್ ದಾವೂದ್ ಸಅದಿ ಮಸೀದಿ ಆವರಣದಲ್ಲಿ ನಡೆದ ಮೀಲಾದುನ್ನಬಿ ಸೀರತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.

ಸಂಸ್ಥೆಯ ಆಶ್ರಯದಲ್ಲಿ ನಡೆದ ಮೂರು ದಿನದ ಹುಬ್ಬುರ್ರಸೂಲ್ ಕಾರ್ಯಕ್ರಮದಲ್ಲಿ ಸೋಮವಾರ ಮದ್ರಸ ಮಕ್ಕಳ ಸೀರತ್ ಕಾರ್ಯಕ್ರಮ ನಡೆಯಿತು. ನಂತರ ಮದ್ರಸ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನಡೆಯುತು.

ಈ ಸಂದರ್ಭ ಮಾತನಾಡಿದ ಮದ್ರಸ ಮುಖ್ಯಸ್ಥ ರಫೀಕ್ ಸಅದಿ ಮದ್ರಸದಲ್ಲಿ ವಿದ್ಯಾರ್ಥಿಗಳಿಗೆ ಮಾನವೀಯ ಮೌಲ್ಯಗಳನ್ನು ಹೊಂದಿರುವ ಶಿಕ್ಷಣವನ್ನು ನೀಡಲಾಗುತ್ತದೆ. ಮದ್ರಸ ನೈತಿಕ ಶಿಕ್ಷಣದ ಕಾರ್ಖಾನೆ ಎಂದು ಬಣ್ಣಿಸಿದರು.

ಸಂಸ್ಥೆಯಲ್ಲಿ ಈ ಹಿಂದೆ ಸೇವೆ ಸಲ್ಲಿಸಿದ ಮಾಜಿ ಅಧ್ಯಕ್ಷರುಗಳಾದ ಹಾಜಿ ಉಮರಬ್ಬ, ಹಾಜಿ ಅಹ್ಮದ್ ಕೊರಡಿಹಿತ್ಲು, ಎಚ್.ಎಸ್. ಅಬ್ದುಲ್ ಖಾದರ್, ಹಿರಿಯ ಸದಸ್ಯರುಗಳಾದ ಹಂಝಾಖ, ಅಬ್ದುಲ್ ಜಲೀಲ್ ಗುಣವಂತೆ ಹಾಗು ಜಿಲ್ಲಾ ವಕ್ಪ್ ನ ನೂತನ ಸದಸ್ಯ ಕಮಾಲಿಯ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಮಂಗಳವಾರ ಬೆಳಗ್ಗೆ ಮೌಲೂದ್ ಪರಾಯಣ ನಂತರ ಸಾರ್ವಜನಿಕರಿಗೆ ಅನ್ನಸಂತರ್ಪಣೆ ನಡೆಯಿತು. 

ಈ ಸಂದರ್ಭ ಸಂಸ್ಥೆಯ ಅಧ್ಯಕ್ಷ ಎಚ್. ಎಸ್. ಮುಹಿಯದ್ದಿ, ಸ್ವಲಾತ್ ಸಮಿತಿ ಅಧ್ಯಕ್ಷ ಝೈನುದ್ದೀನ್, ಪ್ರಧಾನ ಕಾರ್ಯದರ್ಶಿ ಝುಭೈರ್ ಅಹ್ಮದ್, ಸಹ ಕಾರ್ಯದರ್ಶಿ ಬದ್ರುದ್ದೀನ್, ಖಜಾಂಚಿ ಮುಹಮ್ಮದ್ ಫಾರೂಕ್, ಸದಸ್ಯರುಗಳಾದ ಗುಣವಂತೆಯ ಶೌಕತ್, ಹಸನಬ್ಬ, ಕೆ.ಅಬ್ಬು, ಟಿ. ಅಬ್ಬು, ಮಹಮ್ಮದ್ ಹುಲುಮಕ್ಕಿ, ಅಬ್ದಲ್ ಹಮೀದ್, ಖೈರುಲ್ಲಾ, ಶಬ್ಬೀರ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News