ಮೀಲಾದುನ್ನಬಿ: ಉಡುಪಿಯಲ್ಲಿ ಗಣ್ಯರನ್ನು ಭೇಟಿಯಾದ ಎಸ್‌ಐಒ ತಂಡ
Update: 2018-11-20 23:14 IST
ಉಡುಪಿ, ನ.20: ಪ್ರವಾದಿ ಮುಹಮ್ಮದ್(ಸ) ಮಾನವ ಕುಲದ ಶ್ರೇಷ್ಠ ಮಾರ್ಗದರ್ಶಿ ಎಂಬ ಸೀರತ್ ಅಭಿಯಾನದ ಪ್ರಯುಕ್ತ ಉಡುಪಿ ಜಿಲ್ಲಾ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ನ ಸದಸ್ಯರು ಇಂದು ಉಡುಪಿಯಲ್ಲಿ ಗಣ್ಯರನ್ನು ಭೇಟಿಯಾಗಿ ಪ್ರವಾದಿ ಮುಹಮ್ಮದ್ (ಸ) ಜೀವನ ಸಂದೇಶ, ಮಾನವ ಕುಲದ ಶ್ರೇಷ್ಠ ಮಾರ್ಗದರ್ಶಿ ಮತ್ತು ಇತರೆ ಸಾಹಿತ್ಯವನ್ನು ಉಡುಗೊರೆಯಾಗಿ ನೀಡಿದರು.
ಪೊಲೀಸ್ ಅಧಿಕಾರಿಗಳು, ಸಾಹಿತಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳಿಗೆ ಸಾಹಿತ್ಯವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಎಸ್‌ಐಒ ಉಡುಪಿ ಜಿಲ್ಲಾಧ್ಯಕ್ಷ ಶುಹೆಬ್ ಮಲ್ಪೆ, ಜಿಲ್ಲಾ ಕಾರ್ಯದರ್ಶಿ ಅಫ್ವಾನ್ ಹೂಡೆ, ಸದಸ್ಯ ರಾದ ಬಿಲಾಲ್ ಮಲ್ಪೆ, ಮಹಮ್ಮದ್ ಶಾರೂಕ್ ಮೊದಲಾದವರು ಉಪಸ್ಥಿತರಿದ್ದರು.