ಜೋಕಟ್ಟೆ-ಕಾನದಲ್ಲಿ ಮತ್ತೆ ಎಂಆರ್‌ಪಿಎಲ್ ಹಾರುಬೂದಿ ಸಮಸ್ಯೆ

Update: 2018-11-21 07:02 GMT

ಮಂಗಳೂರು, ನ.21: ಐದಾರು ವರ್ಷಗಳಿಂದ ಹಾರುಬೂದಿ ಹೊರ ಸೂಸಲ್ಪಡುವ ಮೂಲಕ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದ ಎಂಆರ್‌ಪಿಎಲ್ ಕಳೆದ ಎರಡು ದಿನಗಳಿಂದ ಮತ್ತೆ ಹಾರು ಬೂದಿಯನ್ನು ಹೊರ ಸೂಸುತ್ತಿದೆ. ಇದರಿಂದ ಜೋಕಟ್ಟೆ ಮತ್ತು ಸುರತ್ಕಲ್ ಸಮೀಪದ ಕಾನ ಪರಿಸರದಲ್ಲಿ ಮಾಲಿನ್ಯ ಸೃಷ್ಟಿಯಾಗಿದೆ.

ಎಂಆರ್‌ಪಿಎಲ್‌ನ ಸಲ್ಫರ್ ಮತ್ತು ಕೊಕ್ ಘಟಕದಿಂದ ಹಾರು ಬೂದಿ ಹೊರಸೂಸಲ್ಪಡುತ್ತಿದ್ದು, ಇದರಿಂದ ಪರಿಸರ ಕಪ್ಪುಮಯವಾಗಿದೆ. ಮನೆ, ಅಂಗಡಿ ಮುಂಗಟ್ಟು, ಶಾಲೆ, ಪ್ರಾರ್ಥನಾ ಗೃಹ ಮತ್ತಿತರ ಕಡೆ ಕಪ್ಪು ಬೂದಿ ಕಂಡು ಬಂದಿದೆ. ಇದು ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವ ಅಪಾಯವಿದೆ. ಈ ಭಾಗದ ಬಾವಿ, ಕೊಳಗಳಲ್ಲೂ ಕೂಡಾ ಹಾರುಬೂದಿ ಕಾಣಿಸಿಕೊಂಡಿದ್ದು, ಜನರು ಆತಂಕಕ್ಕೀಡಾಗಿದ್ದಾರೆ.

*ಅಧಿಕಾರಿಗಳು ಭೇಟಿ: ಕಳೆದ ಎರಡು ದಿನದಿಂದ ಜೋಕಟ್ಟೆ ಪರಿಸರದಲ್ಲಿ ಕಾಣಿಸಿಕೊಂಡ ಹಾರುಬೂದಿ ಸಮಸ್ಯೆಯಿಂದ ಎಚ್ಚೆತ್ತ ಎಂಆರ್‌ಪಿಎಲ್ ಅಧಿಕಾರಿಗಳು ಬುಧವಾರ ಸ್ಥಳಕ್ಕೆ ತೆರಳಿ ಪರಿಶೀಲನೆ ಆರಂಭಿಸಿದ್ದಾರೆ.

*ಸಾರ್ವಜನಿಕರ ಆಕ್ರೋಶ: ಈ ಸಮಸ್ಯೆ ಇಂದು ನಿನ್ನೆಯದಲ್ಲ. ಕಳೆದ ಹಲವು ವರ್ಷದಿಂದ ಹಾರು ಬೂದಿಯ ಸಮಸ್ಯೆಯಿದ್ದು, ಘಟನೆ ನಡೆದಾಗ ಸಮಸ್ಯೆ ಬಗೆಹರಿಸುವುದಾಗಿ ಹೇಳಿ ಹೋಗುವ ಅಧಿಕಾರಿಗಳು ಬಳಿಕ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಜಿಲ್ಲಾಡಳಿತ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News