ಮಾಂಡೋವಿ ಮೋಟರ್ಸ್‌ನ ಹೊಸ ಕಾರು ‘ದಿ ನೆಕ್ಟ್ಸ್ ಜನರೇಶನ್ ಎರ್ಟಿಗ’ ಅನಾವರಣ

Update: 2018-11-21 15:56 GMT

ಮಂಗಳೂರು, ನ. 21: ದೇಶದ ಪ್ರಖ್ಯಾತ ಕಂಪೆನಿಗಳಲ್ಲಿ ಒಂದಾದ ಮಾಂಡೋವಿ ಮೋಟರ್ಸ್‌ ಪ್ರೈ.ಲಿ.ನ ಹೊಸ ಕಾರು ‘ದಿ ನೆಕ್ಟ್ಸ್ ಜನರೇಶನ್ ಎರ್ಟಿಗ’ವನ್ನು ನಗರದ ಹಂಪನಕಟ್ಟೆಯಲ್ಲಿ ಶೋರೂಮ್‌ನಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಅನಾವರಣಗೊಳಿಸಲಾಯಿತು.

ನಗರದ ರಥಬೀದಿಯ ಶ್ರೀ ವೆಂಕಟ್ರಮಣ ದೇವಸ್ಥಾನದ ಟ್ರಸ್ಟಿ ಪಿ. ರಾಮಚಂದ್ರ ಕಾಮತ್ ಹೊಸ ಕಾರನ್ನು ಅನಾವರಣಗೊಳಿಸಿದರು. ಬಳಿಕ ಮಾತನಾಡಿದ ಅವರು ಮಾಂಡೋವಿ ಕಂಪೆನಿಯು ಕಾಲಕ್ಕೆ ತಕ್ಕಂತೆ ಹೊಸ ಹೊಸ ವಾಹನಗಳನ್ನು ಗ್ರಾಹಕರಿಗೆ ಪರಿಚಯಿಸುತ್ತಾ ಬಂದಿವೆ. ಆ ಮೂಲಕ ಗ್ರಾಹಕರ ಪ್ರೀತಿಗೂ ಪಾತ್ರವಾಗಿದೆ. ದಿನದ 24 ಗಂಟೆಯಲ್ಲೂ ಉತ್ತಮ ಸೇವೆ ಸಲ್ಲಿಸುವ ಮೂಲಕ ಮನೆ ಮಾತಾಗಿದೆ. ಈ ಸಂಸ್ಥೆಯು ಮತ್ತಷ್ಟು ಕೀರ್ತಿ ಪಡೆಯಲಿ ಮತ್ತು ಗ್ರಾಹಕರು ಸಂತೃಪ್ತಿ ಹೊಂದುವಂತಾಗಲಿ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಮಾರಾಟ ವಿಭಾಗದ ಎಜಿಎಂ ಶಶಿಧರ ಕಾರಂತ್, ಮುಖ್ಯ ಲೆಕ್ಕಾಧಿಕಾರಿ ಬಿ.ಪಿ.ಭಟ್, ಸೇಲ್ಸ್ ಮ್ಯಾನೇಜರ್ ಕಿಶನ್ ಶೆಟ್ಟಿ, ವರ್ಕ್ ಸರ್ವಿಸ್ ಎಜಿಎಂ ಜಯದೀಪ್ ರೈ ಉಪಸ್ಥಿತರಿದ್ದರು.

‘ದಿ ನೆಕ್ಟ್ಸ್ ಜನರೇಶನ್ ಎರ್ಟಿಗ’ ಕಾರು ಅನಾವರಣಗೊಳ್ಳುವ ಮುನ್ನವೇ 40 ಗ್ರಾಹಕರು ಬುಕ್ಕಿಂಗ್ ಮಾಡಿಕೊಂಡಿದ್ದು, ಆ ಪೈಕಿ ಪ್ರಪ್ರಥಮ ಗ್ರಾಹಕ ಎ.ಕೆ.ಗ್ರೂಪ್‌ನ ಎ.ಕೆ. ಸಾಜಿದ್, ಕೇದರನಾಥ ಶೆಟ್ಟಿ, ಡಾ. ಇಬ್ರಾಹೀಂ ನಾಗನೂರು, ಅಬ್ದುಲ್ ಹಮೀದ್, ಶೇಖ್ ಅಹ್ಮದ್ ಸಾಹೇಬ್, ಅಬ್ದುಲ್ ಹಮೀದ್ ಅವರಿಗೆ ಕಾರಿನ ಕೀ ಹಸ್ತಾಂತರಿಸಲಾಯಿತು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News