ದಲಾಯಿ ಲಾಮಾ ರಾಜಕೀಯ ದೇಶಭ್ರಷ್ಟ: ಚೀನಾ

Update: 2018-11-21 16:27 GMT

ಬೀಜಿಂಗ್, ನ. 21: ಜಪಾನ್ ಪ್ರವಾಸದಲ್ಲಿರುವ ಟಿಬೆಟ್ ಆಧ್ಯಾತ್ಮಿಕ ನಾಯಕ ದಲಾಯಿ ಲಾಮಾ ವಿರುದ್ಧ ಚೀನಾ ಮಂಗಳವಾರ ಕೆಂಡ ಕಾರಿದೆ. ದಲಾಯಿ ಲಾಮಾರ ‘ಪ್ರತ್ಯೇಕತಾವಾದಿ ಚಟುವಟಿಕೆಗಳ’ನ್ನು ದೇಶಗಳು ಬೆಂಬಲಿಸಬಾರದು ಎಂದು ಅದು ಹೇಳಿದೆ.

ಚೀನಾ ಮತ್ತು ಟಿಬೆಟ್‌ಗಳು ಜೊತೆಯಾಗಿ ಇರಬೇಕು ಹಾಗೂ ಜೊತೆಯಾಗಿ ಅಭಿವೃದ್ಧಿ ಹೊಂದಬೇಕು ಎಂಬುದಾಗಿ ದಲಾಯಿ ಲಾಮಾ ನೀಡಿದ್ದಾರೆನ್ನಲಾದ ಹೇಳಿಕೆಗೆ ಪ್ರತಿಕ್ರಿಯಿಸಿದ ಚೀನಾ ವಿದೇಶ ಸಚಿವಾಲಯದ ವಕ್ತಾರ ಗೆಂಗ್ ಶುವಾಂಗ್, ಟಿಬೆಟ್ ವಿವಾದ ಚೀನಾದ ಆಂತರಿಕ ವಿಷಯವಾಗಿದೆ ಎಂದರು.

 ‘‘ದಲಾಯಿ ಲಾಮಾರ ಭಾಷಣದ ಬಗ್ಗೆ ಹೇಳುವುದಾದರೆ, ಈ ಪ್ರಶ್ನೆಗೆ ನಾನು ಉತ್ತರಿಸುವುದಲ್ಲ. 14ನೇ ದಲಾಯಿ ಲಾಮಾ ರಾಜಕೀಯ ದೇಶಭ್ರಷ್ಟ ಹಾಗೂ ಅವರು ಪ್ರತ್ಯೇಕತಾವಾದಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ’’ ಎಂದು ಅವರು ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News