ಉಳ್ಳಾಲ: ಸೈಯದ್ ಮದನಿ ಮೊಹಲ್ಲಾ ಒಕ್ಕೂಟದಿಂದ ಮೀಲಾದುನ್ನಬಿ

Update: 2018-11-21 16:53 GMT

ಉಳ್ಳಾಲ, ನ.21: ಸೈಯದ್ ಮದನಿ ಮೊಹಲ್ಲಾ ಒಕ್ಕೂಟದಿಂದ ಐತಿಹಾಸಿಕ ಮೀಲಾದುನ್ನಬಿ ಕಾಲ್ನಡಿಗೆ ಜಾಥಾವನ್ನು ಅಳೇಕಲದಿಂದ ಉಳ್ಳಾಲ ದರ್ಗಾದವರೆಗೆ ಮಂಗಳವಾರ ಹಮ್ಮಿಕೊಳ್ಳಲಾಗಿತ್ತು. ಅಳೇಕಲ ಖತೀಬ ಅಬೂಝಿಯಾದ್ ಮದನಿ ಪಟ್ಟಾಂಬಿ ಉಸ್ತಾದರು ದುಆಗೈದು ಜಾಥಾಕ್ಕೆ ಚಾಲನೆ ನೀಡಿದರು.

ಪಟ್ಲದ ಖತೀಬ ಎಂ.ಸಿ ಫೈಝಿ ಮೋಙಂ ಉಸ್ತಾದರು ಜಾಥಾವನ್ನು ಉದ್ಘಾಟಿಸಿದರು. ಸೈಯದ್ ಮದನಿ ದರ್ಗಾ ದ ಮಾಜಿ ಅಧ್ಯಕ್ಷ ಹಾಜಿ ಯು.ಎಸ್. ಹಂಝ ಅಳೇಕಲ ಅಧ್ಯಕ್ಷತೆ ವಹಿಸಿದ್ದರು. ಸೈಯದ್ ಮದನಿ ಮೊಹಲ್ಲಾ ಒಕ್ಕೂಟ ಅಧ್ಯಕ್ಷ ಶಿಹಾಬುದ್ದೀನ್ ಸಖಾಫಿ ಉಸ್ತಾದರು ಕಾಲ್ನಡಿಗೆ ಜಾಥಾದ ನಾಯಕತ್ವ ವಹಿಸಿದ್ದರು. ಕಲ್ಲಾಪು ಜುಮ್ಮಾ ಮಸೀದಿಯ ಖತೀಬ ಉಸ್ಮಾನ್ ಜೌಹರಿ ಪ್ರಾಸ್ತಾವಿಕ ಮಾತನಾಡಿದರು. ನಗರಾಭಿವ್ರದ್ದಿ ಮತ್ತು ವಸತಿ ಸಚಿವ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಜಾಥಾಕ್ಕೆ ಶುಭ ಹಾರೈಸಿದರು.

ಎಸ್ಸೆಸ್ಸೆಫ್ ಉಳ್ಳಾಲ ಡಿವಿಶನ್ ಅಧ್ಯಕ್ಷ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ, ಉಳ್ಳಾಲ ನಗರ ಸಭೆಯ ಸದಸ್ಯ ಯು.ಎ. ಇಸ್ಮಾಯೀಲ್ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಕಲ್ಲಾಪು ಜುಮ್ಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ಬುಖಾರಿ ಕಲ್ಲಾಪು, ಮಂಚಿಲ ಮಸೀದಿಯ ಅಧ್ಯಕ್ಷ ಅಬ್ದುಲ್ ಮಕ್ಸೂದ್, ಮಾರ್ಗತಲೆ ಮಸೀದಿಯ ಅಧ್ಯಕ್ಷ ಸೈಯದ್ ಮದನಿ ದರ್ಗಾ ಸಮಿತಿ ಸದಸ್ಯ ಹನೀಫ್ ಹಾಜಿ ಮಾರ್ಗತಲೆ, ಸುಂದರಿಬಾಗ್ ಮಸೀದಿಯ ಅಧ್ಯಕ್ಷ ಆಸಿಫ್, ತೋಟ ಮಸೀದಿಯ ಅಧ್ಯಕ್ಷ ಇಬ್ರಾಹೀಂ, ದಾರಂದಬಾಗಿಲು ಮಸೀದಿಯ ಅಧ್ಯಕ್ಷ ಮುಹಮ್ಮದ್ ರಫೀಕ್, ಪಟ್ಲ ಮಸೀದಿಯ ಪ್ರಧಾನ ಕಾರ್ಯದರ್ಶಿ ಸದ್ದಾಂ ಪಟ್ಲ, ಸೆವಂತಿಗುಡ್ಡೆ ಪ್ರಧಾನ ಕಾರ್ಯದರ್ಶಿ ಬಶೀರ್ ಸೆವಂತಿಗುಡ್ಡೆ, ಆಝಾದ್ ನಗರ ಮಸೀದಿಯ ಅಧ್ಯಕ್ಷ ಮುಹಮ್ಮದ್, ಮುಕ್ಕಚ್ಚೇರಿ ಮಸೀದಿಯ ಕಾರ್ಯ ದರ್ಶಿ ಹೈದರ್, ಹಳೇಕೋಟೆ ತಾಜುಲ್ ಉಲಮಾ ಮದ್ರಸ ಅಧ್ಯಕ್ಷ ಯೂಸುಫ್, 13 ಮೊಹಲ್ಲಾ ಗಳ ಆಡಳಿತ ಸಮಿತಿ ಸದಸ್ಯರು, ಮದ್ರಸ ಅಧ್ಯಾಪಕರು, ವಿದ್ಯಾರ್ಥಿಗಳು ಹಾಗೂ, ಸೈಯದ್ ಜಲಾಲ್ ತಂಙಲ್, ಖುಬೈಬ್ ತಂಙಲ್, ಉಳ್ಳಾಲ ನಗರ ಸಭೆಯ ಸದಸ್ಯ ಅಸ್ಗರ್ ಅಲಿ, ಅಶ್ರಫ್, ಉದ್ಯಮಿ ರಶೀದ್ ಹಾಜಿ ಮಂಗಳೂರು, ಸಹಿತ ಹಿರಿಯರು ಗಣ್ಯವ್ಯಕ್ತಿಗಳು ಮತ್ತು ಉಳ್ಳಾಲದ 28 ಮೊಹಲ್ಲಾಗಳ ಸುನ್ನೀ ಕಾರ್ಯಕರ್ತರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News