ಬೆಳ್ತಂಗಡಿ: ತಾಲೂಕಿನ ವಿವಿಧ ಯೋಜನೆಗಳಿಗೆ 50.41 ಕೋಟಿ ರೂ. ಮಂಜೂರು- ಶಾಸಕ ಹರೀಶ ಪೂಂಜ

Update: 2018-11-21 17:12 GMT

ಬೆಳ್ತಂಗಡಿ, ನ. 21: ತಾಲೂಕಿನ ವಿವಿಧ ಯೋಜನೆಗಳಿಗೆ 50.41 ಕೋಟಿ ರೂ. ಮಂಜೂರುಗೊಂಡಿದೆ ಎಂದು ಶಾಸಕ ಹರೀಶ್ ಪೂಂಜ ತಿಳಿಸಿದ್ದಾರೆ. 

ಮಡಂತ್ಯಾರು ರಕ್ತೇಶ್ವರಿ ಪದವು ಬಂಗೇರಕಟ್ಟೆ ರಸ್ತೆಗೆ 4.03 ಕೋ. ರೂ., ಮುಂಡೂರು ಗ್ರಾಮದ ಕೋಟಿಕಟ್ಟೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ರಸ್ತೆ ಅಭಿವೃದ್ಧಿಗೆ 1.20 ಕೋ. ರೂ., ಬಳಂಜ ಗ್ರಾಮದ ಕಾಪಿನಡ್ಕ ಬಳಂಜ ರಸ್ತೆ ಅಭಿವೃದ್ಧಿಗೆ ರೂ. 90 ಲಕ್ಷ, ಮಚ್ಚಿನ ಗ್ರಾಮದ ಕುಂಡಡ್ಕ ಸೇತುವೆ ನಿರ್ಮಾಣಕ್ಕೆ ರೂ. 54 ಲಕ್ಷ, ಕಡಿರುದ್ಯಾವರ ಗ್ರಾಮದ ಬೆಳ್ಕೂರು ಬೈಲಿನ ಎತ್ತಿನಗುಂಡಿ ಸೇತುವೆ ನಿರ್ಮಾಣಕ್ಕೆ 4 ಕೋ. ರೂ., ರೆಖ್ಯ-ಉಪ್ಪಾರು ರಸ್ತೆ ಅಭಿವೃದ್ಧಿಗೆ 2.85 ಕೋ ರೂ. ಅನುದಾನ ಮಂಜೂರಾಗಿದೆ. 

ಕೇಂದ್ರೀಯ ರಸ್ತೆ ನಿಧಿಯಿಂದ ಕಕ್ಕಿಂಜೆ-ನೆರಿಯ-ಪುದುವೆಟ್ಟು ರಸ್ತೆ 6 ಕೋ. ರೂ., ಉಜಿರೆ-ಬೆಳಾಲು– ಕುಪ್ಪೆಟ್ಟಿ ರಸ್ತೆಗೆ 12 ಕೋ. ರೂ.,  ಸಣ್ಣ ನೀರಾವರಿ ಇಲಾಖೆಯಿಂದ ಕಳೆಂಜ ಗ್ರಾಮದ ಪುಲ್ಲಾಯ ಎಂಬಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ರೂ. 50 ಲಕ್ಷ, ನಿಟ್ಟಡೆ  ಗ್ರಾಮದ ಕುಕ್ಕಬೆಟ್ಟು ಕಿಂಡಿ ಅಣೆಕಟ್ಟಿಗೆ 6.92 ಕೋ. ರೂ., ಕಡಿರುದ್ಯಾವರ ಗ್ರಾಮದ ಉದ್ದಾರ ಎಂಬಲ್ಲಿ ಕಿಂಡಿ ಅಣೆಕಟ್ಟಿಗೆ 4.92 ಕೋ. ರೂ., ಮಂಜೂರಾಗಿದೆ. ತಾಲೂಕಿನ ಶಾಲೆ ಕಾಲೇಜುಗಳ ಕೊಠಡಿ ನಿರ್ಮಾಣಕ್ಕೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಲೇರಿ 1 ಕೊಠಡಿ ರೂ.10.6 ಲಕ್ಷ, ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಬದನಾಜೆ 2 ಕೊಠಡಿ ರೂ. 21.2 ಲಕ್ಷ, ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಪುಂಜಾಲಕಟ್ಟೆ 5 ಕೊಠಡಿ ರೂ. 53 ಲಕ್ಷ, ಸರಕಾರಿ ಪದವಿ ಪೂರ್ವ ಕಾಲೇಜು ಪುಂಜಾಲಕಟ್ಟೆ 5 ಕೊಠಡಿ ರೂ.78.75 ಲಕ್ಷ, ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢ ಶಾಲೆ ವಿಭಾಗ ವೇಣೂರು 7 ಕೊಠಡಿ 1.10. ಕೋ.ರೂ., ಸರಕಾರಿ ಪ್ರೌಢ ಶಾಲೆ ನಾವೂರು 2 ಕೊಠಡಿ ರೂ. 31.50 ಲಕ್ಷ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು ಬೆಳ್ತಂಗಡಿ ಮೂಲ ಸೌಕರ್ಯಯಕ್ಕೆ 1 ಕೋ.ರೂ. ಮಂಜೂರಾಗಿದ್ದು, ಸದ್ರಿ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಮುಗಿದು ಶೀಘ್ರವೇ ನಿರ್ಮಾಣ ಕಾರ್ಯ ಆರಂಭಗೊಳ್ಳಲಿದೆ.

ಲೋಕೋಪಯೋಗಿ ಇಲಾಖೆಯಡಿ ಹಿಂದಿನ ಅವಧಿಯಲ್ಲಿ ಕಾಮಗಾರಿಗಳು ಪ್ರಸ್ತಾವನೆಗೊಂಡಿದ್ದರೂ ತಾನು ಶಾಸಕನಾದ ಬಳಿಕ ಈ ಕೆಳಗಿನ ಯೋಜನೆ ಗಳಿಗೆ ಆರ್ಥಿಕ ಅನುಮೋದನೆ ಸಿಕ್ಕಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News