ನ. 23-25: ‘ಭಾರತೀಯ ಒಡವೆಗಳ ಉತ್ಸವ’

Update: 2018-11-21 17:24 GMT

ಮಂಗಳೂರು, ನ. 21:  ವಿವಾಹ ಮತ್ತು ಶುಭಸಮಾರಂಭಗಳಿಗೆ ಮೆರುಗು ನೀಡಲು ಮಂಗಳೂರಿನಲ್ಲಿ ಮೊದಲಬಾರಿಗೆ ವಿವಾಹ ಮತ್ತು ಶುಭ ಸಮಾರಂಭಗಳಲ್ಲಿ ಧರಿಸುವ ಆಭರಣಗಳ ಸಂಗ್ರಹಗಳನ್ನೊಳಗೊಂಡ ಮನಮೋಹಕ ಭಾರತೀಯ ಒಡವೆಗಳ ಉತ್ಸವ ಮೇಳವನ್ನು ಗೊಲ್ಡನ್ ಕ್ರೀಪರ್ ಸಂಸ್ಥೆಯ ಜಗದೀಶ್ ಬಿ. ಎನ್. ಮತ್ತು ಹೇಮಲತಾ ಜಗದೀಶ್ ನ. 23, 24 ಮತ್ತು 25 , 2018ರಂದು ಮಂಗಳೂರಿನ ಟಿ.ಎಮ್.ಎ ಪೈ ಇಂಟರ್‌ನ್ಯಾಷನಲ್ ಕನ್ವೆನ್ಷನ್ ಸೆಂಟರ್‌ನಲ್ಲಿ ಮೊದಲಬಾರಿಗೆ ಆಯೋಜಿಸಿದ್ದಾರೆ.

ದೇಶದ 30 ಅಗ್ರ ಶ್ರೇಣಿಯ ಆಭರಣ ತಯಾರಕರು ಭಾಗವಹಿಸುತ್ತಿರುವ ದ ಜ್ಯುವೆಲರಿ ಶೋ ಮತ್ತು ಮಾರಾಟ ಮೇಳದ ಉತ್ಸವವನ್ನು ಮಂಗಳೂರಿನ ಪ್ರತಿಷ್ಠಿತ ಉದ್ಯಮಿ ಶೃತಾ ಡಿ. ಅವರು ನ. 23ರಂದು ಮಧ್ಯಾಹ್ನ 12:15ಕ್ಕೆ ಉದ್ಘಾಟಿಸಲಿದ್ದಾರೆ.

ಈ ಮೇಳದಲ್ಲಿ ದೇಶದ ಖ್ಯಾತ ಕುಶಲಕರ್ಮಿಗಳ ಆಭರಣಗಳ ಮಳಿಗೆ, ಪ್ರಶಸ್ತಿ ವಿಜೇತ ಸಂಸ್ಥೆಗಳು ಒಂದೇ ಸೂರಿನಡಿ ಭಾರತದ 30 ಹೆಸರಾಂತ ಆಭರಣ ಮಳಿಗೆಗಳು ಅಭರಣ ಉತ್ಸವದ ಪ್ರಮುಖ ಆಕರ್ಷಣೆಯಾಗಿದೆ .ಅಲ್ಲದೆ ಮುಂಬರುವ ಮದುವೆ, ಹಬ್ಬ-ಶುಭ ದಿನಗಳಿಗೆ ಆಭರಣಗಳನ್ನು ಕೊಳ್ಳಲು ಇದೊಂದು ಉತ್ತಮ ಅವಕಾಶ ಮತ್ತು ವೇದಿಕೆಯಾಗಿದೆ.

ಮಂಗಳೂರು ನಗರ ಮತ್ತು ಸುತ್ತಮುತ್ತಲಿನ ನಾಗರಿಕರಿಗೆ ಆಭರಣಗಳನ್ನು ನೋಡಲು ಮತ್ತು ಕೊಳ್ಳಲು ಸುಸಂದರ್ಭವಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಹಳೆ ಆಭರಣ ಕೊಟ್ಟು ಹೊಸತು ಪಡೆದುಕೊಳ್ಳಬಹುದು

ಈ ಮೇಳದಲ್ಲಿ ಬಿಎಸ್‌ಐ ಹಾಲ್ ಮಾರ್ಕ್ ಮತ್ತು ಅಂತರರಾಷ್ಟ್ರೀಯ ಗುಣಮಟ್ಟದ ವಜ್ರಗಳು ದೊರೆಯುತ್ತವೆ. ಆಭರಣ ಮಳಿಗೆಗಳ ಸದಸ್ಯರು, ಆಭರಣ ಮತ್ತು ವಜ್ರಗಳನ್ನು ಉಪಯೋಗಿಸುವ ವಿಧಾನದ ಬಗ್ಗೆ ಉಚಿತ ಮಾಹಿತಿಯನ್ನು ನೀಡುತ್ತಾರೆ.

ಖರೀದಿದಾರರು ಹಳೇ ಚಿನ್ನವನ್ನು ಬದಲಾಯಿಸಿಕೊಳ್ಳುವ ಅವಕಾಶವನ್ನು ಕಲ್ಪಿಸಲಾಗಿದೆ. ಮೇಳದ ನಂತರವೂ ಗ್ರಾಹಕರಿಗೆ ಆಭರಣಗಳಿಗೆ ಸಂಬಂಧಿಸಿದ ಸೇವೆಯನ್ನು ಒದಗಿಸಲಾಗುವುದು. ಕರಾವಳಿ ಜನರ ಅಭಿರುಚಿಯನ್ನು ಅರಿತು, ಅವರ ಇಚ್ಚೆಗನುಗುಣವಾಗಿ ಆಭರಣಗಳನ್ನು ತಯಾರಿಸಲಾಗಿದೆ.

ಭಾರತದ ಖ್ಯಾತ 30 ಆಭರಣ ಮಳಿಗೆಗಳ ಪ್ರದರ್ಶನ, ಮಾರಾಟ

ಬೆಂಗಳೂರಿನ ಧವನಮ್, ಜಿ.ಆರ್.ಟಿ., ನವರತನ್, ನಿಖಾರ್, ಪಂಚಕೇಸರಿ ಬಡೇರ, ಪಿ.ಎಮ್.ಜೆ., ಶ್ರೀ ಗಣೇಶ್, ಶ್ರೀಕೃಷ್ಣ ,ಮಂಗಳೂರು ಜ್ಯುವೆಲ್ಸ್, ಆರ್ಟ್ ಇಂಡಿಯಾ, ಎನ್.ಎಸ್. ಜ್ಯುವೆಲ್ಸ್, ಶಿವಾನಿ, ಸಿಲ್ವರ್ ಎಂಪೋರಿಯಮ್, ಸಿಲ್ವರ್ ಯುಗ್, ಭಾಸ್ಕರ್ ಪರ್ಲ್ಸ್, ರೂಪಂ, ಸಂಜಯ್ ಜ್ಯುವೆಲ್ಸ್, ಥಾರ್ ಹ್ಯಾಂಡಿಕ್ರಾಫ್ಟ್ ಮತ್ತು ಕುಶಲ್ಸ್, ಮಂಗಳೂರಿನ ಒರ್ರಾ, ವಿಶಾಖಪಟ್ಟಣದ ಭ್ರಮರಾಂಭ, ಕೋಲ್ಕತ್ತಾದ ಅರ್ಹಾಮ್ ಮತ್ತು ಟ್ರೆಡೀಷನ್ಸ್, ಜೈಪುರದ ಸುನಿಲ್ ಜ್ಯುವೆಲರ್ಸ್‌ ಮತ್ತು ಬನೇಥಿ ಎಕ್ಸಪೋರ್ಟ್ಸ್, ಮುಂಬೈನ ಜ್ಹಿವಾ ಮತ್ತು ಕರಿಷ್ಮಾ ಇಂಟರ್ ನ್ಯಾಷನಲ್, ಅಮೃತ್‌ಸರದ ಓಂಕಾರ್- ಇವು ಪ್ರಮುಖ ಕಂಪೆನಿಗಳು. ಇದರೊಂದಿಗೆ ಬೆಳ್ಳಿ ಮಾರಾಟಗಾರರು ತಮ್ಮ ಆಭರಣಗಳನ್ನು ಪ್ರದರ್ಶಿಸಲಿದ್ದಾರೆ. ಮೇಳದಲ್ಲಿ ವಿಶೇಷ ಹರಳುಗಳನ್ನು ಪ್ರದರ್ಶನಕ್ಕೆ ಇಡಲಾಗುತ್ತದೆ ಎಂದು ಆಯೋಜಕರು ತಿಳಿಸಿದ್ದಾರೆ.

ಗ್ರಾಹಕರ ಅಭಿರುಚಿ ಮತ್ತು ಬಜೆಟ್‌ಗನುಗುಣವಾಗಿ ಚಿನ್ನ ಮತ್ತು ವಜ್ರದ ಆಭರಣಗಳು ಮಂಗಳೂರಿನ ಜನತೆಗೆ ದೊರೆಯಲಿವೆ. ಮೊಟ್ಟಮೊದಲ ಬಾರಿಗೆ ಮಂಗಳೂರು ಮಹಾನಗರದಲ್ಲಿ ಈ ರೀತಿಯ ಆಭರಣ ಮೇಳವನ್ನು ಆಯೋಜಿಸಲಾಗಿದೆ ಆಭರಣ ಪ್ರಿಯ ಗ್ರಾಹಕರು ಇದರ ಲಾಭ ಪಡೆಯಬೇಕೆಂದು ಗೋಲ್ಡನ್ ಕ್ರೀಪರ್ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News