ನ. 22ರಿಂದ ನದಿ, ಪರಿಸರ ವ್ಯವಸ್ಥೆಯ ಸಂರಕ್ಷಣೆ, ಸುಸ್ಥಿರ ನಿರ್ವಹಣೆ ಕುರಿತ "ಲೇಕ್ ಸಮ್ಮೇಳನ-2018"

Update: 2018-11-21 17:26 GMT

ಮೂಡುಬಿದಿರೆ, ನ. 21: ಭಾರತೀಯ ವಿಜ್ಞಾನ ಸಂಸ್ಥೆ- ಪರಿಸರ ವಿಜ್ಞಾನ ಶಕ್ತಿ ಮತ್ತು ತೇವಾಂಶ ಸಂಶೋಧನಾ ಘಟಕ ಬೆಂಗಳೂರು ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಇದರ ಸಂಯುಕ್ತಾಶ್ರಯದಲ್ಲಿ ಭವಿಷ್ಯದಲ್ಲಿ ತೇವ ಭೂಮಿಗಳು ನಿರ್ವಹಿಸಲಿರುವ ಮಹತ್ತರ ಪಾತ್ರವನ್ನು ಮನದಟ್ಟು ಮಾಡುವ ದೃಷ್ಟಿಯಲ್ಲಿ 'ಸುಸ್ಥಿರ ಭವಿಷ್ಯಕ್ಕಾಗಿ ತೇವ ಭೂಮಿ ಹಾಗೂ ಪರಿಸರ ವ್ಯವಸ್ಥೆ" ಎಂಬ ವಿಷಯದಡಿ  2018 ರ ಎರಡನೇ ಲೇಕ್ ಸಮ್ಮೇಳನ ಆಳ್ವಾಸ್ ಕಾಲೇಜಿನ ವಿ.ಎಸ್ ಆಚಾರ್ಯ ವೇದಿಕೆಯಲ್ಲಿ ನ. 22 ರಿಂದ 24ರವರೆಗೆ ನಡೆಯಲಿದೆ.

ಈ ಸಮ್ಮೇಳನವು ಮುಖ್ಯವಾಗಿ ಪರಿಸರ ವ್ಯವಸ್ಥೆಯಲ್ಲಿ ನದಿಗಳ ಪಾತ್ರವನ್ನು ವಿಶೇಷವಾಗಿ ತಿಳಿಸಿಕೊಡಲಿದೆ. ಜೊತೆಗೆ ದುರ್ಬಲಗೊಳ್ಳುತ್ತರುವ ಪ್ರಕೃತಿ ವ್ಯವಸ್ಥೆಯಿಂದ ಅಪಾಯಕ್ಕೊಳಗಾಗುತ್ತಿರುವ ಆಹಾರ ಮತ್ತು ನೀರಿನ ಸುಸ್ಥಿರ ನಿರ್ವಹಣೆಯ ಬಗ್ಗೆಯೂ ಚರ್ಚೆಗಳು ನಡೆಯಲಿವೆ.

ಲೇಕ್ 2018 ಜ್ಞಾನವನ್ನು ನವೀಕರಿಸುವುದಷ್ಟೇ ಅಲ್ಲದೆ. ಸಾಮನ್ಯರು ಹಾಗೂ ವಿದ್ಯಾರ್ಥಿಗಳಿಗೆ ಜಾಗೃತಿಯನ್ನೂ ಮೂಡಿಸಲಿದೆ. ಹಲವು ಶಾಲೆಯ ವಿದ್ಯಾರ್ಥಿ ಗಳು ಪಾಲ್ಗೊಳ್ಳುವ ಅವಕಾಶ ಕಲ್ಪಿಸಲಾಗಿದ್ದು ಸುಮಾರು 300 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿಷಯಕ್ಕೆ ಸಂಬಂಧಪಟ್ಟ ಪ್ರಬಂಧಗಳನ್ನು ಮಂಡಿಸಲಿದ್ದಾರೆ.

ಅತ್ಯುತ್ತಮ ಪ್ರಬಂಧ ಮಂಡಿಸಿದ ವಿದ್ಯಾರ್ಥಿಗಳಿಗೆ 8-9-10 ನೇ ತರಗತಿಯ ಮತ್ತು ಪ್ರಥಮ ಪಿಯು, ದ್ವಿತೀಯ ಪಿಯು ಹಾಗೂ ಪದವಿ ವಿಭಾಗಗಳಲ್ಲಿ ಪ್ರಶಸ್ತಿಯನ್ನೂ ನೀಡಲಾಗುತ್ತದೆ. ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News