ಸಜೀಪನಡು ಹಿಫ್ಲುಲ್ ಕುರ್‌ಆನ್, ಮಹಿಳಾ ಶರೀಅತ್ ಕಾಲೇಜಿಗೆ 60 ಲಕ್ಷ ರೂ.: ಸಚಿವ ಝಮೀರ್ ಅಹ್ಮದ್

Update: 2018-11-21 17:44 GMT

ಮಂಗಳೂರು, ನ.21: ಸಜೀಪನಡುವಿನಲ್ಲಿ ನಿರ್ಮಿಸಲು ಉದ್ದೇಶಿಸಿದ ಸಜೀಪ ಉಸ್ತಾದ್ ಮೆಮೋರಿಯಲ್ ಎಜ್ಯುಕೇಶನಲ್ ಸೆಂಟರ್‌ನಿಂದ ನಡೆಸಲು ದ್ದೇಶಿಸಿದ ಹಿಫ್ಲುಲ್ ಕುರ್‌ಆನ್ ಹಾಗೂ ಮಹಿಳಾ ಶರೀಅತ್ ಕಾಲೇಜು ಕಟ್ಟಡಕ್ಕೆ ಸರಕಾರದಿಂದ 50 ಲಕ್ಷ ರೂ. ಹಾಗೂ ತನ್ನ ವೈಯಕ್ತಿಕ ನೆಲೆಯಿಂದ 10 ಲಕ್ಷ ರೂ. ನೀಡುವುದಾಗಿ ಆಹಾರ ಮತ್ತು ನಾಗರಿಕ ಪೂರೈಕೆ, ಹಜ್, ವಕ್ಫ್ ಹಾಗೂ ಅಲ್ಪಸಂಖ್ಯಾತ ಕಲ್ಯಾಣಾಭಿವೃದ್ಧಿ ಸಚಿವ ಝಮೀರ್ ಅಹ್ಮದ್ ಖಾನ್ ಭರವಸೆ ನೀಡಿದರು.

ಶೈಖುನಾ ಸಜೀಪ ಉಸ್ತಾದ್ ಮೆಮೋರಿಯಲ್ ಎಜ್ಯುಕೇಶನ್ ಸೆಂಟರ್‌ನ ನೂತನ ಕಟ್ಟಡಕ್ಕೆ ಸಚಿವರು ಇತ್ತೀಚೆಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್, ಸಂಸ್ಥೆಯು ನಡೆಸಲು ಉದ್ದೇಶಿಸಿದ ಸತ್ಕಾರ್ಯಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.

ಸಮಾರಂಭದಲ್ಲಿ ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಯು.ಕೆ. ಮೋನು, ಕೆಪಿಸಿಸಿ ಕಾರ್ಯದರ್ಶಿ ಜಿ.ಎ. ಬಾವ, ಉದ್ಯಮಿ ಎಸ್.ಎಂ. ಮುಸ್ತಫ, ಸಂಯುಕ್ತ ಜಮಾಅತ್ ಅಧ್ಯಕ್ಷ ಹಾಜಿ ಎಸ್.ಅಬ್ಬಾಸ್, ಕೇಂದ್ರ ಜುಮ್ಮಾ ಮಸೀದಿಯ ಅಧ್ಯಕ್ಷ ಹಾಜಿ ಅಬ್ದುಲ್ ರಝಾಕ್, ಜಮಾಅತ್ ಖತೀಬ ಅಸ್ಫಕ್ ಫೈಝಿ, ಜಮಾಅತ್ ಕಾರ್ಯದರ್ಶಿ ಎಸ್.ಕೆ. ಮುಹಮ್ಮದ್, ಅಂತರಾಷ್ಟ್ರೀಯ ಮನೋತಜ್ಞ ಡಾ.ಎಡಾಟ್ ಬಶೀರ್ ಪೈಯ್ಯನ್ನೂರು, ಸಜೀಪ ಉಸ್ತಾದ್ ಮೆಮೋರಿಯಲ್ ಎಜ್ಯುಕೇಶನಲ್ ಸೆಂಟರ್‌ನ ಅಧ್ಯಕ್ಷ ಎಸ್.ಪಿ. ಮುಹಮ್ಮದ್, ಕೋಶಾಧಿಕಾರಿ ಎಸ್.ಕೆ. ಸಿರಾಜ್, ನಾಸೀರ್ ಸಜೀಪ, ವಾಗ್ಮಿ ಖಲೀಲ್ ಹುದವಿ ಕೇರಳ ಹಾಗೂ ಇನ್ನಿತರ ಧಾರ್ಮಿಕ ಹಾಗೂ ಸಾಮಾಜಿಕ ಗಣ್ಯರು ಉಪಸ್ಥಿತರಿದ್ದರು.

ಶೈಖ್ ಮುಹಮ್ಮದ್ ಇರ್ಫಾನಿ ಪ್ರಸ್ತಾವನೆಗೈದರು. ಸಜೀಪ ಉಸ್ತಾದ್ ಮೆಮೋರಿಯಲ್ ಎಜ್ಯುಕೇಶನಲ್ ಸೆಂಟರ್‌ನ ಕಾರ್ಯದರ್ಶಿ ಆಸಿಪ್ ಕುನ್ನಿಲ್ ಸ್ವಾಗತಿಸಿದರು. ಎಸ್.ಅಬೂಬಕರ್ ಸಜೀಪ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News