ಶರೀಹತ್ ಸಮ್ಮೇಳನ ಯಶಸ್ಸುಗೊಳಿಸಲು ಮುಲ್ಕಿ ಪರಿಸರದ ಸಂಸ್ಥೆಗಳಗೆ ಜಮಾಅತ್ ಸಮಿತಿ ಕರೆ

Update: 2018-11-21 17:57 GMT

ಮುಲ್ಕಿ, ನ. 21: ಡಿ. 9ರಂದು ನೆಹರು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿರುವ ಬೃಹತ್ ಶರೀಹತ್ ಸಮ್ಮೇಳನವನ್ನು ಯಶಸ್ಸುಗೊಳಿಸುವಂತೆ ಮುಲ್ಕಿ ಪರಿಸರದ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಕರೆ ನೀಡಿದ್ದಾರೆ.

ಕೇಂದ್ರ ಶಾಫಿ ಜುಮಾ ಮಸೀದಿಯ ಸಭಾಂಗಣದಲ್ಲಿ ಒಟ್ಟು ಸೇರಿ ಈ ಬಗ್ಗೆ ನಿರ್ಣಯ ಕೈಗೊಂಡು ಮುಂದಿನ ದಿನಗಳಲ್ಲಿ ಪ್ರಚಾರ ಕಾರ್ಯ ನಡೆಸಲು ತೀರ್ಮಾನಿಸಲಾಯಿತು.

ಸಮ್ಮೇಳನದ ಪೋಸ್ಟರ್ ಪ್ರದರ್ಶಿಸುವ ಮೂಲಕ ಪ್ರಚಾರ ಕಾರ್ಯಕ್ಕೆ ಖತೀಬ್ ಯಸ್ ಬಿ ದಾರಿಮಿ ಚಾಲನೆ ನೀಡಿದರು. ಜಮಾತ್ ಅಧ್ಯಕ್ಷ ಇಕ್ಬಾಲ್ ಅಹ್ಮದ್ ಮಾತನಾಡಿದರು. 

ಕಾರ್ನಾಡ್ ಮಸೀದಿಯ ಖತೀಬ್ ಇಸ್ಮಾಯಿಲ್ ದಾರಿಮಿ, ಜಮಾಅತ್ ಕಾರ್ಯದರ್ಶಿ ಲಿಯಾಕತ್ ಅಲಿ, ಎಸ್ ಡಿ ಪಿ ಐ ಮುಖಂಡ ಇಬ್ರಾಹಿಮ್ ಹಾಜಿ ಕಾರ್ನಾಡ್, ನುಸ್ರತುಲ್ ಮಸಾಕೀನ್ ಅಧ್ಯಕ್ಷ ಅಮಾನುಲ್ಲಾ, ಯಂಗ್ ಮೆನ್ಸ್ ಅಧ್ಯಕ್ಷ ರಿಝ್ವಾನ್ ಕಾರ್ನಾಡ್, ಧಪ್ ಸಮಿತಿ ಅಧ್ಯಕ್ಷ ಹಕೀಂ ಕಾರ್ನಾಡ್, ರೇಂಜ್ ಮುಹಲ್ಲಿಂ ಅಧ್ಯಕ್ಷ ಬೈತಡ್ಕ ದಾರಿಮಿ, ರಝಾಕ್ ಅಝ್ಹರಿ, ಎಂ.ಕೆ. ಹಸೈನ್ ಪಾರೂಕ್ ಹಾಜಿ, ಖಾದರ್ ಮದೀನ, ಕಾಂಗ್ರಸ್ ಮುಖಂಡ ಪುತ್ತುಬಾವು, ಅಕ್ಬರ್ ಕಾರ್ನಾಡ್, ರಝಾಕ್ ಮಾಸಾಕೀನ್, ಹಸನ್ ಬಾವ ಮುಲ್ಕಿ, ಉಮರ್ ಹಾಜಿ ಕಾರ್ನಾಡ್, ಯಂ ಕೆ ಹಮೀದ್ ಮೊದಲಾದವರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News