ಕೊಡಾಜೆ : ಮೀಲಾದುನ್ನಬಿ ಕಾರ್ಯಕ್ರಮ, ನೂತನ ಕಟ್ಟಡ ಉದ್ಘಾಟನೆ

Update: 2018-11-22 06:58 GMT

ವಿಟ್ಲ, ನ. 22: ಕೊಡಾಜೆ ಬದ್ರಿಯ ಜುಮಾ ಮಸೀದಿ, ತರ್ಬಿಯತುಲ್ ಇಸ್ಲಾಂ ಮದರಸ ಹಾಗೂ ಹಿರಿಯ ವಿದ್ಯಾರ್ಥಿ ಸಂಘ ಕೊಡಾಜೆ ಇವುಗಳ ಜಂಟಿ ಆಶ್ರಯದಲ್ಲಿ ಮೀಲಾದುನ್ನಬಿ ಕಾರ್ಯಕ್ರಮ ಇಲ್ಲಿನ ಮದರಸ ವಠಾರದಲ್ಲಿ ನಡೆಯಿತು.

ಮದ್ರಸ ವಿದ್ಯಾರ್ಥಿಗಳ ವಿವಿಧ ಪ್ರತಿಭಾ ಸ್ಪರ್ಧೆಗಳು, ದಫ್ ಹಾಗೂ ಬುರ್ದಾ ಪ್ರದರ್ಶನ, ಕೊಡಾಜೆಯಿಂದ ನೇರಳಕಟ್ಟೆ ಮಸೀದಿ ತನಕ ಮೀಲಾದ್ ಜಾಥಾ ನಡೆಯಿತು.

ಮಸೀದಿ ವತಿಯಿಂದ  ನಿರ್ಮಿಸಲಾದ ನೂತನ ಕಟ್ಟಡವನ್ನು ಮಸೀದಿ ಗೌರವಾದ್ಯಕ್ಷ, ಸಮಸ್ತ ಕೇಂದ್ರ ಮುಶಾವರದ ಉಪಾಧ್ಯಕ್ಷ ಶೈಖುನಾ ಕೆ.ಪಿ.ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಉದ್ಘಾಟಿಸಿದರು. ಸಯ್ಯದ್ ಹಂಝ ಹಾದಿ ತಂಙಲ್ ಪಾಟ್ರಕೋಡಿ ದುಃಹಾ ನೆರವೇರಿಸಿದರು. ಮಸೀದಿ ಅದ್ಯಕ್ಷ ಹಾಜಿ ಇಬ್ರಾಹಿಂ ರಾಜ್ ಕಮಾಲ್ ಅಧ್ಯಕ್ಷತೆ ವಹಿಸಿದ್ದರು.

ಬಿ.ಜೆ.ಎಂ. ಖತೀಬ್ ಹಾಜಿ ಪಿ.ಕೆ.ಆದಂ ದಾರಿಮಿ, ಆರ್.ಐ.ಸಿ.ರೆಂಜಲಾಡಿಯ ಕೆ.ಆರ್.ಹುಸೈನ್ ದಾರಿಮಿ  ಮಾತನಾಡಿ ಶುಭಹಾರೈಸಿದರು. ಮಸೀದಿ ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಹಾಜಿ ಮುಹಮ್ಮದ್ ರಫೀಕ್ ಎಸ್.ಎಂ, ಕೋಶಾಧಿಕಾರಿ ಪಿ.ಕೆ.ಅಬ್ಬಾಸ್ ಪರ್ಲೊಟ್ಟು, ನಿಕಟಪೂರ್ವ ಅದ್ಯಕ್ಷ ಹಾಜಿ ಮುಹಮ್ಮದ್ ರಫೀಕ್ ಸುಲ್ತಾನ್, ನಿಕಟಪೂರ್ವ ಕಾರ್ಯದರ್ಶಿ ಇಬ್ರಾಹಿಂ ಕೆ. ಮಾಣಿ. ನಿಕಟಪೂರ್ವ ಕೋಶಾಧಿಕಾರಿ ಹಾಜಿ ಮುಹಮ್ಮದ್ ಅಶ್ರಫ್ ನೌಫಲ್, ಮದ್ರಸ ಹಿರಿಯ ವಿದ್ಯಾರ್ಥಿ ಸಂಘದ ಅದ್ಯಕ್ಷ ರಹೀಮ್ ಸುಲ್ತಾನ್, ಕಾರ್ಯದರ್ಶಿ ನವಾಝ್ ಭಗವಂತಕೋಡಿ ಹಾಗೂ ಮದ್ರಸ ಶಿಕ್ಷಕರು ಉಪಸ್ಥಿತರಿದ್ದರು.

ಕಾರ್ಯದರ್ಶಿ ಹಮೀದ್ ಪರ್ಲೊಟ್ಟು ಸ್ವಾಗತಿಸಿ, ವಂದಿಸಿದರು. ಉಪಾಧ್ಯಕ್ಷ ಲತೀಫ್ ನೇರಳಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News