ಲಂಡನ್‌ನ ವಿಲಾಸಿ ಮನೆ ಉಳಿಸುವ ಕಾನೂನು ಹೋರಾಟದಲ್ಲಿ ಮಲ್ಯಗೆ ಹಿನ್ನಡೆ
Update: 2018-11-22 20:26 IST
ಲಂಡನ್, ನ. 22: ಲಂಡನ್‌ನಲ್ಲಿರುವ ವಿಜಯ ಮಲ್ಯರ ಮನೆಯನ್ನು ಸ್ವಾಧೀನಪಡಿಸಿಕೊಳ್ಳಲು ಸ್ವಿಸ್ ಬ್ಯಾಂಕ್ ಯುಬಿಎಸ್ ಮುಂದಾಗಿದ್ದು, ಅದನ್ನು ಉಳಿಸಿಕೊಳ್ಳುವ ಕಾನೂನು ಹೋರಾಟದಲ್ಲಿ ಮಲ್ಯ ಬುಧವಾರ ಹಿನ್ನಡೆ ಅನುಭವಿಸಿದ್ದಾರೆ.
ಮನೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅವರ ಕಾನೂನು ತಂಡ ಮುಂದಿಟ್ಟ ಹೆಚ್ಚಿನ ವಾದಗಳನ್ನು ಬ್ರಿಟನ್ ಹೈಕೋರ್ಟ್ ತಿರಸ್ಕರಿಸಿದೆ.
ಮಧ್ಯ ಲಂಡನ್‌ನಲ್ಲಿರುವ ರೀಜಂಟ್ಸ್ ಪಾರ್ಕ್ ಸಮೀಪದ ಕಾರ್ನ್‌ವಾಲ್ ಟೆರೇಸ್‌ನಲ್ಲಿರುವ ಮನೆಯ ಆಧಾರದಲ್ಲಿ ಪಡೆಯಲಾಗಿದ್ದ 20.4 ಮಿಲಿಯ ಪೌಂಡ್ (ಸುಮಾರು 185 ಕೋಟಿ ರೂಪಾಯಿ) ಸಾಲವನ್ನು ಮಲ್ಯ ಹಿಂದಿರುಗಿಸದ ಹಿನ್ನೆಲೆಯಲ್ಲಿ, ಮನೆಯನ್ನು ಸ್ವಾಧೀನಪಡಿಸಲು ಬ್ಯಾಂಕ್ ಮುಂದಾಗಿದೆ.
ಪ್ರಕರಣದ ವಿಚಾರಣೆ ಮುಂದಿನ ವರ್ಷದ ಮೇ ತಿಂಗಳಲ್ಲಿ ನಡೆಯಬೇಕಾಗಿದೆಯಾದರೂ, ಹೈಕೋರ್ಟ್ ಬುಧವಾರ ಬ್ಯಾಂಕ್‌ಗೆ ಪೂರಕವಾದ ಹಲವಾರು ನಿಲುವುಗಳನ್ನು ತೆಗೆದುಕೊಂಡಿತು.