×
Ad

ಆಳ್ವಾಸ್‍ನಲ್ಲಿ ಸಾಮೂಹಿಕ ಯೋಗ

Update: 2018-11-22 21:25 IST

ಮೂಡುಬಿದಿರೆ, ನ. 22: ಪ್ರಕೃತಿ ಚಿಕಿತ್ಸಾ ಸಪ್ತಾಹದ ಅಂಗವಾಗಿ ಸಾಮೂಹಿಕ ಯೋಗಾಭ್ಯಾಸವನ್ನು ಗುರುವಾರ ಆಳ್ವಾಸ್ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನಲ್ಲಿ ಆಯೋಜಿಸಲಾಯಿತು. 

ಆಳ್ವಾಸ್ ಆನಂದಮಯ ಆರೋಗ್ಯಧಾಮದ ಸುಂದರ ಪ್ರಕೃತಿಯ ನಡುವೆ ಶಿಸ್ತು ಬದ್ಧವಾಗಿ ಸುಮಾರು 400 ರಷ್ಟು ವಿದ್ಯಾರ್ಥಿಗಳು ಯೋಗದ ಅಭ್ಯಾಸವನ್ನು ಕೈಗೊಂಡರು. ಭಾರತ ಪರಿಸರ ಸಚಿವಾಲಯದ ಸಲಹೆಗಾರ ಡಾ. ಆನಂದಿ ಸುಬ್ರಮಣ್ಯನ್ ಮುಖ್ಯ ಅತಿಥಿ ಭಾಗವಹಿಸಿದ್ದರು. ಆಳ್ವಾಸ್ ಶಿಕ್ಷಣ ಸಂಸ್ಥೆಯ ಟ್ರಸ್ಟಿ ವಿವೇಕ್ ಆಳ್ವ, ಆಡಳಿತಾಧಿಕಾರಿ ಡಾ. ಪ್ರಜ್ಞಾ ಆಳ್ವ, ಪ್ರಾಂಶುಪಾಲೆ ಡಾ. ವನಿತಾ ಶೆಟ್ಟಿ ಉಪಸ್ಥಿತರಿದ್ದರು. ದೀಕ್ಷಾ ಗೌಡ, ಚೈತ್ರಾ ಕಾರ್ಯಕ್ರಮ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News