×
Ad

ಮಂಗಳೂರು: ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಟ್ಯಾಕ್ಸಿ ಚಾಲಕ

Update: 2018-11-22 21:55 IST

ಮಂಗಳೂರು, ನ. 22: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾಮಗಾರಿ ನಡೆಯುತ್ತಿದ್ದ ಸಂದರ್ಭ ಗುರುವಾರ ಕ್ರೇನ್‌ನಿಂದ ಕಬ್ಬಿಣದ ತುಂಡು ಕಾಲಿಗೆ ಬಿದ್ದು ಕಾರ್ಮಿಕೊಬ್ಬರು ಗಂಭೀರ ಗಾಯಗೊಂಡಿದ್ದಾರೆ.

ಉತ್ತರ ಪ್ರದೇಶ ಮೂಲದ ಸಂತೋಷ್ (27) ಗಾಯಾಳು. ಬೆಳಗ್ಗೆ 11 ಗಂಟೆ ವೇಳೆಗೆ ಘಟನೆ ಸಂಭವಿಸಿದ್ದು, ಅವರ ಎಡ ಕಾಲಿಗೆ ಗಂಭೀರ ಸ್ವರೂಪದ ಗಾಯಾವಾಗಿದೆ.

ಸಿನಾನ್ ಮಾನವೀಯತೆ: ವಿಮಾನ ನಿಲ್ದಾಣದಲ್ಲಿ ಆಗಾಗ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಆದರೆ ಆ್ಯಂಬುಲೆನ್ಸ್ ವ್ಯವಸ್ಥೆ ಇಲ್ಲ. ಮಂಗಳೂರಿನಿಂದ ಆ್ಯಂಬುಲೆನ್ಸ್ ಬರಲು ಕನಿಷ್ಠ 15-20 ನಿಮಿಷ ಬೇಕು. ರಕ್ತಸ್ರಾವವಾಗುತ್ತಿರುವ ಸಂದರ್ಭ ತಕ್ಷಣ ಆಸ್ಪತ್ರೆಗೆ ಕರೆದೊಯ್ಯುವುದು ಪ್ರಮುಖವಾಗುತ್ತದೆ. ವಿಮಾನ ನಿಲ್ದಾಣದ ಪ್ರೀಪೇಯ್ಡಾ ಟ್ಯಾಕ್ಸಿ ಚಾಲಕ ಸಿನಾನ್ ತಕ್ಷಣ ಗಾಯಾಳುವನ್ನು ತನ್ನ  ಕಾರಿನಲ್ಲಿ ಕರೆದೊಯ್ದು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೆಲವು ದಿನಗಳ ಹಿಂದೆ ಗ್ರಾನೈಟ್ ಮೈಮೇಲೆ ಬಿದ್ದು ಕಾರ್ಮಿಕರೊಬ್ಬರು ಗಾಯಗೊಂಡಿದ್ದರು. ಅವರನ್ನೂ ಸಿನಾನ್ ಆಪದ್ಬಾಂಧವನಂತೆ ತಕ್ಷಣ ಆಸ್ಪತ್ರೆಗೆ ಕರೆ ತಂದು ದಾಖಲಿಸಿ, ಮಾನವೀಯತೆ ಮೆರೆದಿದ್ದರು ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News