×
Ad

ಹೊಸ ದಾಖಲೆ ಸೃಷ್ಟಿಸಿದ ಇಂಗಾಲದ ಡೈ ಆಕ್ಸೈಡ್ ಪ್ರಮಾಣ

Update: 2018-11-22 22:01 IST

ನ್ಯೂಯಾರ್ಕ್, ನ. 22: ಕಳೆದ ವರ್ಷ ವಾತಾವರಣದಲ್ಲಿರುವ ಇಂಗಾಲದ ಡೈ ಆಕ್ಸೈಡ್ ಪ್ರಮಾಣ ಹೊಸ ದಾಖಲೆ ಸೃಷ್ಟಿಸಿದೆ ಹಾಗೂ ಹೊರಸೂಸುವಿಕೆ ಪ್ರಮಾಣದಲ್ಲಿ ಯಾವುದೇ ಇಳಿಕೆಯಾಗಿಲ್ಲ ಎಂದು ವಿಶ್ವಸಂಸ್ಥೆಯ ವಿಶ್ವ ಹವಾಮಾನ ಸಂಘಟನೆ ಗುರುವಾರ ತಿಳಿಸಿದೆ.

ಪೆಟ್ರೋಲಿಯಂ ತೈಲ ಉರಿಯುವಿಕೆಯ ಉಪ ಉತ್ಪನ್ನವಾಗಿ ಇಂಗಾಲದ ಡೈ ಆಕ್ಸೈಡ್ ಉತ್ಪಾದನೆಯಾಗುತ್ತಿದೆ. ವಾತಾವರಣದಲ್ಲಿ ಈ ಅನಿಲದ ಹೆಚ್ಚುವಿಕೆ ಜಾಗತಿಕ ತಾಪಮಾನಕ್ಕೆ ಪ್ರಮುಖ ಕಾರಣವಾಗಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.

‘‘ವಿಜ್ಞಾನ ಸ್ಪಷ್ಟವಾಗಿ ಹೇಳುತ್ತಿದೆ. ಇಂಗಾಲದ ಡೈ ಆಕ್ಸೈಡ್ ಮತ್ತು ಇತರ ಹಸಿರುಮನೆ ಅನಿಲಗಳ ಉತ್ಪಾದನೆಯಲ್ಲಿ ಗಣನೀಯ ಕಡಿತವಾಗದಿದ್ದರೆ, ಹವಾಮಾನ ಬದಲಾವಣೆಯು ಭೂಮಿಯ ಮೇಲೆ ವಿನಾಶಕಾರಿ ಹಾಗೂ ಸರಿಪಡಿಸಲಾಗದಷ್ಟು ಹಾನಿಯನ್ನು ಉಂಟು ಮಾಡುತ್ತದೆ. ಕ್ರಮ ತೆಗೆದುಕೊಳ್ಳುವ ಅವಕಾಶ ಬಹುತೇಕ ಮುಚ್ಚಿಹೋಗಿದೆ’’ ಎಂದು ವಿಶ್ವ ಹವಾಮಾನ ಸಂಘಟನೆಯ ಮಹಾ ಕಾರ್ಯದರ್ಶಿ ಪೆಟ್ಟಾರಿ ತಾಲಸ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಕೈಗಾರಿಕಾ ಪೂರ್ವ ಕಾಲ, ಅಂದರೆ 1750ರ ಸುತ್ತಮುತ್ತ ವಾತಾವರಣದಲ್ಲಿ ಇದ್ದ ಇಂಗಾಲದ ಡೈ ಆಕ್ಸೈಡ್ ಮಟ್ಟಕ್ಕೆ ಹೋಲಿಸಿದರೆ ಈಗ ಅದರ ಪ್ರಮಾಣ 46 ಶೇಕಡದಷ್ಟು ಹೆಚ್ಚಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News